ಮಂಗಳವಾರ, ಮೇ 24, 2022
30 °C

ನಾರಾಯಣಮೂರ್ತಿ ಏಕೆ ಬೇಡ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಗೆ ಇನ್‌ಫೋಸಿಸ್ ನಾರಾಯಣಮೂರ್ತಿಯವರು ಬೇಡ, ಕನ್ನಡಕ್ಕೆ ಅವರ ಕೊಡುಗೆ ಏನು ಎನ್ನುವ ಅಪಸ್ವರ ಈಗ ಎದ್ದಿದೆ (ಪ್ರ.ವಾ. ಫೆ.28 ಬರಗೂರು ಅವರ ಪತ್ರ).ಬೆಂಗಳೂರು, ಕರ್ನಾಟಕ ವಿಶ್ವಜನದ ಮನಸ್ಸಿನಲ್ಲಿ ಈವೊತ್ತು ಅಸ್ತಿತ್ವ ಕಂಡುಕೊಂಡಿದ್ದರೆ, ನಿಜವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಜನಿತವಾಗಿದ್ದರೆ ಅದು ನಾರಾಯಣಮೂರ್ತಿ ಅವರ ಔದ್ಯೋಗಿಕ, ಆರ್ಥಿಕ ಜನಪರ ಕೊಡುಗೆಯಿಂದ: ಬೆಂಗಳೂರಿಗೆ ವಿಶ್ವಮಾನ್ಯತೆ ಇಂಥವರಿಂದ ಲಭ್ಯವಾಗಿದೆಯೇ ವಿನಃ ಅಷ್ಟೋ ಇಷ್ಟೋ ಬರೆದಿರುವ ನಮ್ಮ ಸಾಹಿತ್ಯ ಮಿತ್ರರ ಬರವಣಿಗೆಯಿಂದ ಅಲ್ಲ. ಇದು ವಾಸ್ತವ, ಒಪ್ಪಿಕೊಳ್ಳಬೇಕಾದ ಸತ್ಯ.ಉದ್ಘಾಟನೆಗಿಂತ ಮುಖ್ಯವಾದ ಪ್ರಶ್ನೆ ಇನ್ನೊಂದಿದೆ. ವಿಶ್ವಕನ್ನಡ ಸಮ್ಮೇಳನ ಏಕೆ ಬೇಕು, ಅದರ ಅಗತ್ಯ ಏನು, ಅದರಿಂದ ಕನ್ನಡಕ್ಕೇನು ಲಾಭ-ಇವು ಚರ್ಚಾರ್ಹ ಸಂಗತಿಗಳು. ನಮ್ಮ ಬೆಂಗಳೂರಿನ ವಿಧಾನಸೌಧದಲ್ಲೇ ತನ್ನ ಸಂಪೂರ್ಣ ಅಸ್ತಿತ್ವ ಸಾಧಿಸಲಾರದಾಗಿರುವ ನಮ್ಮ ಭಾಷೆಗೆ ವಿಶ್ವಸಮ್ಮೇಳನ ಏಕೆ? ಮತ್ತೆ, ಶ್ರೀಲಂಕಾ, ಮಲೇಶಿಯ, ಸಿಂಗಪುರ, ಫಿಜಿ. ಮತ್ತಿತರ ಹಲವು ಸಣ್ಣಪುಟ್ಟ ದೇಶಗಳಲ್ಲಿ ರಾಜ್ಯ ಭಾಷೆಯ ಪಟ್ಟ ಪಡೆದಿರುವ ತಮಿಳಿನಂತೆ ನಾವೇನು ಕನ್ನಡವನ್ನು ವಿಶ್ವಮಟ್ಟಕ್ಕೆ ಬೆಳಸಿಲ್ಲ, ಹಬ್ಬಿಸಿಲ್ಲ. ಮತ್ತೆ ಇಂಥ ಸಮ್ಮೇಳನ ಏಕೆ? ಬೇಕೇ?

-ಡಾ. ಡಿ.ಎ. ಶಂಕರ್, ಮೈಸೂರು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.