ಶನಿವಾರ, ಮಾರ್ಚ್ 6, 2021
21 °C

ನಾಳೆ ಬರ್ಕಾ ಋತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆ ಬರ್ಕಾ ಋತು

ಬನ್ಯಾನ್ ಟ್ರಿ: ಶುಕ್ರವಾರ ಮುಂಗಾರು ಸಂಗೀತ ಉತ್ಸವ `ಬರ್ಕಾ ಋತು~.  ಪಂಡಿತ್ ಶಿವಕುಮಾರ್ ಶರ್ಮಾ ಅವರಿಂದ ಸಂತೂರ್ ವಾದನ ಮತ್ತು ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಂದ ಹಿಂದುಸ್ತಾನಿ ಗಾಯನ.ಜಮ್ಮು ಮೂಲದ ಪಂಡಿತ್ ಶಿವಕುಮಾರ್ ಶರ್ಮಾ ವಿಶ್ವವಿಖ್ಯಾತ ಸಂತೂರ್ ವಾದಕ. ಸಂತೂರ್ ಕಾಶ್ಮೀರದ ಜಾನಪದ ವಾದ್ಯ. ಅದರಲ್ಲಿ ಹಿಂದುಸ್ತಾನಿ ರಾಗಗಳನ್ನು ಮೊದಲಿಗೆ ನುಡಿಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಲ್ಲುತ್ತದೆ.

 

ಅದು ಅವರ ತಂದೆ ಸಂಗೀತಗಾರ ಉಮಾ ದತ್ ಶರ್ಮಾ ಅವರ ಸಂಶೋಧನೆಯ ಫಲ. ಮೊದಲು ಕೆಲ ವರ್ಷಗಳ ಕಾಲ ಹಿಂದುಸ್ತಾನಿ ಗಾಯಕರಾಗಿದ್ದ  ಶಿವಕುಮಾರ್ ಶರ್ಮಾ ಆನಂತರ ಸಂತೂರ್‌ಗೆ ತಮ್ಮ ಸಂಗೀತ ಜೀವನ ಮೀಸಲಿಟ್ಟರು.ಮುಂಬೈ ಮೂಲದ ಡಾ. ಅಶ್ವಿನಿ ಭಿಡೆ ದೇಶಪಾಂಡೆ ಜೀವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಆದರೆ ಸಂಗೀತದೆಡೆ ಸೆಳೆತ. ಅದು ಹೆಚ್ಚಾದಾಗ  ಪಿಎಚ್‌ಡಿ. ಮುಗಿದ ನಂತರ ಸಂಗೀತವನ್ನೇ ವೃತ್ತಿಯಾಗಿಸಿಕೊಂಡರು. ಜೈಪುರ- ಅಟ್ರೌಲಿ ಘರಾನಾದ ಪ್ರಮುಖ ಗಾಯಕಿಯಾಗಿರುವ ಅಶ್ವಿನಿ ಸಪ್ತಕಗಳಲ್ಲಿ ಹಿಡಿತ ಸಾಧಿಸಿರುವ ಸಂಗೀತಗಾರ್ತಿ.ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 7. 200 ಮತ್ತು 300 ರೂ ದೇಣಿಗೆ ಪಾಸ್‌ಗಳಿಗೆ: ಕೋರಮಂಗಲದ ಲ್ಯಾಂಡ್‌ಮಾರ್ಕ್ (4240 4240), ಸೇಂಟ್ ಮಾರ್ಕ್ ರಸ್ತೆಯ ಕೆ.ಸಿ. ದಾಸ್ (2559 2021) ಮತ್ತು ಇಂದಿರಾನಗರದ ಒಡಿಸ್ಸಿ (4211 5341). ಆನ್‌ಲೈನ್‌ನಲ್ಲಿ ಟಿಕೆಟ್ www.bookmy show. comಗೆ ಅಥವಾ 3989 5050.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.