ಹೊನ್ನಾಳಿ:  ತುಂಗಾ ಮತ್ತು ಭದ್ರಾ ನದಿ ಪಾತ್ರಗಳಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಡಿ ಮಳೆ ಪರಿಣಾಮ ಹೊನ್ನಾಳಿಯ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ನದಿಗೆ ಅಪಾರ ಪ್ರಮಾಣದ ನೀರು ಬರುತ್ತಿರುವುದರಿಂದ ನದಿಯ ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.

ನದಿ ದಂಡೆಯ ಆಂಜನೇಯ ದೇವಸ್ಥಾನದ ಬಳಿ ಇರುವ ಜಮೀನಿಗೆ ನೀರು ನುಗ್ಗಿದ್ದು, ನದಿಯ ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ಪಟ್ಟಣದ ತಗ್ಗುಪ್ರದೇಶಗಳಿಗೆ ನೀರು ಬರುವ ಅಪಾಯ ಇದೆ. ಪಟ್ಟಣದ ಬಂಬೂ ಬಜಾರ್, ಸಂತೆ ಮೈದಾನದ ಪ್ರದೇಶ, ಬಾಳರಾಜ್ ಘಾಟ್ ಸೇರಿದಂತೆ ಕೆಲವಾರು ಪ್ರದೇಶಗಳು ತೊಂದರೆಗೊಳಗಾಗಲಿವೆ.

ಸೋಮವಾರ ಸಂಜೆ 6ಕ್ಕೆ ನದಿ ನೀರಿನಮಟ್ಟ 9 ಮೀಟರ್ ತಲುಪಿತ್ತು. ಅಧಿಕ ನೀರು ಬರುತ್ತಿರುವುದರಿಂದ ರಾತ್ರಿ ವೇಳೆಗೆ 10-10.5 ಮೀಟರ್ ತಲುಪುವ ನಿರೀಕ್ಷೆ ಇದೆ. ಎಚ್ಚರಿಕೆ ಮಟ್ಟ 11 ಮೀಟರ್ ಆಗಿದ್ದು, 12 ಮೀಟರ್ ತಲುಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಚನ್ನಗಿರಿ: ಚದುರಿದಂತೆ ಮಳೆ
ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆ ಬಿಟ್ಟು ಬಿಟ್ಟು ಬೀಳುತ್ತಿದ್ದು, ಮಳೆಗಾಗಿ ದೇವರಲ್ಲಿ ಮೊರೆಯಿಡುತ್ತಿದ್ದ ರೈತರ ಮೊಗದಲ್ಲಿ ಒಂದಿಷ್ಟು ಮಂದಹಾಸ ಮೂಡಿದೆ.ಅದರಲ್ಲೂ ಕಾಕನೂರು, ದೇವರಹಳ್ಳಿ, ದೊಡ್ಡೇರಿಕಟ್ಟೆ, ನುಗ್ಗಿಹಳ್ಳಿ, ಗರಗ, ಗುಳ್ಳೆಹಳ್ಳಿ, ನಲ್ಲೂರು, ಹಿರೇಉಡ, ಕೊಂಡದಹಳ್ಳಿ, ವಿ. ರಾಮೇನಹಳ್ಳಿ, ಅಗರಬನ್ನಿಹಟ್ಟಿ, ಆಕಳಕಟ್ಟೆ ಮುಂತಾದ ಗ್ರಾಮಗಳಲ್ಲಿ ಉತ್ತಮವಾದ ಹಸಿ ಮಳೆ ಭಾನುವಾರ ಸಂಜೆ ಬಿದ್ದಿದೆ. ಈ ಭಾಗದಲ್ಲಿನ ಎಲ್ಲಾ ಬೆಳೆಗಳು ಈಗ ಹಸಿರಿನಿಂದ ಕಂಗೊಳಿಸುತ್ತಿವೆ.

