ಮರುಭೂಮಿ ನಾಡು ರಾಜಸ್ತಾನ ಹಲವು ಅಚ್ಚರಿಗಳ ಆಗರ. ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಮರುಭೂಮಿಯ ಚೆಲುವು, ಭವ್ಯ ಅರಮನೆಗಳು, ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಒಡಲಲ್ಲಿಟ್ಟುಕೊಂಡು ಜೀಕುವ ರಾಜಸ್ತಾನದ ಆಹಾರ ಸಂಸ್ಕೃತಿಯೂ ವಿಭಿನ್ನವಾದುದು. ರಾಜಸ್ತಾನಿಯರಿಗೆ ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಹೆಚ್ಚು ಪ್ರಿಯ. ಅದರಲ್ಲೂ ಅವರಿಗೆ ಬಗೆಬಗೆಯ ಸಿಹಿತಿನಿಸುಗಳನ್ನು ಸವಿಯುವುದೆಂದರೆ ಇನ್ನೂ ಅಚ್ಚುಮೆಚ್ಚು.

ಕೋರಮಂಗಲದಲ್ಲಿರುವ ಗ್ರ್ಯಾಂಡ್ ಮರ್ಕ್ಯುರಿ ಹೋಟೆಲ್ನಲ್ಲಿ ಈಗ ರಾಜಸ್ತಾನಿ ಆಹಾರೋತ್ಸವ ನಡೆಯುತ್ತಿದ್ದು, ಉತ್ಸವದ ಸಲುವಾಗಿ ಇಡೀ ರೆಸ್ಟೋರೆಂಟನ್ನು ರಾಜಸ್ತಾನಿ ಶೈಲಿಯಲ್ಲಿ ಸಿಂಗರಿಸಲಾಗಿದೆ.
ರೆಸ್ಟೋರೆಂಟ್ ಅಂಗಳಕ್ಕೆ ಕಾಲಿಟ್ಟಾಗ ಅಲ್ಲಿನ ವ್ಯವಸ್ಥಾಪಕಿ ವಾಸವಿ ಎದುರಾದರು. ಕೈಕುಲುಕಿದ ನಂತರ ಆಕೆ ರೆಸ್ಟೋರೆಂಟ್ ಒಳಕ್ಕೆ ಕರೆದೊಯ್ದರು. ಒಳಗೆ ಅಡಿಯಿಟ್ಟ ಮೇಲೆ ಮೊದಲಿಗೆ ಕಂಡಿದ್ದು ಬೃಹತ್ ಒಂಟೆಯ ಪ್ರತಿಕೃತಿ. ಅದರ ಸುತ್ತ ಒಣಹುಲ್ಲನ್ನು ಹರಡಲಾಗಿತ್ತು.

ಅಕ್ಕಪಕ್ಕದಲ್ಲೇ ಕುಸುರಿ ಕಲೆ ಇದ್ದ ಮಡಿಕೆಗಳನ್ನು ಇಟ್ಟಿದ್ದರು. ರಾಜಸ್ತಾನಿ ಶೈಲಿಯಲ್ಲಿ ಕಂಗೊಳಿಸುತ್ತಿದ್ದ ರೆಸ್ಟೋರಾ ತುಂಬೆಲ್ಲಾ ಅಲ್ಲಿನ ಸಂಸ್ಕೃತಿಯ ಘಮಲು. ಇವೆಲ್ಲವನ್ನೂ ನೋಡಿ ಕತ್ತನ್ನು ಪಕ್ಕಕ್ಕೆ ಹೊರಳಿಸಿದಾಗ ರಾಜಸ್ತಾನಿ ಬಾಣಸಿಗರು ಅಡುಗೆ ತಯಾರಿಸುತ್ತಿರುವ ದೃಶ್ಯ ಕಾಣಿಸಿತು. ಹಾಗೆಯೇ ಮುಂದಕ್ಕೆ ಸಾಗಿ, ರೆಸ್ಟೊೋರೆಂಟ್ನ ಮಧ್ಯಭಾಗ ಪ್ರವೇಶಿಸಿದೆವು. ಅಲ್ಲಿ ಸಾಕಷ್ಟು ವಿದೇಶಿಗರು ಊಟ ಸವಿಯುತ್ತಿದ್ದರು. ಆಮೇಲೆ, ವಾಸವಿ ನಮ್ಮನ್ನು ಪುಟ್ಟ ತಿಳಿ ನೀಲಿ ನೀರಿನ ಕೊಳದಿಂದ ಆವೃತ್ತವಾಗಿದ್ದ ಪ್ರೈವೇಟ್ ಡಿನ್ನರ್ ಲಾಂಜ್ಗೆ ಕರೆದೊಯ್ದು ಊಟವನ್ನು ಸವಿಯುವಂತೆ ತಿಳಿಸಿ, ಹೊರಟುಹೋದರು.

