ನಾನು ಫೇಸ್‌ಬುಕ್‌ನಲ್ಲಿ ಇಲ್ಲ!

7

ನಾನು ಫೇಸ್‌ಬುಕ್‌ನಲ್ಲಿ ಇಲ್ಲ!

Published:
Updated:
ನಾನು ಫೇಸ್‌ಬುಕ್‌ನಲ್ಲಿ ಇಲ್ಲ!

ತಮನ್ನಾ ಕಾಲಿವುಡ್‌ನಲ್ಲಿ ಕಾಣಿಸಿಕೊಂಡು ಸುಮಾರು ಒಂದು ವರ್ಷವಾಗುತ್ತಿದೆ. ಆಕೆ ಧನುಷ್ ಜತೆ `ವೆಂಗೈ~ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಅಲ್ಲಿಂದೀಚೆಗೆ ಆಕೆಯ ಸದ್ದೇ ಇರಲಿಲ್ಲ.`ಟಾಲಿವುಡ್‌ನಲ್ಲಿ ಬ್ಯುಸಿ ಇದ್ದಿದ್ದರಿಂದ ಕಾಲಿವುಡ್ ಚಿತ್ರಗಳಲ್ಲಿ ನಟಿಸಲಾಗುತ್ತಿಲ್ಲ. ಹಾಗಾಗಿ ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಿಲ್ಲ~ ಎನ್ನುವ ತಮನ್ನಾ, ಫೇಸ್‌ಬುಕ್‌ನಲ್ಲಿ ತಮ್ಮ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಕಿಡಿಕಾರಿದ್ದಾರೆ.ತಮನ್ನಾಗೆ ಈಗೀಗ ತಲೆ ಚಿಟ್ಟುಹಿಡಿಯುತ್ತಿದೆಯಂತೆ. ಕಾರಣ ಕೇಳಿದರೆ ಆಕೆ ಹೇಳುವುದು ಹೀಗೆ...`ಮಾಡಲು ಕೆಲಸವಿಲ್ಲದ ಕೆಲವು ಕುಚೇಷ್ಟೆ ವ್ಯಕ್ತಿಗಳು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ನನ್ನ ನಕಲಿ ಫ್ರೊಫೈಲ್ ಸೃಷ್ಟಿಸಿದ್ದಾರೆ. ಇದು ನನಗೆ ಹೋದಲ್ಲೆಲ್ಲಾ ಇರಿಸು ಮುರಿಸು ತರುತ್ತಿದೆ. ಇದರಿಂದಾಗಿ ನನ್ನ ಅಭಿಮಾನಿಗಳು, ಸ್ನೇಹಿತರು ನಾನು ಫೇಸ್‌ಬುಕ್‌ನಲ್ಲಿ ಇದ್ದೇನೆ ಎಂದು ನಿಜವಾಗಿ ನಂಬಿಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಹೇಳುವುದಿಷ್ಟು: ನಾನು ಇದುವರೆಗೂ ಫೇಸ್‌ಬುಕ್‌ನ ಸಖ್ಯ ಬಳಸಿಲ್ಲ. ನಾನು ಫೇಸ್‌ಬುಕ್‌ನಲ್ಲಿ ಇಲ್ಲ!~

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry