ಹಾಸನ: ಜನರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಶಂಕರ ಮಠ ರಸ್ತೆ ಹಾಗೂ ಸಂಪಿಗೆ ರಸ್ತೆಗಳಲ್ಲಿ ಪುನಃ ಏಕಮುಖ ಸಂಚಾರ ಜಾರಿ ಮಾಡಿರುವುದು ಆ ರಸ್ತೆಯಲ್ಲಿ ದಿನನಿತ್ಯ ಓಡಾಡುವವರಿಗೆ ಸಂತಸ ತಂದಿದೆ. ಆದರೆ ಬಸಟ್ಟಿಕೊಪ್ಪಲು ಮುಖ್ಯರಸ್ತೆಯ ನಾಲ್ಕುರಾಟೆ ಬಾವಿ ಸಮೀಪದಲ್ಲಿ ಉಂಟಾಗಿರುವ ಗೊಂದಲಕ್ಕೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ.

ಆರ್.ಸಿ. ರಸ್ತೆ ಸ್ಲೇಟರ್ಸ್ ಹಾಲ್ ಮುಂದಿನಿಂದ ಹೋಗುವ ಈ ರಸ್ತೆ ನಾಲ್ಕುರಾಟೆ ಬಾವಿ ಸಮೀಪದವರೆಗೂ ಸಾಕಷ್ಟು ಅಗಲವಾಗಿದೆ. ರಸ್ತೆ ವಿಸ್ತರಿಸುವ ಉದ್ದೇಶದಿಂದಲೋ ಅಥವಾ ಇನ್ಯಾವ ಕಾರಣದಿಂದಲೋ ರಸ್ತೆ ಬದಿಯಲ್ಲಿದ್ದ ಒಂದು ದೇವಸ್ಥಾನವನ್ನು ಕೆಲವು ತಿಂಗಳ ಹಿಂದೆ ತೆರವು ಮಾಡಲಾಗಿದೆ. ಆದರೆ ರಸ್ತೆ ವಿಸ್ತರಿಸಿಲ್ಲ, ಫುಟ್ಪಾತ್ ನಿರ್ಮಾಣದ ಲಕ್ಷಣ ಕಾಣಿಸುತ್ತಿಲ್ಲ. ಆದರೂ ಇಲ್ಲಿ ಸಂಚಾರಕ್ಕೆ ಅಷ್ಟು ತೊಂದರೆಯಾಗುತ್ತಿಲ್ಲ. ಆದರೆ ನಾಲ್ಕುರಾಟೆ ಬಾವಿ ಸಮೀಪದ ಸುಮಾರು 50 ಮೀಟರ್ ಉದ್ದದ ರಸ್ತೆ ಮಾತ್ರ ಚಾಲಕರಿಗೆ ದುಃಸ್ವಪ್ನವಾಗಿ ಕಾಡುತ್ತದೆ.

ಮೊದಲೇ ಇಕ್ಕಟ್ಟಾದ ಮತ್ತು ಸದಾ ವಾಹನಗಳಿಂದ ಗಿಜಿಗುಡುವ ರಸ್ತೆ ಇದು. ಅಗಲಕಿರಿದಾದ ರಸ್ತೆಯಲ್ಲಿ ಭಾರಿ ವಾಹನಗಳು ಸಂಚಾರ ಮಾಡಿದರೆ ಹೇಗಿರುತ್ತದೆ ಎಂದು ನೋಡಲು ಇಲ್ಲಿಗೆ ಬರಬೇಕು. ನಾಲ್ಕೈದು ರಸ್ತೆಗಳು ಸೇರುವ, ಕಿಷ್ಕಿಂಧೆಯಂಥ ಈ ಜಾಗದಲ್ಲೂ ಕೆಲವು ಮಹಾನುಭಾವರು ಕಾರು, ಆಟೋ, ದ್ವಿಚಕ್ರ ವಾಹನ ನಿಲ್ಲಿಸಿ ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಲಾರಿ ಅಥವಾ ಬಸ್ ಬಂತೆಂದರೆ ಕನಿಷ್ಠ 15 ನಿಮಿಷವಾದರೂ ಟ್ರಾಫಿಕ್ ಜಾಮ್ ಎಂದೇ ಅರ್ಥ.