ಅಷ್ಟರಲ್ಲಿ ಸಾಂಪ್ರದಾಯಿಕ ರಾಜಸ್ತಾನಿ ವೇಷಧಾರಿ ವೇಟರ್ ಒಬ್ಬ ‘ಬಜ್ರಾ ರಬ್ಡಿ’ ಮತ್ತು ‘ಚಾಚ್ ಧುಂಗ್ರವಾಲಿ’ ತಂದುಕೊಟ್ಟರು. ಸಜ್ಜೆ, ಧನಿಯಾ, ಮೊಸರು, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತಯಾರಿಸಿದ್ದ ಬಜ್ರಾ ರಬ್ಡಿ ಪಾನೀಯ ಚೆನ್ನಾಗಿತ್ತು. ಅದಕ್ಕಿಂತಲೂ ಜೀರಿಗೆ, ಶುಂಠಿ ಹಾಕಿ ತಯಾರಿಸಿದ್ದ ಚಾಚ್ ಧುಂಗ್ರವಾಲಿ (ಪಾನಿಪುರಿ ತಿಂದ ನಂತರ ನೀಡುವ ಪಾನಿ) ಹೊಟ್ಟೆಯ ಹಸಿವನ್ನು ಕೆರಳಿಸುವಂತಿತ್ತು. ಅವುಗಳನ್ನು ನಾಲ್ಕೈದು ಗುಟುಕಿನಲ್ಲಿ ಹೀರಿ ಮುಗಿಸುವಷ್ಟರಲ್ಲಿ ಜೋಧ್ಪುರದ ‘ಮಿರ್ಚಿ ಬಡಾ’ (ಬೋಂಡಾ) ಬಂತು. ಕಡಲೆಹಿಟ್ಟು, ದಪ್ಪ ಹಸಿರು ಮೆಣಸಿನಕಾಯಿ ಜತೆಗೆ ಆಲೂ ಬಳಸಿ ತಯಾರಿಸಿದ್ದ ಗರಿಗರಿಯಾದ ಬೋಂಡಾ ರುಚಿ ಹಿತವಾಗಿತ್ತು. ಮಧ್ಯದಲ್ಲಿ ಮೆಣಸಿನಕಾಯಿ ಇರಿಸಿ ಅದರ ಮೇಲೆ ಮಸಾಲೆ ಹಾಕಿ ಕಿವುಚಿದ ಆಲೂ ಮೆತ್ತಿ, ಅದನ್ನು ಕಡಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದಿದ್ದ ಈ ಸ್ಟಾರ್ಟರ್ ರುಚಿ ಚೆನ್ನಾಗಿತ್ತು. ಅದರ ಜೊತೆಗೆ ಆಲೂ ಬೋಂಡಾ ಮತ್ತು ಚಿಕನ್ ವಿಂಗ್ ತಂದುಕೊಟ್ಟರು. ಹದವಾಗಿ ಬೆಂದಿದ್ದ ಚಿಕನ್ ರುಚಿ ಬಾಯಲ್ಲಿ ನೀರೂರಿಸುವಂತಿತ್ತು.

