ರಾಮನಗರ: ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಶುಕ್ರವಾರ ದಿಢೀರನೆ ಭೇಟಿ ನೀಡಿ, `ಆಶ್ರಮದಲ್ಲಿ ಭೂ ಪರಿವರ್ತನೆಯಾಗದೆ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಬಾರದು~ ಎಂದು ಎಚ್ಚರಿಕೆ ನೀಡಿದ್ದಾರೆ.

`ನಿತ್ಯಾನಂದ ಸ್ವಾಮೀಜಿ ಅವರಿಗೆ ಬಿಡದಿ ಬಳಿ 22.20 ಎಕರೆ ಭೂಮಿ ದಾನ ರೂಪದಲ್ಲಿ ಬಂದಿದೆ. ಈ ಹಿಂದೆ ಅವರು ಎರಡು ಎಕರೆ ಭೂಮಿಯನ್ನು ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಪರಿವರ್ತನೆಯಾಗದ ಭೂಮಿಯಲ್ಲಿ ಕಟ್ಟಡ ಕಾರ್ಯಗಳನ್ನು ಕೈಗೊಳ್ಳದಂತೆ ಹಿಂದೆ ಸೂಚಿಸಲಾಗಿತ್ತು. ಅದನ್ನು ಪರಿಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು~ ಆಶ್ರಮಕ್ಕೆ ಭೇಟಿ ನೀಡಿದ್ದಾಗಿ ಜಿಲ್ಲಾಧಿಕಾರಿ ಪುಟ್ಟಸ್ವಾಮಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

`ಆಶ್ರಮಕ್ಕೆ ಭೇಟಿ ನೀಡಿದ್ದ ವಿದೇಶಿ ಭಕ್ತರ ಜತೆ ಸ್ವಾಮೀಜಿ ಇದ್ದುದರಿಂದ, ಅವರನ್ನು ಭೇಟಿಯಾಗಿಲ್ಲ~ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.