ನಾಟಕ ಪ್ರದರ್ಶನ
ಲಯ
ರಂಗಾವತಾರ: ಭಾನುವಾರ ‘ಲಯ’ (ರಚನೆ: ರಾಘವೇಂದ್ರ ಪಾಟೀಲ. ದೃಶ್ಯರೂಪ, ವಿನ್ಯಾಸ, ಸಂಗೀತ ಹಾಗೂ ನಿರ್ದೇಶನ:
ಕೃಷ್ಣಮೂರ್ತಿ ಕವತ್ತಾರ್) ನಾಟಕ ಪ್ರಯೋಗ.ಮನುಷ್ಯ ತಂತ್ರಜ್ಞಾನದ ಅಹಂನಲ್ಲಿ ಪ್ರಕೃತಿಯ ಲಯ ಮೀರಿ ಅಹಂಕಾರಿಯಾಗಿ ಪ್ರಕೃತಿ ವಿರೋಧಿಯಾಗಿ ಬದುಕುತ್ತಾ ತನ್ನೊಳಗೆ ಸಂಬಂಧಗಳ ಬರ ಅನುಭವಿಸುತ್ತಾನೆ.
ಆದರೆ ಮನುಷ್ಯ ಸಮಾಜ ಮುಂದುವರಿಯಲು ಮತ್ತೆ ಆತ ಪ್ರಕೃತಿಯೊಂದಿಗಿನ ಲಯ ಅರಿತು ಬದುಕನ್ನು ಪುನಃ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಇಲ್ಲವಾದಲ್ಲಿ ಸರ್ವನಾಶ ಎಂಬ ಸತ್ವಪೂರ್ಣವಾದ ತಿರುಳು ಹೊಂದಿರುವ ಈ ಕಥೆಗೆ ವಿಭಿನ್ನವಾದ ದೃಶ್ಯ ರೂಪ ನೀಡಲಾಗಿದೆ.
ಸ್ಥಳ: ಡಾ. ಎಚ್ಚೆನ್ ಕಲಾಕ್ಷೇತ್ರ, ನ್ಯಾಷನಲ್ ಕಾಲೇಜು, ಜಯನಗರ 7ನೇ ಬ್ಲಾಕ್. ಸಂಜೆ 7.
ಸದಾರಮೆ
ಶ್ರೀ ರವೀಂದ್ರ ನಾಟಕ ಸಭಾ: ಶನಿವಾರ 7ನೇ ವರ್ಷದ ರಾಜ್ಯ ಮಟ್ಟದ ನಾಟಕೋತ್ಸವ ಪ್ರಯುಕ್ತ ‘ಸದಾರಮೆ’ ಹಾಸ್ಯ ನಾಟಕ ಪ್ರದರ್ಶನ (ಸಂಗೀತ, ನಿರ್ದೇಶನ: ವಿ. ಹರೀಶ್ ಕುಮಾರ್).
ಸ್ಥಳ: ಶ್ರೀಮತಿ ಹೊನ್ನಮ್ಮ ಸಾವಂದಾಚಾರ್ಯರ ರಂಗಮಂದಿರ, ವಿಶ್ವಕರ್ಮನಗರ, ತಗಚಗುಪ್ಪೆ. ಕುಂಬಳಗೋಡು ಸಮೀಪ. ಮಧ್ಯಾಹ್ನ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.