ಗುರುವಾರ , ಮಾರ್ಚ್ 4, 2021
30 °C
ಪದಕ ಪಟ್ಟಿ

ನರಸಿಂಗ್ ಭವಿಷ್ಯ ಇಂದು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಗ್ ಭವಿಷ್ಯ ಇಂದು ನಿರ್ಧಾರ

ರಿಯೊ ಡಿ ಜನೈರೊ (ಪಿಟಿಐ):  ಕ್ರೀಡಾ ನ್ಯಾಯಾಲಯವು ಗುರುವಾರ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅವರ ವಿಚಾರಣೆ ನಡೆಸಲಿದೆ.ಅವರು ಹೋದ ತಿಂಗಳು ಉದ್ದೀಪನ ಮದ್ದು ಸೇವನೆ ಆರೋಪ ದಲ್ಲಿ  ಸಿಲುಕಿದ್ದರು. ನಂತರ ಅವರನ್ನು ನಿರ್ದೋಷಿ ಎಂದು ನಾಡಾ ಘೋಷಿಸಿತ್ತು. ಆದರೆ, ವಾಡಾ (ವಿಶ್ವ ಉದ್ದೀಪನ ಮದ್ದು ತಡೆ ಘಟಕ) ನಾಡಾದ ತೀರ್ಪನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಿದೆ. ಆಗಸ್ಟ್‌ 19ರಂದು ನರಸಿಂಗ್ ರಿಯೊ ಒಲಿಂಪಿಕ್ಸ್‌ನ 74 ಕೆಜಿ ವಿಭಾಗದಲ್ಲಿ  ಸ್ಪರ್ಧಿಸಲಿದ್ದಾರೆ. ಆದರೆ ಕ್ರೀಡಾ ನ್ಯಾಯಾಲಯವು  ತಪ್ಪಿತಸ್ಥ ಎಂದು ಘೋಷಿಸಿದರೆ ಒಟ್ಟು ನಾಲ್ಕು ವರ್ಷಗಳ ನಿಷೇಧ ಶಿಕ್ಷೆಯನ್ನು ಅವರು ಅನುಭವಿಸಬೇಕಾಗುತ್ತದೆ. ಆದ್ದರಿಂದ ರಿಯೊ ಸ್ಪರ್ಧೆಯ ಅವಕಾಶವನ್ನೂ ಅವರು ಕಳೆದುಕೊಳ್ಳುವ ಸಾಧ್ಯತೆ ಇದೆ.‘ನರಸಿಂಗ್ ತಪ್ಪಿತಸ್ಥ ಅಲ್ಲ ಎಂದು ಸಾಬೀತುಪಡಿಸಲು ಪೂರಕವಾದ ಎಲ್ಲ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಅವರು ನಿರ್ದೋಷಿ ಯಾಗಿ ಹೊರಹೊಮ್ಮಲಿದ್ದಾರೆ ಮತ್ತು ರಿಯೊದಲ್ಲಿ ಭಾರತಕ್ಕೆ ಪದಕದ ಕಾಣಿಕೆ ನೀಡಲಿದ್ದಾರೆ. ನಮ್ಮ ಸಂಸ್ಥೆಯೂ (ಡಬ್ಲ್ಯುಎಫ್‌ಐ) ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ’ ಎಂದು  ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.‘ಬ್ರೆಜಿಲ್ ಕಾಲಮಾನದ ಪ್ರಕಾರ ಬೆಳಿಗ್ಗೆ 11 ಗಂಟೆಗೆ ರಿಯೊದ ಹೋಟೆಲ್‌ ವೊಂದರಲ್ಲಿ ವಿಚಾರಣೆ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.