ಮಂಗಳವಾರ, ಜೂನ್ 22, 2021
27 °C

ನಮ್ಮ ಸಂಸದ, ನಮ್ಮ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಮಶೀಲತೆಗೆ ಒತ್ತು ಕೊಡಬೇಕು

ಬ್ಯಾಂಕ್‌ಗಳಲ್ಲಿರುವ ಭದ್ರತಾ ರಹಿತಾ ಸಾಲ, ಜಂಟಿ ಬಾಧ್ಯತಾ ಸಾಲದಂಥ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವ ಸಂಸದರು ನಮಗೆ ಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಕ್ಷೇತ್ರದ ಆರ್ಥಿಕ ಅಭಿವೃದ್ಧಿಗಾಗಿ ಚಿಕ್ಕಬಳ್ಳಾಪುರ– ಕೋಲಾರ ಕ್ಷೇತ್ರದ ಸಂಸದರ ಮಾದರಿಯಲ್ಲಿ ಬಳಸಿಕೊಳ್ಳಬೇಕು.ಬದುಕಿನಲ್ಲಿ ಮುಂದೆ ಬರಬೇಕು ಎಂಬ ಛಲ ಇರುವ ಯುವಕರ ಉತ್ಸಾಹವನ್ನಷ್ಟೇ ಗಮನಿಸಿ ತರಬೇತಿ– ಸಾಲ ಸೌಲಭ್ಯ ನೀಡಬೇಕು. ದೆಹಲಿ ಮಟ್ಟದಲ್ಲಿ ವಿತ್ತ ಸಚಿವಾಲಯದ ಮೇಲೆ ಒತ್ತಡ ಹೇರಿ, ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಹಣಕಾಸು ಯೋಜನೆಗಳನ್ನು ಮಂಜೂರು ಮಾಡಿಸಬೇಕು.ಶೂನ್ಯದಿಂದ ಆರಂಭಿಸಿ ಬೃಹತ್ತಾಗಿ ಬೆಳೆದವರನ್ನು ಗುರುತಿಸಿ, ಜಿಲ್ಲೆಗೆ ಅವರ ಅನುಭವದ ಲಾಭ ದಕ್ಕಿಸಿಕೊಡಬೇಕು. ಅಂಥವರೊಡನೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ‘ಹಿಂದೆ ನಾನು ಬಡವನಾಗಿದ್ದೆ. ಸಮಾಜ– ಸರ್ಕಾರದ ನೆರವಿನಿಂದ ಇಂದು ದೊಡ್ಡ ಉದ್ಯಮಿಯಾಗಿದ್ದೇನೆ. ಇನ್ನೂ ೧೦ ಜನರನ್ನು ನನ್ನಂತೆ ಬೆಳೆಸುತ್ತೇನೆ’ ಎಂಬ ಮನಸ್ಸು ಯುವ ಉದ್ಯಮಿಗಳಿಗೆ ಬರುವಂತೆ ಮಾಡಬೇಕು.

–ರವಿ, ಅಧ್ಯಕ್ಷರು, ಫ್ರೆಂಡ್ಸ್ ಗ್ರೂಪ್, ಕೊರಟಗೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.