ಕರ್ನಾಟಕ ಸಂಗೀತದಲ್ಲಿ ಆಲತ್ತೂರು ಸಹೋದರರಿಗೆ ಒಂದು ಗೌರವಾನ್ವಿತ ಸ್ಥಾನ ಎಂದೂ ಮೀಸಲಾಗಿರುತ್ತದೆ. ಅವರ ಸಂಗೀತದ ಶಾಸ್ತ್ರೀಯತೆ ಮತ್ತು ಘನತೆ ಹಸುರಾದುದು. ಅವರ ಗಾಯನವು ಸಾಧಕರಿಗೆ ಎಂದೂ ಕೈದೀವಿಗೆ. ಅವರಿಬ್ಬರಲ್ಲಿ ಒಬ್ಬರಾದ ಆಲತ್ತೂರು ಶ್ರೀನಿವಾಸಯ್ಯರ್ ಅವರ ಜನ್ಮ ಶತಾಬ್ದಿಯನ್ನು ಕಳೆದ ಶನಿವಾರ ಅನನ್ಯ ಸಭಾಂಗಣದಲ್ಲಿ ಆಚರಿಸಲಾಯಿತು. ಶ್ರೀನಿವಾಸಯ್ಯರ್ ಅವರ ಜೀವನ, ಸಾಧನೆಗಳನ್ನು ಭಾಷಣಕಾರರು ನೆನೆದು, ಶ್ರದ್ಧಾಂಜಲಿ ಅರ್ಪಿಸಿದರು.

ನಂತರ ನಡೆದ ಗಾಯನ ಕಛೇರಿ ಶ್ರೀನಿವಾಸಯ್ಯರ್ ಅವರಿಗೆ ನಾದಾಂಜಲಿ ಅರ್ಪಿಸುವಂತೆಯೇ ಇತ್ತು. ಹಾಡಿದ ಬೆಂಗಳೂರು ವಿಜಯಲಕ್ಷ್ಮೀ ಕೇಳುಗರಿಗೆ ಹೊಸಬರೇನಲ್ಲ. ಅನೇಕರಲ್ಲಿ ಕಲಿತು ಆಲತ್ತೂರು ಅವರಿಂದಲೂ ಕೆಲ ವರ್ಷ ಶಿಕ್ಷಣ ಪಡೆದವರು. ನಿತ್ಯಾನಂದಂ ಪರಮಸುಖಂ ಶ್ಲೋಕದ ಮೂಲಕ ವಂದಿಸಿ, ಸುಪರಿಚಿತ `ಚಲಮೇ~ದಿಂದ ಕಛೇರಿಯನ್ನು ಸಾವಧಾನವಾಗಿ ಪ್ರಾರಂಭಿಸಿದರು.

`ರಾಮಾನೀಪೈ ತನಕು~ ಕೀರ್ತನೆಗೆ ಕಿರುಸ್ವರ ಪ್ರಸ್ತಾರ ಮಾಡಿ `ಎತುಟಬ್ರೋತುವೊ~ ಆಯ್ದರು. ಸ್ವಲ್ಪ ದ್ರುತ ಕಾಲದಲ್ಲಿ ಪ್ರಾರಂಭಿಸಿದ `ಸರಸೀರುಹಾಸನ~ ಕೀರ್ತನೆಗೆ ಸ್ವರವನ್ನೂ ಹಾಕಿದರು. ಚಿಟ್ಟೆ ಸ್ವರದೊಂದಿಗೆ `ಕರುಣ ಜೂಡವಯ್ಯ~ ಹಾಡಿ ಕಾರ್ಯಕ್ರಮದ ಪ್ರಧಾನ ರಾಗಕ್ಕೆ ಸರಿದರು.