ಸ್ಟಾರ್ಟರ್ ರುಚಿ ನೋಡಿ ಮುಗಿಸುವಷ್ಟರಲ್ಲಿ ರೆಸ್ಟೋರೆಂಟ್ನ ಮುಖ್ಯ ಬಾಣಸಿಗ ವಿಜಯ್ ಡೇವಿಡ್ ಬಂದು ‘ರುಚಿ ಹೇಗಿದೆ?, ಇಷ್ಟವಾಯ್ತಾ?’ ಎಂದು ಕೇಳಿ ಪ್ರತಿಕ್ರಿಯೆ ತೆಗೆದುಕೊಂಡ ನಂತರ ಅವರು ರಾಜಸ್ತಾನಿ ಆಹಾರೋತ್ಸವದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ‘ಆಹಾರೋತ್ಸವಕ್ಕೆಂದೇ ರಾಜಸ್ತಾನದಿಂದ ನಾಲ್ವರು ಬಾಣಸಿಗರನ್ನು ಕರೆಯಿಸಿದ್ದೇವೆ.

ಇಲ್ಲಿನವರಿಗೆ ಅಲ್ಲಿಯದೇ ಶೈಲಿಯ ಆಹಾರ ಉಣಬಡಿಸುವುದು ನಮ್ಮ ಉದ್ದೇಶ. ವರ್ಷದ ಬಹುತೇಕ ಎಲ್ಲ ದಿನವೂ ರಾಜಸ್ತಾನ ಬಿಸಿಲಿನಿಂದ ಬೇಯುತ್ತಿರುತ್ತದೆ. ಹಾಗಾಗಿ, ಅಲ್ಲಿನ ಜನರು ಬಳಸುವ ಆಹಾರವೂ ವಾತಾವರಣಕ್ಕೆ ಹೊಂದುವಂತೆಯೇ ಇರುತ್ತದೆ. ರಾಜಸ್ತಾನಿಗಳು ಮಾಂಸಾಹಾರಕ್ಕಿಂತ ಹೆಚ್ಚಾಗಿ ಸಸ್ಯಾಹಾರ ಪ್ರಿಯರು. ಸಿಹಿತಿನಿಸಿನ ಮೋಹಿಗಳು. ರಾಜಸ್ತಾನದ ಜನಪ್ರಿಯ ಖಾದ್ಯಗಳಾದ ಲಾಲ್ ಮಾಸ್, ದಾಲ್ಭಾಟಿ ಚೂರ್ಮಾ, ಲಾಪ್ಸಿ, ಬಜ್ರೆ ಕಾ ಖೀರ್, ಜಿಲೇಬಿ, ರಬ್ಡಿ ಮೊದಲಾದ ಖಾದ್ಯಗಳನ್ನು ಅಲ್ಲಿಯದೇ ರುಚಿಯಲ್ಲಿ ಸವಿಯುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿಕೊಟ್ಟಿದ್ದೇವೆ’ ಎಂದು ಹೇಳಿ ಮಾತು ಮುಗಿಸಿದರು.

