ಕೋಲ್ಕತ್ತ (ಪಿಟಿಐ): ನಾರ್ವೆ ಪಾಲನಾ ಗೃಹದಿಂದ ಅನಿವಾಸಿ ಭಾರತೀಯ ಮಕ್ಕಳಾದ ಅಭಿಜ್ಞಾನ ಹಾಗೂ ಐಶ್ವರ್ಯಾ ತಮ್ಮ ಚಿಕ್ಕಪ್ಪನೊಂದಿಗೆ ಮುಕ್ತರಾದ ಸಿಹಿ ಸುದ್ದಿ ಬಂದ ದಿನವೇ ಸ್ವೀಡನ್ನಲ್ಲೂ ಇಂತಹುದೇ ಪ್ರಕರಣ ಸುಖಾಂತ್ಯ ಕಾಣಲು ಕಾಯುತ್ತಿರುವ ವರದಿ ಬಂದಿದೆ.

ತನ್ನ 11 ವರ್ಷದ ಮಗ ಡೊಮಿನಿಕ್ ಜೋಹಾನ್ಸನ್ನನ್ನು ಸ್ವೀಡನ್ ಸರ್ಕಾರ ಅಕ್ರಮವಾಗಿ ಪಾಲನಾ ಗೃಹಕ್ಕೆ ನೂಕಿದ್ದು ಆತನನ್ನು ಬಿಡಿಸಿಕೊಡಿ ಎಂದು ಅನಿ ಜೋಹಾನ್ಸನ್ ಭಾರತ ಸರ್ಕಾರವನ್ನು ಕೋರಿದ್ದಾರೆ ಎಂದು ಕೋಲ್ಕತ್ತ ಮೂಲದ ಸ್ವಯಂಸೇವಾ ಸಂಸ್ಥೆಯೊಂದು ತಿಳಿಸಿದೆ.

ಭಾರತದ ಸಂಸ್ಕೃತಿ, ಸಂಪ್ರದಾಯಗಳು ಗೊತ್ತಿಲ್ಲದ ಸ್ವೀಡನ್ ಅಧಿಕಾರಿಗಳು ಡೊಮಿನಿಕ್ ಅನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪದ ಮೇಲೆ ಆತನನ್ನು ಗಾಟ್ಲ್ಯಾಂಡ್ನ ಪಾಲನಾ ಗೃಹಕ್ಕೆ ಒಪ್ಪಿಸಿದ್ದಾರೆ.

ಪುಣೆ ಮೂಲದ ಅನಿ ಕಳೆದ ಏಪ್ರಿಲ್ 2000 ರಿಂದ ಸ್ವೀಡನ್ನ ವಿಸ್ಬಿ ಎಂಬಲ್ಲಿ ವಾಸವಾಗಿದ್ದು ಈ ಸಂಬಂಧ ಸಂಸ್ಥೆಯನ್ನು ಸಂಪರ್ಕಿಸಿದ್ದು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.