ಸೋಮವಾರ, ಜನವರಿ 20, 2020
19 °C
ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ನಾಳೆ ಅಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಜನವರಿ ಏಳರಿಂದ ಮೂರು ದಿನಗಳ ಕಾಲ ಮಡಿಕೇರಿಯಲ್ಲಿ ನಡೆಯ ಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಬುಧವಾರ (ಡಿ.4) ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ತಿಳಿಸಿದರು.ಬೆಂಗಳೂರಿನಲ್ಲಿರುವ ಕಸಾಪ ಕೇಂದ್ರ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 11ಕ್ಕೆ ಆರಂಭಗೊಳ್ಳಲಿರುವ ರಾಜ್ಯ ಕಾರ್ಯ­ಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು. 

ಸಿದ್ಧತೆ ಅಬಾಧಿತ:  ಮಡಿಕೇರಿ ನಗರಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ­ರುವ ಹಿನ್ನೆಲೆ­ಯಲ್ಲಿ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿ­ಯಲ್ಲಿ ಕಾರ್ಯನಿರ್ವಹಿ­ಸುತ್ತಿ­ರುವ ನಗರ­ಸಭೆ ವ್ಯಾಪ್ತಿಯ ಅಧಿ­ಕಾರಿ­ಗಳು ತಟಸ್ಥರಾಗು­ತ್ತಾರೆ. ಜಿಲ್ಲಾ­ಮಟ್ಟದ ಅಧಿ­ಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿ­ದ್ದಾರೆ ಎಂದು ರಮೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ನಾ. ಡಿಸೋಜ ಅಧ್ಯಕ್ಷ?

ಬೆಂಗಳೂರು ವರದಿ:
ಸಾಹಿತ್ಯ ಸಮ್ಮೇಳ­ನದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ, ಸಾಹಿತಿ­ಗಳಾದ ನಾ.­ಡಿಸೋಜ, ಟಿ.ವಿ. ವೆಂಕಟಾಚಲಶಾಸ್ತ್ರಿ, ಡಾ.ಹಂ.ಪ. ನಾಗ­ರಾಜಯ್ಯ, ಚಂದ್ರಶೇಖರ ಕಂಬಾರ, ಸಂಶೋಧಕ ಡಾ.ಎಂ.ಎಂ. ಕಲ್ಬುರ್ಗಿ ಅವರ ಹೆಸರು ಕೇಳಿಬರು­ತ್ತಿವೆ. ಇವರಲ್ಲಿ ನಾ. ಡಿಸೋಜ ಅವರ ಹೆಸರು ಈ ಬಾರಿ ಬಲವಾಗಿ ಕೇಳಿಬರು­ತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)