ಭಾನುವಾರ, ಮೇ 16, 2021
28 °C

ನವಲಗುಂದ: ವೀರಗಲ್ಲಿಗೆ ಮುಖ್ಯಮಂತ್ರಿ ಗೌರವಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: ವೀರಗಲ್ಲಿಗೆ ಮುಖ್ಯಮಂತ್ರಿ ಗೌರವಾರ್ಪಣೆ

ನವಲಗುಂದ: ರೈತ ಬಂಡಾಯದಲ್ಲಿ ಹುತಾತ್ಮನಾಗಿದ್ದ ಬಸಪ್ಪ ಲಕ್ಕುಂಡಿ ವೀರಗಲ್ಲು ಸ್ಮಾರಕಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ಗೌರವಾರ್ಪಣೆ ಸಲ್ಲಿಸಿದರು.ಗದಗ ಜಿಲ್ಲೆಯ ನರಗುಂದದಲ್ಲಿ ಏರ್ಪಡಿಸಿದ್ದ ವಿವಿಧ ಕಾಮಕಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗದ ಮಧ್ಯದಲ್ಲಿ ಸ್ಮಾರಕಕ್ಕೆ ಗೌರವ ಸಲ್ಲಿಸಿ ಪ್ರಯಾಣ ಬೆಳೆಸಿದರು.ಸಚಿವ ಸಿ.ಸಿ. ಪಾಟೀಲ, ಡಾ. ಎಂ.ಬಿ. ಮುನೇನಕೊಪ್ಪ, ಶ್ರೀಕಾಂತ ಪಾಟೀಲ, ಈರಣ್ಣ ಚವಡಿ, ಜಿ.ಪಂ. ಸದಸ್ಯ ಸುರೇಶ ಗಾಣಿಗೇರ, ಮಹಾದೇವಿ, ಶಂಕ್ರಣ್ಣ ಅವರಾದಿ ಉಪಸ್ಥಿತರಿದ್ದರು. ನಗರವನ್ನು ಪ್ರವೇಶಿಸುತ್ತಿದ್ದಂತೆ ಮುಖ್ಯಮಂತ್ರಿಗೆ ಬಿಜೆಪಿ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.