ಶನಿವಾರ, ಮೇ 8, 2021
27 °C

ನಾಗಲೋಟಿಮಠ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಡಾ. ಸ.ಜ. ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನ ಹಾಗೂ ನೇಸರಗಿಯ ರಾಜೀವ ಗ್ರಾಮೀಣ ಯುವ ಅಭಿವೃದ್ಧಿ ಸಂಸ್ಥೆ ನೀಡುವ 2011-12ನೇ ಸಾಲಿನ ಡಾ. ಸ.ಜ. ನಾಗಲೋಟಿಮಠ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರನ್ನು ಪ್ರಕಟಿಸಲಾಗಿದೆ.ರಾಜ್ಯ ಮಟ್ಟದ ಪ್ರಶಸ್ತಿಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ಎಸ್. ಮನೋಹರ, ಶಿರಸಿ ತಾಲ್ಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಪ್ರೌಢಶಾಲೆ ಶಿಕ್ಷಕಿ ಮಹಾದೇವಿ ನಾಗೇಂದ್ರ ಮಾರ್ಕಂಡೆ, ಅಥಣಿ ತಾಲ್ಲೂಕಿನ ಕಾತ್ರಾಳದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅರುಣಕುಮಾರ ರಾಜಮಾನೆ, ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಪ್ರೌಢಶಾಲೆ ಶಿಕ್ಷಕ ಡಿ. ಕೃಷ್ಣ ಚೈತನ್ಯ, ವಿಜಾಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ವಿ. ಬಾಬಾನಗರ, ಮಂಡ್ಯ ಜಿಲ್ಲೆಯ ಬಿ. ಹೊಸೂರಿನ ಸರ್ಕಾರಿ ಪ್ರೌಢಶಾಲೆಯ ನಂಜರಾಜು ಸಿ. ಎಲ್ ಅವರನ್ನು ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಬೈಲಹೊಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿವಟಗುಂಡಿಯ ಶಂಕರ ಕುಂಬಾರ, ಹುಕ್ಕೇರಿಯ ಕೆ.ಜಿ. ಎಸ್. ಪಾಶ್ಚಾಪುರ ಶಾಲೆಯ ಎಸ್.ಎ. ಮಿರ್ಜಾ ನಾಯ್ಕ, ಲಗಮಣ್ಣ ಚಿಕ್ಕೋಡಿಯ ಕೆನಲಕೊಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಲಗಮಣ್ಣ ದೊಡಮನಿ, ಕಣಬರಗಿಯ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಕುಮಾರಸ್ವಾಮಿ ಚರಂತಿಮಠ, ದೇವಗಣಹಟ್ಟಿಯ ಸರ್ಕಾರಿ ಕಿರಿಯ ಮರಾಠಿ ಪ್ರಾಥಮಿಕ ಶಾಲೆಯ ಮಲ್ಲೇಶ ಜೀರಗೆ, ಯಾದವಾಡದ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಮಲ್ಲಿಕಾರ್ಜುನ ಹುಲಗಬಾಳಿ, ಹೊಣ್ಣಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್.ಎ. ಪತ್ತಾರ, ಹಿಂಡಲಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಲಜಾ ಡಿ. ಭಟ್ಟ, ಕಲಾಲಗುಡ್ಡದ ಸ.ಕ.ಹಿ.ಪ್ರಾ. ಶಾಲೆಯ ಚಂದ್ರಪ್ಪ ಪರಸಣ್ಣವರ, ಚಚಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈರಪ್ಪ ಕಾಜಗಾರ, ಬೇವಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಆರ್.ಎಫ್. ಮಾಗಿ, ದೇವಲಾಪುರದ ಸರ್ಕಾರಿ ಪ್ರೌಢ ಶಾಲೆಯ ಗಾಯತ್ರಿ ಎಂ. ಪತ್ತಾರ ಅವರನ್ನು ಜಿಲ್ಲಾ ಮಟ್ಟದ ಡಾ. ಸಜನಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.