ಪ್ರಾಚೀನ ರಕ್ತಿ ರಾಗವಾದ ಸಾವೇರಿಯನ್ನು ತೆಗೆದುಕೊಂಡು ಪೂರ್ವದ ಸ್ವಾದ ಬರುವಂತೆ ಹಾಡಿದರು. ಶ್ಯಾಮಾಶಾಸ್ತ್ರಿಗಳ `ಶಂಕರಿ ಶಂಕುರು ಚಂದ್ರಮುಖಿ ಅಖಿಲಾಂಡೇಶ್ವರಿ~ ಕೃತಿಯನ್ನು ಹಸನಾಗಿ ಹಾಡಿ ನೆರವಲ್ (ಶ್ಯಾಮಕೃಷ್ಣ ಸೋದರಿ ಶ್ಯಾಮಳೇ ಶಾಕೋದರಿ)ನಿಂದ ಬೆಳಗಿಸಿದರು. ಗಾಯನ ಸ್ವಲ್ಪ ಹಿಂದಿನ ಸ್ವಾದ ಹೊಂದಿದ್ದರೂ ಪ್ರೌಢವಾಗಿತ್ತು; ದಕ್ಷ ಪಾಠಾಂತರದ ದ್ಯೋತಕವಾಗಿತ್ತು. ಪಕ್ಕವಾದ್ಯದವರು ಕಾರ್ಯಕ್ರಮದ ಸ್ವಾರಸ್ಯ ವರ್ಧಿಸುವಂತೆ ಪಿಟೀಲು (ಸಿ.ಎನ್. ಚಂದ್ರಶೇಖರ್), ಮೃದಂಗ (ಅರ್ಜುನ್ ಕುಮಾರ್) ಮತ್ತು ಘಟ (ಸುಕನ್ಯಾ ರಾಂಗೋಪಾಲ್) ನುಡಿಸಿದರು.

ಸಾಂಸ್ಕೃತಿಕ ಸದವಕಾಶ
ಕಲಾಭಿಮಾನಿಗಳಿಗೆ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಳಲು ರಾಘವೇಂದ್ರ ಸ್ವಾಮಿಗಳ ಆರಾಧನೆ ಮತ್ತೊಂದು ಅವಕಾಶ ತಂದುಕೊಟ್ಟಿದೆ.

ಬೆಂಗಳೂರಿನಾದ್ಯಂತ ಹರಡಿರುವ ಮಠಗಳು, ವಿವಿಧ ಸಂಸ್ಥೆಗಳು ಆರಾಧನೆಯನ್ನು ದೀರ್ಘವಾಗಿಯೂ, ವೈಭವಯುತವಾಗಿಯೂ ನಡೆಸಲು ಪೈಪೋಟಿ ನಡೆಸಿವೆ.

ಸುಧೀಂದ್ರ ನಗರದ ಶ್ರೀ ರಾಘವೇಂದ್ರ ಸೇವಾ ಸಮಿತಿಯವರು ಗಾಯನವಲ್ಲದೆ ವೀಣೆ, ದಾಸವಾಣಿ, ಪ್ರವಚನ ಮತ್ತು ಭಜನೆಗಳ ಮೂಲಕ ನಡೆಸಲಿರುವ 13 ದಿನಗಳ ಉತ್ಸವವು ಆ. 6 ರವರೆಗೆ ನಡೆಯಲಿದೆ. ಇಲ್ಲಿ ದಾಸವಾಣಿ ಹಾಡಿದ ಗುಲ್ಪರ್ಗಾ ಗುರುರಾಜ ದಾಸ್ ಅವರು ಮುರಗೋಡು ಕೃಷ್ಣದಾಸರ ಶಿಷ್ಯರು. ಅವರು ಈವರೆಗೆ ಕರ್ನಾಟಕವಲ್ಲದೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ ಮಾನಿತರಾಗಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಗುಲ್ಪರ್ಗ ಗುರುರಾಜ ದಾಸರು ಭಿನ್ನ ಹರಿದಾಸರುಗಳ ದೇವರನಾಮಗಳನ್ನು ಆಯ್ದು ಸ್ವಾರಸ್ಯ ತುಂಬಿದರು. ಅವುಗಳಲ್ಲಿ ಹೆಚ್ಚು ಪರಿಚಿತವಲ್ಲದ ಅಪರೂಪ ಪದಗಳನ್ನು ಆರಿಸಿದ್ದು ಅಭಿನಂದನೀಯ.

