ಸವದತ್ತಿ: ಹಿರಿಯ ರಂಗ ಕಲಾವಿದ ನಾಡೋಜ ಪ್ರಶಸ್ತಿ ಪುರಸ್ಕೃತ ಏಣಗಿ ಬಾಳಪ್ಪನವರು ಶತವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸ್ಥಳೀಯ ರಂಗಾರಾಧನಾ ಸಾಂಸ್ಕೃತಿಕ ಸಂಘಟನೆ ಇತರ ಸಂಸ್ಥೆಗಳ ಸಹಯೋಗದಲ್ಲಿ ಅವರ ಜನ್ಮಶತಮಾನೋತ್ಸವ ಆಯೋಜಿಸಲಾಗಿದೆ.

ಹಿರಿಯ ಚೇತನ ಯಜಮಾನ ಬಾಳಪ್ಪನವರು ರಂಗಭೂಮಿಯ ಜೀವಂತ ದಂತ ಕಥೆಯಾಗಿದ್ದು, ಇವರನ್ನು ನಡೆದಾಡುವ ರಂಗಕೋಶ ಎಂದು ಗುರುತಿಸುವರು, ಭಾರತ ಸಾತಂತ್ರ್ಯ ಪೂರ್ವದಲ್ಲಿ ನಾಟಕಗಳ ಮೂಲಕ ಜನ ಜಾಗೃತಿಗೊಳಿಸಿದ ದೇಶಪ್ರೇಮಿಗಳಾಗಿದ್ದಾರೆ, ಸ್ವಾತಂತ್ರ್ಯದ ಕಿಚ್ಚು ವೀರರಾಣಿ ಕಿತ್ತೂರ ಚನ್ನಮ್ಮನವರ ಕಥೆ ಎಲ್ಲರಿಗೂ ಗೊತ್ತು. ಆದರೆ ಮೊದಲು ಪಟ್ಟದರಾಣಿ `ರುದ್ರಮ್ಮ ರಾಣಿ' ಕುರಿತು ನಾಟಕಗಳನ್ನು ಆಡುವ ಮೂಲಕ ವಿಶೇಷತೆ ಮೆರೆದಿದ್ದಾರೆ.

`ಶ್ರಿ ರಾಮ ಪಾದುಕಾ ಪಟ್ಟಾಭೀಷೇಕ', `ಜಗಜ್ಯೋತಿ ಬಸವೇಶ್ವರ' ನಾಟಗಳಲ್ಲಿ ಪಾತ್ರಗಳ ಮೂಲಕ ರಂಗಾಸಕ್ತ ರಲ್ಲಿ ಎಂದು ಮರೆಯದ ಮೆರುನಟರಾಗಿದ್ದು, ಬಾಳಪ್ಪನವರನ್ನು ಸಾಕ್ಷಾತ ಬಸವಣ್ಣನವರನ್ನು ಅವರಲ್ಲಿ ಕಂಡ ಅಭಿಮಾನಿಗಳು ಅತ್ಯಂತ ಪ್ರೀತಿಯಿಂದ ಗೌರವಿಸುತ್ತಿದ್ದರು. ರಂಗಭೂಮಿಯಿಂದ ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುವುದರೊಂದಿಗೆ ಇಂದಿಗೂ ಎಲ್ಲರ ಮನದಲ್ಲಿ ಇವರ ನೆನಪುಗಳು ಹಸಿರಾಗಿವೆ.

ಬಾಳಪ್ಪನವರು ಅನೇಕ ಸಂಘ ಸಂಸ್ಥೆಗಳನ್ನು ಕಟ್ಟುವುದರೊಂದಿಗೆ, ರಂಗಭೂಮಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ವೃತ್ತಿರಂಗಭೂಮಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ತರುವಲ್ಲಿ ಯಶಸ್ವಿಯಾದ ಇವರನ್ನು, ತಮ್ಮ ಸಂಸಾರಿಕ ಬದುಕಿನಲ್ಲಿ ಸಾರ್ಥಕತೆ ಕಂಡ ಮಹಾನವ್ಯಕ್ತಿಯಾಗಿದ್ದಾರೆ. ಇವರ ಸಾಧನೆಗೆ ನಾಡೋಜ, ನಾಟ್ಯಭೂಷಣಗಳಂತಹ ಉನ್ನತಮಟ್ಟದ ಪ್ರಶಸ್ತಿಗಳು ರಸಿ ಬಂದಿವೆ.

ಜನ್ನಶತಮಾನೋತ್ಸವ: ರಂಗಭೂಮಿ ಉಳಿಸಿ ಬೆಳೆಸುವಲ್ಲಿ ಇಡೀ ಜೀವನ ಸಮರ್ಪಿಸಿದ ನಾಟ್ಯಭೂಷಣ ಏಣಿಗಿ ಬಾಳಪ್ಪನವರು ಸವದತ್ತಿ ತಾಲ್ಲೂಕಿನವರು ಎಂಬುದೇ ಹೆಮ್ಮೆಯ ಸಂಗತಿಯಾಗಿದ್ದು, ಇವರು ನಮ್ಮಂದಿಗೆ ಇನ್ನೂ ಸಾಕಷ್ಟು ಕಾಲ ಇರುವದರೊಂದಿಗೆ ರಂಗಭೂಮಿ ಸೇವೆ ಮಾಡಲಿ ಎಂಬ ಮಹತ್ತರ ಉದ್ದೇಶದಿಂದ `ನಾಡೋಜ ಏಣಗಿ ಬಾಳಪ್ಪನವರ ಜನ್ಮಶತಮಾನೋತ್ಸವ ಆಯೋಜಿಸಲಾಗಿದೆ.

ಇದೇ 7 ರಂದು ಸಂಜೆ 6-30ಕ್ಕೆ ಇಲ್ಲಿನ ಶ್ರಿ ಲಕ್ಷ್ಮೀವೇಂಕಟೇಶ ಮಂಗಲ ಕಾರ್ಯಾಲಯದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎಸ್. ಪಾಟೀಲಪದಕಿ ವಹಿಸಿಲಿದ್ದು, ಶಾಸಕ ಆನಂದ ಮಾಮನಿ ಉದ್ಘಾಟಿಸುವರು. ನಾಡೋಜ ಏಣಗಿ ಬಾಳಪ್ಪನವರಿಗೆ ಸನ್ಮಾನ ನಡೆಯಲಿದೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ವಿದ್ಯಾವತಿ ಭಜಂತ್ರಿ, ಶಿವಾನಂದ ಹೂಗಾರ, ಮೋಹನ ಏಣಗಿ ಮುಂತಾದವರು ಉಪಸ್ಥಿತರಿರುವರು.

ನಂತರ ಭವ್ಯ ರಂಗಸಜ್ಜಿಕೆಯಲ್ಲಿ ಹೆಗ್ಗೋಡಿನ ಜನಮನದಾಟ ಇವರಿಂದ `ಬದುಕು ಬಯಲು' ನಾಟಕ ಪ್ರದರ್ಶವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.