ಗುರುವಾರ , ಜನವರಿ 23, 2020
23 °C

ನನ್ನ ಕೆಲಸ ಒಪ್ಪಿಕೊಂಡರೆ ಸಾಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪಕ್ಷದಲ್ಲಿರುವ ಎಲ್ಲರೂ ನನ್ನನ್ನು  ಒಪ್ಪಿಕೊಳ್ಳಬೇಕು ಎಂದು ಬಯಸುವುದಿಲ್ಲ. ಆದರೆ ಅವರು ನಾನು ಮಾಡಿರುವ ಕೆಲಸಗಳನ್ನು ಒಪ್ಪಿಕೊಂಡರೆ ಸಾಕು. ರಾಜಕಾರಣವೇ ಹೀಗೆ, ಒಬ್ಬೊಬ್ಬರಿಂದ ಒಂದೊಂದು ಮಾತು ಬರುತ್ತದೆ...~- `ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ನಿಮ್ಮನ್ನು ಕೆಳಗಿಳಿಸಲಾಗುತ್ತದೆ ಎನ್ನುವ ಮಾತು ಎಷ್ಟು ನಿಜ~ ಎಂಬ ಸುದ್ದಿಗಾರರ ಪ್ರಶ್ನೆಗೆ ಡಾ.ಜಿ. ಪರಮೇಶ್ವರ್ ಅವರು ನೀಡಿದ ಉತ್ತರ ಇದು. ಪಕ್ಷದ ಕಚೇರಿಯಲ್ಲಿ `ಕೆಪಿಸಿಸಿ ವೃತ್ತಿಪರರ ಘಟಕ~ದ ವೆಬ್‌ಸೈಟ್‌ಗೆ ಮಂಗಳವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ವೆಬ್‌ಸೈಟ್‌ಗೆ ಚಾಲನೆ: ಕೆಪಿಸಿಸಿ ವೃತ್ತಿಪರರ ಘಟಕದ ವೆಬ್‌ಸೈಟ್‌ಗೆ (www.kpccpc.com)  ಚಾಲನೆ ನೀಡಿದ ಪರಮೇಶ್ವರ್, `ಪ್ರದೇಶ ಕಾಂಗ್ರೆಸ್ ಸಮಿತಿಗಳ ಪೈಕಿ ವೃತ್ತಿಪರರ ಘಟಕವನ್ನು ಪ್ರಥಮವಾಗಿ ಆರಂಭಿಸಿದ್ದು ಕೆಪಿಸಿಸಿ. ಈ ಘಟಕಕ್ಕೆ ಶೀಘ್ರದಲ್ಲೇ ಪದಾಧಿಕಾರಿಗಳ ನೇಮಕ ಆಗುತ್ತದೆ~ ಎಂದು ತಿಳಿಸಿದರು. ಘಟಕದ ಸದಸ್ಯರಾದ ಸುದರ್ಶನ್, ಗಣೇಶ್, ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)