ಬೆಂಗಳೂರು: `ಸರ್ವಜ್ಞ ಕನ್ನಡದ ಜನ ಸಾಮಾನ್ಯರ ಕವಿಯಾಗಿದ್ದವನು. ಸರ್ವಜ್ಞನ ವಚನಗಳು ಸಮಾಜಕ್ಕೆ ದಾರಿ ದೀಪವಾಗಿರುವಂತವು~ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಇತ್ತೀಚೆಗೆ ಶ್ರೀ ರಾಮಪುರದ ಸರ್ವಜ್ಞ ಮಿತ್ರ ವೃಂದದ 39 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರಾಂತಿ ಕವಿ ಸರ್ವಜ್ಞ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಚಲನಚಿತ್ರ ನಿರ್ದೇಶಕ ಭಗವಾನ್, `ಸರ್ವಜ್ಞಮೂರ್ತಿ ಚಲನಚಿತ್ರವನ್ನು 60ರ ದಶಕದಲ್ಲಿ ಬಹಳ ನಿರೀಕ್ಷೆಯಿಂದ ನಿರ್ಮಿಸಲಾಯಿತು. ರಾಜಕುಮಾರ್ ಹಾಗೂ ಹರಿಣಿ ಅಭಿನಯಿಸಿದ್ದ ಚಿತ್ರ ಚೆನ್ನಾಗಿ ಮೂಡಿ ಬಂದರೂ ಯಶಸ್ಸು ಕಾಣಲಿಲ್ಲ~ ಎಂದರು.

ಕಾರ್ಯಕ್ರಮದಲ್ಲಿ ಗಾಂಧಿ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್, ಸರ್ವಜ್ಞ ಮಿತ್ರ ವೃಂದದ ಅಧ್ಯಕ್ಷ ಕೆ.ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.