ಶುಕ್ರವಾರ, ಜೂನ್ 25, 2021
30 °C

ನಿಂದಕರಿಗೆ ಮತ್ತೆ ಅವರೇ ಗತಿ

ರವಿಸಾಗರ್,ಬೆಂಗಳೂರು Updated:

ಅಕ್ಷರ ಗಾತ್ರ : | |

ಹಿಂದೊಮ್ಮೆ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿಕೊಂಡಿದ್ದ ಬಿಜೆಪಿಗೆ ಮತದಾರ ತಕ್ಕ ಪಾಠ ಕಲಿಸಿದ್ದ. ಅತ್ಯಂತ  ಹೆಚ್ಚು ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿಜೆಪಿ ಯ ನಾಯಕ, ಮುಖ್ಯಮಂತ್ರಿ  ಸ್ಥಾನದಲ್ಲಿದ್ದಾಗಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು ಇನ್ನೂ ಜನಮಾನಸದಲ್ಲಿ ಹಾಗೆಯೇ ಇದೆ. ಇದಾದ ಬಳಿಕ  ಭ್ರಷ್ಟರನ್ನು ಹೊರ ಹಾಕಿ ಪಾಪ ತೊಳೆದು ಕೊಂಡೆವು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಳ್ಳುತ್ತಿದ್ದವರು. ಈಗ ಅವರ ಕಾಲು ಹಿಡಿದು ತಲೆ ಮೇಲೆ ಹೊತ್ತು ತಿರುಗುತ್ತಿರುವುದು ಕನ್ನಡಿಗರ ದುರಂತ. ಭ್ರಷ್ಟಾಚಾರ ಸಹಿತವಾಗಿ ಈ ದೇಶದ ಅಭಿವೃದ್ಧಿಯ ಕಲ್ಪನೆ ಅತ್ಯಂತ ಬಾಲಿಶ.   ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ  ಅಸಾಧ್ಯ. ಆದರೆ ಅದಕ್ಕೆ ಕಡಿವಾಣ ಹಾಕುವುದು ಅತೀ

ಅವಶ್ಯಕ.

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.