ಹಿಂದೆ ಆಗೊಮ್ಮೆ ಈಗೊಮ್ಮೆ ಲಾರಿಗಳು ಬರುತ್ತಿದ್ದವು. ರಸ್ತೆ ಸಾರಿಗೆ ನಿಗಮದವರು ನಗರ ಸಾರಿಗೆ ಆರಂಭಿಸಿದನಂತದ ನಿಗದಿತ ಸಮಯದಲ್ಲಿ ಇಲ್ಲಿ ಬಸ್ಸುಗಳೂ ಬರುತ್ತವೆ. ದಿನಕ್ಕೆ ಕನಿಷ್ಠ ಒಮ್ಮೆಯಾದರೂ ಇಲ್ಲಿ ಎರಡು ಬಸ್ಸುಗಳು ಮುಖಾಮುಖಿಯಾಗುತ್ತವೆ. ಇಂಥ ಸಂದರ್ಭದಲ್ಲೆಲ್ಲ ಇಲ್ಲಿ ಟ್ರಾಫಿಕ್ ಜಾಮ್ ಸಹಜ. ಈ ಜಾಗದಲ್ಲಿ ಸಣ್ಣ ಪುಟ್ಟ ಜಗಳಗಳಂತೂ ನಿತ್ಯದ ಮಾತಾಗಿದೆ.

ಈ ರಸ್ತೆ ಪಕ್ಕದಲ್ಲಿ ಈಚೆಗೆ ಚರಂಡಿ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಚರಂಡಿಯಿಂದ ತೆಗೆದು ರಸ್ತೆಯ ಮೇಲೆ ಹಾಕಿರುವ ಮಣ್ಣನ್ನು ಇನ್ನೂ ತೆಗೆದಿಲ್ಲ. ಜತೆಗೆ ಮಳೆಯೂ ಸುರಿಯುತ್ತಿದೆ. ಮಳೆ ನಿಲ್ಲುವವರೆಗೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ, ರಸ್ತೆ ಬದಿಗೆ ಹಾಕಿದ ಮಣ್ಣನ್ನೂ ತೆಗೆಯುವುದು ಅನುಮಾನವೇ. ಆದ್ದರಿಂದ `ಎಷ್ಟು ದಿನ ಈ ಕಷ್ಟ~ ಎಂದು ಜನರು ಪ್ರಶ್ನಿಸುತ್ತಿರಲೇಬೇಕು.

ಸೈಜುಗಲ್ಲುಗಳನ್ನು ಬಳಸಿ ನಿರ್ಮಿಸಿರುವ ಮತ್ತು ಸುಸ್ಥಿತಿಯಲ್ಲಿರುವ ಈ ಭಾಗದ ಚರಂಡಿಯನ್ನು ಒಡೆದು ಪುನಃ ನಿರ್ಮಾಣ ಮಾಡುತ್ತಿರುವುದೇಕೆ ? ಎಂಬುದು ಈ ಭಾಗದ ಜನರಿಗೆ ಇನ್ನೂ ಅರ್ಥವಾಗಿಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಕೆಲವು ಸದಸ್ಯರು ಪ್ರಶ್ನೆ ಕೇಳಿದ್ದರು. ಚರಂಡಿ ಮಾಡದಿದ್ದರೂ, ಸದ್ಯಕ್ಕೆ ರಸ್ತೆ ಪಕ್ಕ ಹಾಕಿರುವ ಮಣ್ಣಿನ ರಾಶಿಯನ್ನಾದರೂ ತೆಗೆಯಬೇಕು ಎಂದು ಇಲ್ಲಿನ ವ್ಯಾಪಾರಿಗಳು, ಪಾದಚಾರಿಗಳು ಒತ್ತಾಯಿಸುತ್ತಿದ್ದಾರೆ.

ನಾಲ್ಕುರಾಟೆ ಬಳಿ ನಿರ್ಮಾಣವಾಗುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇನು ಎಂಬುದು ನಗರಸಭೆಗೆ ಗೊತ್ತಿರುವ ವಿಚಾರ. ಈ ಹಿಂದೆಯೂ ಒಂದೆರಡು ಬಾರಿ ಸಮೀಕ್ಷೆ ನಡೆಸಿದ್ದರೂ ರಸ್ತೆ ಅಗಲಗೊಳಿಸುವ ಕಾರ್ಯವನ್ನು ಯಾರೂ ಮಾಡಿಲ್ಲ. ಒಂದು ದುರ್ಘಟನೆ ಸಂಭವಿಸುವವರೆಗೆ ಸುಮ್ಮನಿರುವುದು ನಮ್ಮ ವ್ಯವಸ್ಥೆಯ ಭಾಗವಾಗಿರುವುದರಿಂದ ಇನ್ನೂ ಒಂದಿಷ್ಟು ದಿನ ಕಾಯಬೇಕಾಗಬಹುದು ಅಷ್ಟೇ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.