ಭಾನುವಾರ, ಮೇ 9, 2021
20 °C

ನಾಯಕ `ಮಹಿ' ಮತ್ತೆ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್ (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಮೌನ ಕಾಯ್ದುಕೊಂಡಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ, ತಮ್ಮ ಮೇಲಿನ `ಹಿತಾಸಕ್ತಿ ಸಂಘರ್ಷ'ದ ಆರೋಪದ ಬಗ್ಗೆಯೂ ಚಕಾರ ಎತ್ತಿಲ್ಲ.ಭಾರತ ತಂಡ ಹಾಗೂ ಅದರ ನಾಯಕನ ಸುತ್ತ ಎದ್ದಿರುವ ವಿವಾದಗಳಿಂದ ಚಾಂಪಿಯನ್ಸ್ ಟ್ರೋಫಿ  ಟೂರ್ನಿಯಲ್ಲಿ ಪ್ರದರ್ಶನಕ್ಕೆ ಅಡ್ಡಿಯಾಗುವುದಲ್ಲವೇ ಎಂಬ ಪ್ರಶ್ನೆಗೆ ದೋನಿ ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.`ನಾವೆಲ್ಲ ಆ ವಿಚಾರಗಳ ಬಗ್ಗೆ ಕೊಂಚವೂ ತಲೆಕೆಡಿಸಿಕೊಂಡಿಲ್ಲ. ನಾವು ಕೇವಲ ಮುಂಬರುವ ಸವಾಲುಗಳತ್ತ ಮಾತ್ರ ಗಮನ ಹರಿಸುತ್ತಿದ್ದೇವೆ. ಏಕದಿನ ಕ್ರಿಕೆಟ್ ನಿಯಮಗಳಲ್ಲಿ ಈಗ ಅಲ್ಪ ಮಾರ್ಪಾಟು ಮಾಡಲಾಗಿದೆ. ಹೊಸ ನಿಯಮಗಳಡಿ ವಿದೇಶಿ ನೆಲದಲ್ಲಿ ನಾವು ಮೊದಲ ಬಾರಿಗೆ ಆಡುತ್ತಿದ್ದೇವೆ. ಈ ನಿಯಮಗಳಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೇವೆ' ಎಂದು ಅವರು ನುಡಿದಿದ್ದಾರೆ.ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಮುಂಬೈನಲ್ಲಿ ನಡೆದ ಪ್ರತಿಕಾಗೋಷ್ಠಿ ಹಾಗೂ ಇಲ್ಲಿಗೆ ಬಂದ ಮೇಲೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಸ್ಪಾಟ್ ಫಿಕ್ಸಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ದೋನಿ ಮೌನ ಕಾಯ್ದುಕೊಂಡಿದ್ದರು.ಭಾರತ ತಂಡಕ್ಕೆ ಸಮಸ್ಯೆಗಳ ಜೊತೆಗೆ ಹೊಸ ನಿಯಮಗಳ ಸವಾಲು

ಏಕದಿನ ಕ್ರಿಕೆಟ್‌ನ ನಿಯಮದಲ್ಲಿ ಈಗ ಕೆಲ ಬದಲಾವಣೆ ಮಾಡಲಾಗಿದೆ. ಅದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಚಾಲ್ತಿಯಲ್ಲಿರಲಿದೆ

ಎರಡು ತುದಿಗಳಿಂದ ಹೊಸ ಚೆಂಡು ಬಳಕೆ, ಓವರ್‌ನಲ್ಲಿ ಒಂದು ಬೌನ್ಸರ್ ಬದಲು ಎರಡು ಬೌನ್ಸರ್ ಹಾಕಲು ಅವಕಾಶ, ಬೌಲಿಂಗ್ ಪವರ್ ಪ್ಲೇಅನ್ನು ಮೊದಲ 10 ಓವರ್‌ಗಳಿಗೆ  ಸೀಮಿತಗೊಳಿಸಲಾಗಿದ್ದು, 40ನೇ ಓವರ್‌ಗಳಿಗೂ ಮುನ್ನ ಬ್ಯಾಟಿಂಗ್ ಪವರ್ ಪ್ಲೇ ಮುಗಿಸಬೇಕು. ಅಷ್ಟು ಮಾತ್ರವಲ್ಲದೇ, ಪವರ್ ಪ್ಲೇ ಇಲ್ಲದ ಅವಧಿಯಲ್ಲಿ 30 ಯಾರ್ಡ್ ವೃತ್ತದಿಂದ ಹೊರಗೆ  ನಾಲ್ವರು ಕ್ಷೇತ್ರ ರಕ್ಷಕರು ಮಾತ್ರ ಇರಬೇಕು. ಈ ಹೊಸ ನಿಮಯ ಹೆಚ್ಚು ಆಘಾತಕಾರಿ ಎನಿಸಿದೆ. ವಿಶೇಷವಾಗಿ ಬೌಲರ್‌ಗಳಿಗೆ ಹೊಸ ಸವಾಲು ಎದುರಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.