ಆನಂತರ, ಮುಖ್ಯ ಮೆನು ಸವಿಯಲು ಅವಕಾಶ ಮಾಡಿಕೊಟ್ಟರು. ತಟ್ಟೆ ಎತ್ತಿಕೊಂಡು ಮೊದಲಿಗೆ ರಾಜಸ್ತಾನದ ಸಿಗ್ನೇಚರ್ ಡಿಶ್ ‘ಲಾಲ್ ಮಾಸ್’ ಹಾಕಿಕೊಂಡೆವು. ಕೆಂಪು ಮೆಣಸಿನಕಾಯಿ ಖಾರದಲ್ಲಿ ಅದ್ದಿದಂತೆ ಕಾಣುತ್ತಿದ್ದ ಆ ಖಾದ್ಯದ ಘಮಲು ಮೂಗಿಗೆ ಅಡರುತ್ತಿತ್ತು. ಕುರಿ ಮಾಂಸದ ತುಂಡುಗಳಿಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೆಂಪು ಮೆಣಸಿನಕಾಯಿ, ಜೀರಿಗೆ ಹಾಕಿ ತಯಾರಿಸಿದ್ದ ಮಸಾಲೆಯನ್ನು ಸೇರಿಸಿ ಈ ಖಾದ್ಯವನ್ನು ತಯಾರಿಸಲಾಗಿತ್ತು. ಲಾಲ್ಮಾಸ್ ರುಚಿ ತುಂಬ ಚೆನ್ನಾಗಿತ್ತು. ರೋಟಿ ಅದಕ್ಕೆ ಒಳ್ಳೆಯ ಕಾಂಬಿನೇಷನ್ ಆಗಿತ್ತು. ಈ ಖಾದ್ಯಗಳ ಜತೆಗೆ ಜೈಸಲ್ಮೇರಿ ಕೈರ್ ಸಂಗ್ರಿ, ಜೋಧ್ಪುರಿ ಗಟ್ಟಾ ಮಸಾಲ ರುಚಿ ನೋಡಿದೆವು. ರೈಸ್ ಐಟಂನಲ್ಲಿ ಮಾಡಿಟ್ಟಿದ್ದ ಬಿಕನೇರಿ ಗಟ್ಟಾ ಪುಲಾವ್ ರುಚಿಯಾಗಿತ್ತು.

ಮುಖ್ಯ ಮೆನುವಿನ ತಿನಿಸನ್ನು ತಿಂದು ಮುಗಿಸಿದ ಮೇಲೆ ವೇಟರ್ ಬಿಸಿಬಿಸಿಯಾದ ಜಿಲೇಬಿ ಮತ್ತು ರಬ್ಡಿ ತಂದುಕೊಟ್ಟರು. ಬಲು ಅಪರೂಪದ ರುಚಿ ಈ ಜಿಲೇಬಿಯಲ್ಲಿತ್ತು. ಭರ್ತಿ ಒಂದು ತಟ್ಟೆ ಜಿಲೇಬಿ ತಿಂದು ಊಟ ಸಂಪನ್ನಗೊಳಿಸಿದ್ದಾಯಿತು.
ಅಪ್ಪಟ ರಾಜಸ್ತಾನಿ ಖಾದ್ಯಗಳ ರುಚಿಯನ್ನು ಸವಿಯ ಬಯಸುವವರಿಗೆ ಗ್ರ್ಯಾಂಡ್ ಮರ್ಕ್ಯುರಿ ಅತ್ಯುತ್ತಮ ಆಯ್ಕೆ, ಆಹಾರೋತ್ಸವದಲ್ಲಿ ಪರಿಚಯಿಸಿರುವ ಸಿಹಿತಿನಿಸುಗಳ ರುಚಿಯಂತೂ ನಿಮಗೆ ಎಂದೆಂದಿಗೂ ಮರೆಯದ ರುಚಿಯ ಅನುಭವ ಕಟ್ಟಿಕೊಡುತ್ತವೆ. ಅದರಲ್ಲೂ ಜಿಲೇಬಿ ರುಚಿ ಸಖತ್ತಾಗಿದೆ. ಅಂದಹಾಗೆ, ರಾಜಸ್ತಾನಿ ಆಹಾರೋತ್ಸವ ಮಾರ್ಚ್ 23ಕ್ಕೆ ಕೊನೆಗೊಳ್ಳಲಿದೆ.

ಸ್ಥಳ: ಗ್ರ್ಯಾಂಡ್ ಮರ್ಕ್ಯುರಿ– ಬೆಂಗಳೂರು, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ. ರಾತ್ರಿ ಊಟ ಮಾತ್ರ ಲಭ್ಯ. ಸಮಯ: ಸಂಜೆ 7ರಿಂದ 11. ಟೇಬಲ್ ಕಾಯ್ದಿರಿಸಲು: 4512 1212.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.