ಮಂಗಳವಾರ, ಮೇ 17, 2022
27 °C

ನಾವೀಗ ವಲಸೆಯ ಯುಗದಲ್ಲಿದ್ದೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾವೀಗ ವಲಸೆಯ ಯುಗದಲ್ಲಿದ್ದೇವೆ

ಲಂಡನ್ (ಪಿಟಿಐ):  ತಮ್ಮ  ಹಲವು ಪ್ರಶಸ್ತಿ ಪುರಸ್ಕೃತ ಕೃತಿಗಳಲ್ಲಿ ವಲಸೆ ಕುರಿತು ಪ್ರಸ್ತಾಪಿಸುವಲ್ಲಿ ತಮಗಾಗಿರುವ ಅನುಭವಗಳೇ ಕಾರಣ ಎಂದು ಭಾರತೀಯ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಹೇಳಿದ್ದಾರೆ.ಬ್ರಿಟನ್ನಿನ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ಹೇ ಸಾಂಸ್ಕೃತಿಕ, ಕಲಾ ಉತ್ಸವದಲ್ಲಿ ಸೋಮವಾರ ಮಾತನಾಡಿದ ರಶ್ದಿ, `ನಾವೀಗ ವಲಸೆ ಯುಗದಲ್ಲೇ ಬದುಕುತ್ತಿದ್ದೇವೆ ಎನಿಸುತ್ತಿದೆ. ನೀವು ಜಗತ್ತಿನ ಯಾವುದೇ ನಗರವನ್ನು ಗಮನಿಸಿ, ಅಲ್ಲಿ ವೈವಿಧ್ಯತೆಮಯ ಮಿಶ್ರತಳಿ ಸಂಸ್ಕೃತಿ ಎದ್ದುಕಾಣುತ್ತದೆ. ಏಕ ಸಂಸ್ಕೃತಿಯ ಅಂತ್ಯಕ್ಕೆ ನಮ್ಮ ತಲೆಮಾರು ಸಾಕ್ಷಿಯಾಗಿದೆ~ ಎಂದರು.`ನಾನೊಬ್ಬ ವಲಸೆಗಾರ. ವಲಸೆ ಹೋದವರು ಅವರ ಅಸ್ತಿತ್ವ ಪ್ರತಿನಿಧಿಸುವ ಹಲವು ಸಂಪ್ರದಾಯಗಳಿಂದ ವಂಚಿತರಾಗಬೇಕಾಗುತ್ತದೆ. ಇಂತಹ ವ್ಯಕ್ತಿಗಳು ವಿಭಿನ್ನ ಸ್ಥಳದಲ್ಲಿರುವುದರ ಜತೆಯಲ್ಲಿ ಪರಕೀಯ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ಜನಸಮುದಾಯದಲ್ಲಿ ಇಂತಹ ವ್ಯಕ್ತಿಗಳ ಅಸ್ತಿತ್ವವೂ ಅಷ್ಟಕ್ಕಷ್ಟೆ. ಅವರ ಸಾಂಸ್ಕೃತಿಕ ಊಹೆಗಳು ಸಹ ವಿಭಿನ್ನವಾಗಿರುತ್ತವೆ. ಇದು ನೋವುಂಟು ಮಾಡುವ ಸನ್ನಿವೇಶ~ ಎಂದು ಅವರು ಅಭಿಪ್ರಾಯಪಟ್ಟರು.ಮುಲ್ಲಾಗಳಿಗಾಗಿ ಬರೆಯಲಿಲ್ಲ: ಇದೇ ಸಂದರ್ಭದಲ್ಲಿ ತಮ್ಮ ತಲೆದಂಡದ ಫತ್ವಾಕ್ಕೆ ಕಾರಣವಾದ ವಿವಾದಿತ ಕೃತಿ `ಸೆಟಾನಿಕ್ ವರ್ಸಸ್~ ಕುರಿತು ಮಾತನಾಡಿದ ರಶ್ದಿ,  ಈ  ಕೃತಿಯನ್ನು ಮುಲ್ಲಾಗಳಿಗಾಗಿ ಬರೆಯಲಿಲ್ಲ ಎಂದು  ಸ್ಪಷ್ಟಪಡಿಸಿದರು.ಸೆಟಾನಿಕ್ ವರ್ಸಸ್ ವಿರೋಧಿಸಿ ಫತ್ವಾ ಹೊರಡಿಸಿದ್ದಕ್ಕೆ ವ್ಯಂಗ್ಯವಾಡಿದ ಅವರು, ಪುಸ್ತಕ ಇಷ್ಟಪಡುವವರಿಗಾಗಿ ಕೃತಿಗಳನ್ನು ಹೊರತರಲಾಗುತ್ತದೆ. ಸೆಟಾನಿಕ್ ವರ್ಸಸ್ ಅನ್ನು ಖಂಡಿತವಾಗಿ ಮುಲ್ಲಾಗಳಿಗಾಗಿ ಬರೆಯಲಿಲ್ಲ. ಸಾಕಷ್ಟು ಜನ ಇಷ್ಟಪಡುತ್ತಿರುವುದರಿಂದಲೇ ಪುಸ್ತಕಗಳು ಖಾಲಿಯಾಗುತ್ತಿವೆ ಹೊರತೂ ಅವುಗಳ ಮೇಲೆ ದಾಳಿ ಮಾಡಿದವರಿಂದಲ್ಲ~ ಎಂದು ಕುಟುಕಿದರು.`ಸೆಟಾನಿಕ್ ವರ್ಸಸ್~ ವಿರೋಧಿಸಿ 1989ರಲ್ಲಿ ಇರಾನ್‌ನ ನಾಯಕ ಆಯತೊಲ್ಲಾ ಖೊಮೇನಿ ಲೇಖಕ ರಶ್ದಿ ತಲೆದಂಡಕ್ಕೆ ಫತ್ವಾ ಹೊರಡಿಸಿದ್ದರು. ಭಾರತದಲ್ಲೂ ಈ ಕೃತಿಯ ಮೇಲೆ ನಿಷೇಧ ಹೇರಲಾಗಿತ್ತು. ಮುಸ್ಲಿಂ ಸಮುದಾಯದ ತೀವ್ರ ವಿರೋಧಕ್ಕೆ ಕಾರಣವಾದ ಕೃತಿ ನಿಷೇಧಕ್ಕೆ ಜಗತ್ತಿನ ಹಲವೆಡೆ ಪ್ರತಿಭಟನೆಗಳು ನಡೆದದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.