ಕರಾಚಿ (ಪಿಟಿಐ): ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಮುಖ್ಯಸ್ಥ ನಿಜಾಮ್ ಸೇಥಿ ಅವರು ಅಂತರ ರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಸೋಮವಾರ ಹಿಂದಕ್ಕೆ ಪಡೆದಿದ್ದಾರೆ.

ಅವರು ಈ ಸಂಬಂಧ ಐಸಿಸಿಗೆ ಪತ್ರ ಬರೆದಿದ್ದು, ತಮ್ಮ ನಿರ್ಧಾರ ತತ್ಕ್ಷಣದಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಜತೆಗೆ ಈ ಹುದ್ದೆಗೆ ಸೂಕ್ತ ಮಾಜಿ ಟೆಸ್ಟ್ ಆಟಗಾರನನ್ನು ನಾಮ ನಿರ್ದೇಶನ ಮಾಡುವಂತೆ ಪಿಸಿಬಿಗೆ ಮನವಿ ಮಾಡಿದ್ದಾರೆ.

‘ಮುಂದಿನ ವರ್ಷದಿಂದ ಆಯಾ ಕ್ರಿಕೆಟ್ ಮಂಡಳಿಗಳಿಂದ ನಾಮ ನಿರ್ದೇಶನಗೊಂಡ ಮಾಜಿ ಟೆಸ್ಟ್ ಆಟಗಾರರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ನಿಯಮವನ್ನು ಐಸಿಸಿ ಜಾರಿಗೆ ತಂದಿದೆ. ಈ ನಿಯಮ ಶೀಘ್ರವೇ ಕಾರ್ಯರೂಪಕ್ಕೆ ಬರುವುದರಿಂದ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ನಾನು ಸಿದ್ಧನಿಲ್ಲ. ಹೀಗಾಗಿ ನಾಮಪತ್ರ ವಾಪಸ್ಸು ಪಡೆದಿದ್ದೇನೆ. ಈ ಹುದ್ದೆಗೆ ಪಿಸಿಬಿ ಸೂಕ್ತ ಟೆಸ್ಟ್ ಆಟಗಾರನನ್ನು ನಾಮನಿರ್ದೇಶನ ಮಾಡಲಿದೆ’ ಎಂದು ಸೇಥಿ ಐಸಿಸಿ ಮುಖ್ಯಸ್ಥ ಎನ್.ಶ್ರೀನಿವಾಸನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ನನ್ನ ಈ ತುರ್ತು ನಿರ್ಧಾರದಿಂದ ಐಸಿಸಿ ಆಡಳಿತದ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರಿದರೆ ಅದಕ್ಕೆ ಕ್ಷಮೆಯಾಚಿಸುತ್ತೇನೆ. ಈ ತೀರ್ಮಾನವನ್ನು ಐಸಿಸಿಯ ಎಲ್ಲಾ ಸದಸ್ಯರು ಸ್ವಾಗತಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದೂ ಅವರು ಹೇಳಿದ್ದಾರೆ.

‘ಸೇಥಿ ಅವರು ನಾಮಪತ್ರ ವಾಪಸ್ಸು ಪಡೆದಿರುವುದರಿಂದ ಅವರ ಸ್ಥಾನಕ್ಕೆ ಮಾಜಿ ಆಟಗಾರರಾದ ಜಹೀರ್ ಅಬ್ಬಾಸ್ ಮತ್ತು ಮಜೀದ್ ಖಾನ್ ಅವರಲ್ಲಿ ಒಬ್ಬರನ್ನು ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನ ಮಾಡಲು ಪಿಸಿಬಿ ಚಿಂತನೆ ನಡೆಸಿದೆ. ಮಾಜಿ ಆಟಗಾರ ರಮೀಜ್ ರಾಜಾ ಅವರೊಂದಿಗೂ ಪಿಸಿಬಿ ಈ ಸಂಬಂಧ ಮಾತುಕತೆ ನಡೆಸಿದ್ದು ಸದ್ಯ ವಾಹಿನಿಯೊಂದರ ವೀಕ್ಷಕ ವಿವರಣೆಗಾರರಾಗಿರುವ ಅವರು ಆ ವಾಹಿನಿಯ ಜತೆ ಈಗಾಗಲೇ ಕೆಲ ಒಪ್ಪಂದಗಳನ್ನು ಮಾಡಿಕೊಂಡಿರುವ ಕಾರಣ ಪಿಸಿಬಿಯ ಕೋರಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಪಿಸಿಬಿ ಮೂಲದಿಂದ ತಿಳಿದುಬಂದಿದೆ.

ನನ್ನ ಈ ತುರ್ತು ನಿರ್ಧಾರದಿಂದ ಐಸಿಸಿ ಆಡಳಿತದ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರಿದರೆ ಅದಕ್ಕೆ ಕ್ಷಮೆಯಾಚಿಸುತ್ತೇನೆ.
–ನಿಜಾಮ್ ಸೇಥಿ, ಪಿಸಿಬಿ ಮಾಜಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.