ಜೋಹಾನ್ಸ್ಬರ್ಗ್: ಭಾರತದ ಕ್ರಿಕೆಟ್ ಪ್ರೇಮಿಗಳ ಮೊಗದ ಮೇಲೆ ಮೂಡಿದ್ದ ಆತಂಕ ದೂರ ಮಾಡಿದ್ದು ಮೊಹಮ್ಮದ್ ಶಮಿ. ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲುವಿಗೆ ಅಗತ್ಯವಿದ್ದ 16 ರನ್ ನೀಡದೆ ಶಮಿ ‘ಹೀರೋ’ ಆಗಿ ಮೆರೆದರು. ಇದರಿಂದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಕಂಡಿತು.

ಶನಿವಾರ ಎರಡನೇ ಇನಿಂಗ್ಸ್ನಲ್ಲಿ ಆತಿಥೇಯ ತಂಡದ ಎರಡು ವಿಕೆಟ್ಗಳನ್ನು ಉರುಳಿಸಿದ್ದ ಮಹೇಂದ್ರ ಸಿಂಗ್ ದೋನಿ ಬಳಗ ಈ ಟೆಸ್ಟ್ನಲ್ಲಿ ಗೆಲುವು ಕಾಣುವ ಆಸೆ ಹೊಂದಿತ್ತು. ಆದರೆ, ಭಾನುವಾರ ಡ್ರಾ ಸಾಧಿಸಿದರೆ ಸಾಕು ಎನ್ನುವಂಥ ಸ್ಥಿತಿ ಎದುರಾಯಿತು.

ಫಾಫ್ ಡು ಪ್ಲೇಸಿಸ್ (134) ಮತ್ತು ಎ.ಬಿ. ಡಿವಿಲಿಯರ್ಸ್್ (103) ಶತಕ ಗಳಿಸಿ ಪ್ರವಾಸಿ ತಂಡದ ಕೈಯಿಂದ ಪಂದ್ಯ ಕಿತ್ತುಕೊಳ್ಳುವ ಪ್ರಯತ್ನ ನಡೆಸಿದರಾದರೂ, ಭಾರತದ ವೇಗಿಗಳು ಇದಕ್ಕೆ ಅವಕಾಶ ನೀಡಲಿಲ್ಲ.

ಆತಿಥೇಯ ತಂಡ ಗೆಲುವು ಪಡೆಯಲು ದ್ವಿತೀಯ ಇನಿಂಗ್ಸ್ನಲ್ಲಿ 458 ರನ್ ಗಳಿಸಬೇಕಿತ್ತು. ಆದರೆ, 136 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 450 ರನ್ ಕಲೆ ಹಾಕಿ ಗೆಲುವಿನಂಚಿನಲ್ಲಿ ಎಡವಿತು. ಇದರಿಂದ ಭಾರತ ನಿಟ್ಟುಸಿರು ಬಿಟ್ಟಿತು.135ನೇ ಓವರ್ ಬೌಲ್ ಮಾಡಿದ ವೇಗಿ ಜಹೀರ್ ಖಾನ್ ಒಂದೂ ರನ್ ನೀಡದ ಕಾರಣ ಪಂದ್ಯ ಡ್ರಾ ಹಾದಿ ಹಿಡಿಯಿತು.

ಹರಿಣಗಳ ನಾಡಿನಲ್ಲಿ ಭಾರತ ತಂಡ ಇದುವರೆಗೆ ಒಮ್ಮೆಯೂ ಟೆಸ್ಟ್್ ಸರಣಿ ಜಯಿಸಿಲ್ಲ. 21 ವರ್ಷಗಳ ಅವಧಿಯಲ್ಲಿ ಗೆದ್ದಿರುವುದು ಎರಡು ಟೆಸ್ಟ್ ಪಂದ್ಯಗಳನ್ನು ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.