ಇನ್ನುಳಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಚದುರಿದಂತೆ ಮಳೆ ಬಿದ್ದಿದ್ದು ರೈತರು ಸಂತಸಗೊಂಡಿದ್ದಾರೆ.
ಈಗ ಬಿದ್ದಿರುವ ಮಳೆಯಿಂದ ಕಳೆದ ಒಂದು ವಾರದ ಹಿಂದೆ ಬಿತ್ತನೆ ಮಾಡಿದ ಬೆಳೆಗಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಒಟ್ಟಾರೆ ಕೆರೆಕಟ್ಟೆಗಳು ತುಂಬುವಂತಹ ಮಳೆ ಬಾರದೇ ಇದ್ದರೂ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗುವಂತಹ ಹಸಿ ಮಳೆ ಬಿದ್ದಿದ್ದು, ರೈತರು ಭರದಿಂದ ಯೂರಿಯಾ ರಸಗೊಬ್ಬರ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು
ಹರಪನಹಳ್ಳಿ: ಸೋಮವಾರ ಮಧ್ಯಾಹ್ನ ಪ್ರತ್ಯಕ್ಷವಾಗುವ ಮೂಲಕ ಮಳೆ ಧಾರಕಾರವಾಗಿ ಸುರಿಯಿತು. ಮಧ್ಯಾಹ್ನ 2.30ರಿಂದಲೇ ಆರಂಭವಾದ ಮಳೆ ಸಂಜೆ 5ಗಂಟೆಯವರೆಗೂ ಸುರಿಯಿತು. ಹೀಗಾಗಿ ಪಟ್ಟಣದ ತಗ್ಗುಪ್ರದೇಶದಲ್ಲಿರುವ ಕೋಟೆ ಆಂಜನೇಯ ಬಡಾವಣೆಯ ಸುಮಾರು ಆರು ಮನೆಗಳಿಗೆ ನೀರು ನುಗ್ಗಿದೆ.

ಬಡಾವಣೆಯ ಕೆ. ಯಾಸೀನ್ ಎಂಬುವವರ ಮನೆ ಸಂಪೂರ್ಣ ಜಲಾವೃತವಾಗಿದ್ದು, ಅವರ ಕುಟುಂಬ ಆಸರೆಗಾಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದೆ. `2009ರಲ್ಲಿ ಸುರಿದ ಭಾರೀ ಮಳೆಯಿಂದಲೂ ನನ್ನ ಮನೆಯ ತುಂಬೆಲ್ಲಾ ಸಂಪೂರ್ಣ ನೀರು ತುಂಬಿಕೊಂಡಿತ್ತು. ನೆರೆಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆ ಸಿಗಬಹುದು ಎಂದು ಭಾರೀ ಭರವಸೆ ಹೊಂದಿದ್ದೆ. ಆದರೆ, ಫಲಾನುಭವಿ ಪಟ್ಟಿಯಲ್ಲಿ ನನ್ನ ಹೆಸರು ನಾಪತ್ತೆಯಾಗಿದೆ.

ಇದರಿಂದ ನನಗೆ ತುಂಬಾ ಬೇಸರವಾಗಿದೆ. ರೊಕ್ಕಕೊಟ್ಟು ಮನೆ ಖರೀದಿಸುವ ಇಲ್ಲವೇ; ಕಟ್ಟಿಕೊಳ್ಳುವ ಶಕ್ತಿ ನನ್ನಲ್ಲಿಲ್ಲ. ಹೀಗಾಗಿಯೇ ಇಲ್ಲಿಯೇ ಇರುವುದು ಅನಿವಾರ್ಯವಾಗಿದೆ ಎಂದು ತುಂಬಿಕೊಂಡಿರುವ ನೋವನ್ನು `ಪ್ರಜಾವಾಣಿ~ಯೊಂದಿಗೆ ಯಾಸೀನ್ ಬಿಚ್ಚಿಟ್ಟರು.

ಕಸಬಾ ಹಾಗೂ ಅರಸೀಕೆರೆ ಹೋಬಳಿಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಉಳಿದಂತೆ ತೆಲಿಗಿ ಹಾಗೂ ಚಿಗಟೇರಿ ಹೋಬಳಿ ವ್ಯಾಪ್ತಿಯ ಅಲ್ಲಲ್ಲಿ ಮಳೆಯಾಗಿದೆ.

ಉತ್ತಮ ಪ್ರಮಾಣದ ಮಳೆ
ಜಗಳೂರು: ತಾಲ್ಲೂಕಿನ ಎಲ್ಲಾ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.
ಕಸಬಾ, ಬಿಳಿಚೋಡು ಹಾಗೂ ಸೊಕ್ಕೆ ಹೋಬಳಿ ಸೇರಿದಂತೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿ ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆಬಿದ್ದಿದೆ. ಮಧ್ಯಾಹ್ನದಿಂದ ಸೊಕ್ಕೆ ಹೋಬಳಿ ಹಾಗೂ ಬಿಳಿಚೋಡು ಹೋಬಳಿಯಲ್ಲಿ ಹಾಗೂ ಹಳ್ಳಿಗಳಲ್ಲಿ ಹದವಾದ ಮಳೆಯಾಗಿದೆ.

ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ದೊಡ್ಡ ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.