ದೊರೆ ಶ್ರೀಶವಿಠಲ ದಾಸರ `ರಾಘವೇಂದ್ರ ಗುರುರಾಯರೆಂದಿರ ಆರಾಧಿಸಿರೊ~ ಪದವು ಸಾರಂಗ ರಾಗದಲ್ಲಿದ್ದರೆ, ಅನಂತಾದ್ರೀಶರ `ಬೊ ಯತಿವರೇಂದ್ರ~ವು ಮಾಂಡ್ ರಾಗವನ್ನು ಆಧರಿಸಿತ್ತು. ಜಗನ್ನಾಥ ದಾಸರ `ಬಾರೊ ರಾಘವೇಂದ್ರ ಬಾರೊ ದೇವರ ನಿಧಿಯೇ~, ಇಂದ್ರೇಶರ `ರಾಘವೇಂದ್ರ ತೀರ್ಥ ಬೋಧಿಸು ಭಾಗವತದ ಅರ್ಥ~ (ದೇಶ್) ಮತ್ತು ಶ್ಯಾಮ ಸುಂದರ ದಾಸರ `ಪವಮಾನ ಪಿಡಿ ಎನ್ನ ಕೈಯ~ (ಭೀಂಪಲಾಸ್) ಕೇಳುಗರ ಗಮನ ಸೆಳೆದವು. ತ್ರಿಸ್ಥಾಯಿಯಲ್ಲೂ ಸುಲಲಿತವಾಗಿ ಸಂಚರಿಸುತ್ತಿದ್ದ ಕಂಚಿನ ಕಂಠದಿಂದ, ಹಿಂದೂಸ್ತಾನಿ ಶೈಲಿಯಲ್ಲಿ ಗುರುರಾಜ ದಾಸರು ಭಾವಪೂರ್ಣವಾಗಿ ನಿರೂಪಿಸಿದರು.

ಅವರೊಂದಿಗೆ ತಬಲದಲ್ಲಿ ಗೋಪಾಲ ಕೃಷ್ಣಾಚಾರ್, ಹಾರ್ಮೊನಿಯಂನಲ್ಲಿ ಕೃಷ್ಣಮೂರ್ತಿ, ಡೋಲಕ್ನಲ್ಲಿ ರಘೋತ್ತಮ ಹಾಗೂ ತಾಳದಲ್ಲಿ ಸುಧನ್ವ ನೆರವಾದರು.

ಭಾವಪೂರ್ಣ ಯುಗಳ ಗಾಯನ
ಮೊನ್ನೆ ಸೋಮವಾರ ಯುಗಳ ಗಾಯನ ಮಾಡಿದ (ಶ್ರೀ ರಾಘವೇಂದ್ರ ಸೇವಾ ಸಮಿತಿ, ಸುಧೀಂದ್ರನಗರ) ತ್ರಿವೇಣಿ ಸರಳಾಯ ಮತ್ತು ಕವಿತಾ ಸರಳಾಯ ಅವರು `ಸರಳಾಯ ಸಹೋದರಿಯರು~ ಎಂದೇ ಪರಿಚಿತರು. ಸ್ವಲ್ಪ ಸ್ವರದೊಂದಿಗೆ ಪ್ರಾರಂಭದ `ನಮೊನಮೊ ರಘುಕುಲ ನಾಯಕ~ ಕೃತಿ ಹಾಡಿ, ಅರ್ಥಪೂರ್ಣವಾದ `ಭಜಿಸಿ ಬದುಕೆಲೊ ಮಾನವ~ ನಿರೂಪಿಸಿದರು.

`ವೀರ ಹನುಮ ನಮೊ ನಮೊ~ ರಚನೆಗೆ ಹಾಕಿದ ರಾಗದ ಮುನ್ನುಡಿಯೂ ಆಹ್ಲಾದಕರವಾಗಿತ್ತು. ರಾಯರ ಮೇಲೆ `ಎದ್ದು ಬರುತಾರೆ ನೋಡೆ~, `ತುಂಗಾ ತೀರ ವಿಹಾರಂ~ ಮುಂತಾದ ದೇವರನಾಮಗಳನ್ನು ಹಾಡಿದ್ದು ಸಮಯೋಚಿತವಾಗಿತ್ತು. ಇಬ್ಬರೂ ಹಂಚಿಕೊಂಡು ಆಲಾಪನೆ, ಸ್ವರಪ್ರಸ್ತಾರಗಳಿಂದ `ರಾಮ ರಾಮಗುಣಸೀಮ~ ಕೃತಿಗೆ ಪೂರ್ಣತ್ವ ಕೊಟ್ಟರು.

ತಮ್ಮ ಉತ್ತಮ ಕಂಠದಿಂದ ಕನ್ನಡ ದೇವರನಾಮಗಳಿಗೆ ಸಂಗೀತ ಮೌಲ್ಯ ತುಂಬಿ ಹಾಡಿ, ಸಭೆಯ ಮೆಚ್ಚುಗೆ ಪಡೆದರು. ಮೂವರು ಅನುಭವೀ ವಾದ್ಯಗಾರರಾದ - ಬಿ. ರಘುರಾಂ (ಪಿಟೀಲು), ಸಿ. ಚೆಲುವರಾಜು (ಮೃದಂಗ) ಹಾಗೂ ದಯಾನಂದ ಮೋಹಿತೆ (ಘಟ) ಗಾಯನದ ಸ್ವಾದ ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.