ಬುಧವಾರ, ಮೇ 25, 2022
30 °C

ನನಸಾಗದ ಶುದ್ಧ ನೀರಿನ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ ವಾಯುನೆಲೆ: ಎರಡು ವರ್ಷಗಳಿಗೊಮ್ಮೆ ನಡೆಯುವ ‘ಏರೊ ಇಂಡಿಯಾ’ ಪ್ರದರ್ಶನದ ಪ್ರಮುಖ ಆಕರ್ಷಣೆ ಎನಿಸಿದ್ದ ಉದ್ಯಮಿಗಳ (ಬಿ2ಬಿ) ಸಭೆ ಈ ಬಾರಿಯ ಪ್ರದರ್ಶನದಲ್ಲಿ ನಡೆಯಲೇ ಇಲ್ಲ. ಕೊನೆ ಗಳಿಗೆಯಲ್ಲಿ ಸಭೆಯನ್ನು ರದ್ದುಪಡಿಸಿದ್ದು ಉದ್ಯಮಿಗಳಲ್ಲಿ ನಿರಾಶೆ ಮೂಡಿಸಿತು.ದೇಶೀಯ ವೈಮಾಂತರಿಕ್ಷ ಉದ್ಯಮವನ್ನು ಬಲಪಡಿಸುವ ದೃಷ್ಟಿಯಿಂದ ರಕ್ಷಣಾ ಸಚಿವಾಲಯ ಹಾಗೂ ಭಾರತೀಯ ಕೈಗಾರಿಕೆಗಳ ಒಕ್ಕೂಟವು (ಸಿಐಐ) ಈ ಪ್ರದರ್ಶನವನ್ನು ಆಯೋಜಿಸಿದ್ದವು. ಯುದ್ಧವಿಮಾನಗಳು ಹಾಗೂ ಪ್ರಯಾಣಕ್ಕಾಗಿ ಬಳಸುವ ವಿಮಾನಗಳ ಪ್ರದರ್ಶನ, ಇವುಗಳ ತಯಾರಿಕಾ ಕಂಪೆನಿಗಳ ಮಳಿಗೆಗಳು ಹಾಗೂ ಬಿಡಿಭಾಗಗಳನ್ನು ಪೂರೈಸುವ ಕಂಪೆನಿಗಳು ಪ್ರದರ್ಶನದಲ್ಲಿ ಮಳಿಗೆಗಳನ್ನು ತೆರೆದಿದ್ದವು.ವಿವಿಧ ಕಂಪೆನಿಗಳ ಜೊತೆ ನೇರ ಸಂಪರ್ಕ ಸಾಧಿಸುವುದು ಹಾಗೂ ವ್ಯಾಪಾರ ಕುದುರಿಸುವುದು ಪ್ರತಿಯೊಂದು ಕಂಪೆನಿಗಳ ಬಯಕೆ. ಇದರ ನಿಮಿತ್ತ ಪ್ರದರ್ಶನದ ನಾಲ್ಕನೇ ದಿನವಾದ ಶನಿವಾರ ಸಿಐಐ ಉದ್ಯಮಿಗಳ ಸಭೆಯನ್ನು ನಿಗದಿಪಡಿಸಿತ್ತು. ಇದರ ಬಗ್ಗೆ ಸಾಕಷ್ಟು ಪ್ರಚಾರವನ್ನೂ ಕೈಗೊಳ್ಳಲಾಯಿತು. ಆದರೆ, ಕೊನೆಯ ಕ್ಷಣ ಸಭೆಯನ್ನು ರದ್ದುಪಡಿಸಲಾಯಿತು. ‘ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೂಡಿಕೆ ಹರಿದುಬರಲಿ ಎನ್ನುವ ಮುಖ್ಯ ಉದ್ದೇಶದಿಂದಲೇ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆದರೆ ಇಲ್ಲಿ ಉದ್ಯಮಿಗಳ ಸಭೆಯನ್ನೇ ರದ್ದುಪಡಿಸಿರುವುದು ಬೇಸರ ತಂದಿದೆ’ ಎಂದು ಪ್ರದರ್ಶನದಲ್ಲಿ ಮಳಿಗೆ ತೆರೆದಿರುವ ಉದ್ಯಮಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.ಸಭೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಹಲವು ಉದ್ಯಮಿಗಳು ಸ್ಥಳಕ್ಕೆ ಆಗಮಿಸಿ ವಿಚಾರಿಸುತ್ತಿದ್ದರು. ರದ್ದಾಗಿರುವ ವಿಷಯ ಹಾಗೂ ತಮಗೆ ತಿಳಿಸುವಲ್ಲಿ ವಿಳಂಬ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂತು. ‘ಸಭೆಯನ್ನು ರದ್ದುಪಡಿಸಿರುವುದಕ್ಕೆ ನಿಖರ ಮಾಹಿತಿಯನ್ನೂ ಸಿಐಐ ಪದಾಧಿಕಾರಿಗಳು ನೀಡುತ್ತಿಲ್ಲ. ಸುರಕ್ಷತೆ ದೃಷ್ಟಿಯಿಂದ ರಕ್ಷಣಾ ಇಲಾಖೆಯವರು ಅನುಮತಿ ನಿರಾಕರಿಸಿದ್ದಾರೆ ಎಂದು ಮಾತ್ರ ಹೇಳುತ್ತಿದ್ದಾರೆ. ಇದಕ್ಕೆ ರಕ್ಷಣಾ ಇಲಾಖೆಯವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅವರು ದೂರಿದರು.ಇನ್ನೊಂದೆಡೆ ಉದ್ಯಮಿಗಳ ಸಭೆಗೆ ಬಹುತೇಕ ವಿದೇಶಿ ಕಂಪೆನಿಗಳು ಉತ್ಸಾಹ ತೋರದಿರುವುದರಿಂದ ಸಭೆ ನಡೆಸಲಾಗಲಿಲ್ಲ ಎಂಬ ಮಾತು ಕೇಳಿಬಂತು.

‘ಸಭೆ ನಡೆದಿದ್ದರೆ ಸಣ್ಣ ಹಾಗೂ ಮಧ್ಯಮ ಕಂಪೆನಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಕುದುರಿಸಲು ಸಹಕಾರಿಯಾಗುತ್ತಿತ್ತು. ಆದರೆ ಆ ರೀತಿ ನಡೆಯದಿರುವುದು ನಿರಾಸೆ ಮೂಡಿಸಿದೆ’ ಎನ್ನುವುದು ಸ್ಥಳೀಯ ಉದ್ಯಮಿಗಳ ಕೊರಗು.ಈ ಮೇಳದಲ್ಲಿ ಸುಮಾರು 680 ವಿದೇಶಿ ಕಂಪೆನಿಗಳು ಹಾಗೂ 295 ಸ್ವದೇಶಿ ಕಂಪೆನಿಗಳು ಭಾಗವಹಿಸಿವೆ. ಬೆಂಗಳೂರಿನ ಸುತ್ತಮುತ್ತ ಇರುವ ಹಲವಾರು ಸಣ್ಣ ಹಾಗೂ ಮಧ್ಯಮ ಕಂಪೆನಿಗಳ ಸಾವಿರಾರು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.