ಗುರುವಾರ , ಜನವರಿ 23, 2020
23 °C

ನಾಳೆಯಿಂದ ನಗರದಲ್ಲಿ ಹರ್ಷ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಡುಪಿ ಮೂಲದ ಪ್ರಕಾಶ್ ರಿಟೇಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸುತ್ತಿದೆ. ನಗರದ ಮೈಸೂರು ರಸ್ತೆಯ ನಾಯಂಡನಹಳ್ಳಿ ಬಳಿ ನಿರ್ಮಾಣವಾಗಿರುವ `ಹರ್ಷ~ ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಳಿಗೆಯು ಇದೇ 6ರಂದು ಉದ್ಘಾಟನೆಯಾಗಲಿದೆ.ಮಳಿಗೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ (ನಿರ್ವಹಣೆ) ಅಶೋಕ್ ಕುಮಾರ್, `ಪ್ರಕಾಶ್ ರಿಟೇಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಒಂಬತ್ತನೇ ಮಳಿಗೆಯನ್ನು ರಾಜ್ಯದಲ್ಲಿ ಆರಂಭಿಸುತ್ತಿದೆ. ಇದು ಬೆಂಗಳೂರಿನಲ್ಲಿ ಮೊದಲ ಮಳಿಗೆಯಾಗಿದ್ದು, ಒಂದೇ ಸೂರಿನಡಿ ಗುಣಮಟ್ಟದ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ಉಪಕರಣಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ~ ಎಂದು ಹೇಳಿದರು.`ಉಡುಪಿಯಲ್ಲಿ 1987ರಲ್ಲಿ ಸಂಸ್ಥೆಯು ಮೊದಲ ಮಳಿಗೆ ಆರಂಭಿಸಿತು. ಬಳಿಕ ಮಂಗಳೂರು, ಪುತ್ತೂರು, ಕುಂದಾಪುರ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಹಾಗೂ ಧಾರವಾಡಗಳಲ್ಲಿ ಮಳಿಗೆಗಳನ್ನು ತೆರೆಯಲಾಯಿತು. ಇದೀಗ ನಗರದ ನಾಯಂಡನಹಳ್ಳಿಯಲ್ಲಿ ನೂತನ ಮಳಿಗೆ ತೆರೆಯಲಾಗಿದೆ~ ಎಂದರು.`ಮೂರು ಮಹಡಿ ಕಟ್ಟಡದಲ್ಲಿ ಸುಮಾರು 26,000 ಚದರ ಅಡಿ ವಿಸ್ತೀರ್ಣದಲ್ಲಿ ಮಳಿಗೆ ಆರಂಭಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತವೆನಿಸಿರುವ ಕಂಪೆನಿಗಳ ಎಲೆಕ್ಟ್ರಾನಿಕ್ ಉಪಕರಣಗಳ ವೈವಿಧ್ಯ ಸಂಗ್ರಹಣೆ ಮಳಿಗೆಯಲ್ಲಿದೆ. ಪ್ರತಿಯೊಂದು ಉಪಕರಣಕ್ಕೆ ಸಂಬಂಧಪಟ್ಟಂತೆ ನಾಲ್ಕೈದು ಬ್ರಾಂಡ್‌ನ ವಸ್ತುಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಹಾಗೆಯೇ ಉಪಕರಣಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ಸೌಲ್ಯವೂ ಇದೆ~ ಎಂದು ಮಾಹಿತಿ ನೀಡಿದರು.`ವಿವಿಧ ಬ್ರಾಂಡಿನ ಉಪಕರಣಗಳು, ವೈವಿಧ್ಯದ ಬಣ್ಣ, ಆಕಾರ ಹಾಗೂ ಗಾತ್ರದ ಉಪಕರಣಗಳ ಹೇರಳ ಸಂಗ್ರಹವಿದೆ. ಇದರಿಂದ ಗ್ರಾಹಕರ ಆಯ್ಕೆಗೆ ಹೆಚ್ಚು ಅವಕಾಶವಿದೆ. ಕಲರ್ ಟಿವಿ, ಎಲ್‌ಸಿಡಿ, ಪ್ಲಾಸ್ಮಾ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಿಷಿನ್, ಗೃಹೋಪಯೋಗಿ ಉಪಕರಣಗಳು, ಕ್ಯಾಮೆರಾ, ಲ್ಯಾಪ್‌ಟಾಪ್, ವಾಟರ್ ಹೀಟರ್... ಹೀಗೆ ಎಲ್ಲ ಬಗೆಯ ಎಲೆಕ್ಟ್ರಾನಿಕ್ ಉಪಕರಣಗಳು ದೊರೆಯಲಿವೆ~ ಎಂದರು.`ಸಂಸ್ಥೆಯ ವಹಿವಾಟು 100 ಕೋಟಿ ರೂಪಾಯಿ ದಾಟಿದ ಬಳಿಕ ಬೆಂಗಳೂರಿನಲ್ಲಿ ಮಳಿಗೆ ಆರಂಭಿಸಲು ನಿರ್ಧರಿಸಲಾಗಿತ್ತು. ಅದರಂತೆ ಕಳೆದ ವರ್ಷ ಸಂಸ್ಥೆಯ ವಹಿವಾಟು 100 ಕೋಟಿ ರೂಪಾಯಿ ಮೀರಿದೆ. ಸದ್ಯ 125 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದ್ದು, ವರ್ಷದೊಳಗೆ ವಹಿವಾಟಿನ ಪ್ರಮಾಣ ರೂ 150 ಕೋಟಿಗೆ ತಲುಪುವ ಗುರಿ ಇದೆ~ ಎಂದರು.`ಮುಂದಿನ ವರ್ಷ ಬೆಂಗಳೂರಿನಲ್ಲೇ ಮತ್ತೊಂದು ಮಳಿಗೆ ಆರಂಭಿಸಲು ಚಿಂತಿಸಲಾಗಿದೆ. ನಗರದಲ್ಲಿ ಒಟ್ಟು ಆರು ಮಳಿಗೆಯನ್ನು ತೆರೆಯುವ ಉದ್ದೇಶವಿದ್ದು, ಹಂತ ಹಂತವಾಗಿ ಆರಂಭಿಸಲಾಗುವುದು. ಇದೇ 6ರಂದು ಸಂಸದ ಆಸ್ಕರ್ ಫರ್ನಾಂಡಿಸ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ, ಶಾಸಕ ಪ್ರಿಯಕೃಷ್ಣ ಇತರರು ಪಾಲ್ಗೊಳ್ಳಲಿದ್ದಾರೆ ~ ಎಂದು ವಿವರಿಸಿದರು.ಸಂಸ್ಥೆಯ ನಿರ್ದೇಶಕ (ಮಾರುಕಟ್ಟೆ) ಎಂ. ಹರೀಶ್ ಉಪಸ್ಥಿತರಿದ್ದರು. ವಿಳಾಸ: ಹರ್ಷ ಮಳಿಗೆ, ಎಲ್‌ಎಸ್‌ಎಂ ಟವರ್, ನಾಯಂಡನಹಳ್ಳಿ, ಮೈಸೂರು ರಸ್ತೆ.

ಪ್ರತಿಕ್ರಿಯಿಸಿ (+)