ಮಂಗಳವಾರ, ಮೇ 11, 2021
27 °C
ಮಾಡಿ ನಲಿ ಸರಣಿ -19

ನಿನ್ನ ನಡೆ ಯಾವ ಕಡೆ?

ಪ್ರೊ.ಸಿ.ಡಿ. ಪಾಟೀಲ್ Updated:

ಅಕ್ಷರ ಗಾತ್ರ : | |

 ಸಾಮಗ್ರಿ: ಮೆಕ್ಕೆ ಜೋಳದ ಬೀಜಗಳು, ಮಣ್ಣು, ಅಗಲ ಬಾಯಿಯ ಪಾತ್ರೆ, ನೀರು.



ವಿಧಾನ 1. ಒಂದು ಪ್ಲಾಸ್ಟಿಕ್ ಬಟ್ಟಲನ್ನು ತೆಗೆದುಕೊಳ್ಳಿ ಅದರಲ್ಲಿ ಮುಕ್ಕಾಲಕ್ಕೂ ಹೆಚ್ಚು, ಪುಡಿ ಮಾಡಿದ ತೋಟದ ಮಣ್ಣನ್ನು ತೆಗೆದುಕೊಳ್ಳಿ.

        2. ಚಿತ್ರದಲ್ಲಿ ತೋರಿಸಿದಂತೆ ಮೂರು ಮೆಕ್ಕೆಜೋಳದ ಬೀಜಗಳನ್ನು ಮಣ್ಣಿನಲ್ಲಿ ನೆಟ್ಟು, ಎರಡು ದಿನಗಳಿಗೊಮ್ಮೆ ನೀರುಣಿಸಿ. ಪಾತ್ರೆಯಲ್ಲಿ ನೀರು ನಿಲ್ಲುವಂತೆ ಹಾಕಬಾರದು.

        3. 8-10 ದಿವಸ ನೀರುಣಿಸಿ.



ಪ್ರಶ್ನೆ: 1. ಬೀಜದಿಂದ ಹೊರಟ ಬೇರಿನ ಮೂಲ (Radicle) ಹಾಗೂ ಮೊಳಕೆಗಳು (Plunule) ಹೇಗೆ ಬೆಳೆಯುತ್ತವೆ? ಏಕೆ?



ಉತ್ತರ : ಎಡಗಡೆ ಬೀಜದ ಕೆಳಭಾಗದಿಂದ ಬೇರು ಮೂಲ ಹಾಗೂ ಮೇಲ್ಭಾಗದಿಂದ ಮೊಳಕೆಗಳು ನೇರವಾಗಿ ಬೆಳೆಯುತ್ತವೆ. ಮದ್ಯದ ಬೀಜದಲ್ಲಿ ಬೇರು ಮೂಲ ಹಾಗೂ ಮೊಳಕೆಗಳು ನೇರವಾಗಿ ಬೆಳೆದು ಅನಂತರ ಬೇರು ಭೂಮಿಯ ಕಡೆಗೆ ಮತ್ತು ಮೊಳಕೆ  ಅದರ ವಿರುದ್ಧ ದಿಕ್ಕಿಗೆ ಬೆಳೆಯುತ್ತವೆ.



ಕೊನೆಯ ಬೀಜದಲ್ಲಿ ಬೇರು ಮೂಲ ಹಾಗೂ ಮೊಳಕೆ ಹೊರಬಂದು ಚಿತ್ರದಲ್ಲಿ ತೋರಿಸಿದಂತೆ ಬೆಳೆಯುತ್ತವೆ. ಸಸ್ಯದಲ್ಲಿರುವ ಆಕ್ಸಿನ್‌ಗಳು ಇಂಥ ಬೆಳವಣಿಗೆಗೆ ಕಾರಣ. ಸಸ್ಯದಲ್ಲಿನ ಬೇರು ಭೂಮಿಯ (ಗುರುತ್ವಾಕರ್ಷಣೆಯ) ಕಡೆಗೆ ಹಾಗೂ ಕಾಂಡವು ಅದರ ವಿರುದ್ಧ ದಿಕ್ಕಿಗೆ ಬೆಳೆಯುತ್ತವೆ ಎಂದು ತಿಳಿಯುತ್ತದೆ. ಈ ಗುಣ ಬೀಜದಲ್ಲಿ ಇರದಿದ್ದರೆ ನಮಗೆ ಹಣ್ಣುಗಳೇ ಸಿಗುತ್ತಿರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.