ನಾರಾಯಣಪ್ಪ ನಿಧನ

7

ನಾರಾಯಣಪ್ಪ ನಿಧನ

Published:
Updated:

ವಿಜಯಪುರ: ಇಲ್ಲಿಗೆ ಸಮೀಪದ ಚನ್ನರಾಯಪಟ್ಟಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ನಾರಾಯಣಪ್ಪ (68) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು.ಮೃತರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶನಿವಾರದಂದು ಕಾಶಿ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಮಧ್ಯೆ ಅವರು ಅಯೋಧ್ಯೆಯಲ್ಲಿ ನಿಧನರಾದರೆಂದು ತಿಳಿದುಬಂದಿದೆ. ನಾರಾಯಣಪ್ಪ ಅವರು ಚನ್ನರಾಯಪಟ್ಟಣದ ರೇಷ್ಮೆ ಬೆಳೆಗಾರರ ವ್ಯವಸಾಯೋತ್ಪನ್ನ ಸಹಕಾರ ಸೇವಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಅವರ ನಿಧನಕ್ಕೆ ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಜಿ.ಚಂದ್ರಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಪಿಳ್ಳಮುನಿಶಾಮಪ್ಪ, ತಾಲ್ಲೂಕುಪಂಚಾಯ್ತಿ ಅಧ್ಯಕ್ಷ ಬಿ.ಕೆ.ಶಿವಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬೂದಾಳು ಮುನಿಶಾಮಿಗೌಡ, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ವೀರಭದ್ರಪ್ಪ, ಕೆ.ಸದಾಶಿವಯ್ಯ, ಸಿ.ವಿ.ಮಂಜುನಾಥ್, ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ನಿರ್ದೇಶಕ ಸಿ.ಎನ್. ಬಾಬು, ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆಯು ಮಂಗಳವಾರ ಬೆಳಿಗ್ಗೆ ಕಾಶಿಯಲ್ಲಿ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry