ವಾಷಿಂಗ್ಟನ್ (ಪಿಟಿಐ): ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ಹೂಡಿದ್ದ ಸಿಖ್ ಪ್ರತ್ಯೇಕತಾವಾದಿ ಸಂಘಟನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪದ ಮೇಲೆ ಡಿ.17ರಂದು ಬಂಧಿತನಾದ ಭಾರತ ಮೂಲದ ಅಮೆರಿಕ ಸಿಖ್ ಪ್ರಜೆ, ತಾನು ನಿರ್ದೋಷಿ ಎಂದು ನೆವಡಾ ನ್ಯಾಯಾಲಯದಲ್ಲಿ ವಾದಿಸಿದ್ದಾನೆ.

ಆರೋಪಿಯು ತನ್ನ ನಿಜ ಹೆಸರು ಬಲ್ಜಿತ್ ಎಂದಿದ್ದು, ಅಮೆರಿಕ ಅಟಾರ್ನಿ ಕಚೇರಿ ತಿಳಿಸಿದಂತೆ ಬಲ್ವಿಂದರ್ ಸಿಂಗ್ (39) ಅಲ್ಲ ಎಂದಿದ್ದಾನೆ.

ಆರೋಪಿ ಎರಡು ಭಯೋತ್ಪಾದಕ ಸಂಘಟನೆಗಳಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಹಾಗೂ ಖಲೀಸ್ತಾನ್ ಜಿಂದಾಬಾದ್ ಫೋರ್ಸ್ (ಕೆಝಡ್)ಗಳೊಂದಿಗೆ ಸಂಪರ್ಕ ಹೊಂದಿದ್ದನೆಂದು ಹೇಳಲಾಗಿದೆ.

ಬಲ್ವಿಂದರ್ ವಿರುದ್ಧ ದಾಖಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಕೊಲೆ, ಅಪಹರಣ, ಭಯೋತ್ಪಾದನೆಗೆ ಶಸ್ತ್ರಾಸ್ತ್ರಗಳ ಪೂರೈಕೆ, ಸುಳ್ಳು ಗುರುತಿನ ಚೀಟಿ ಹಾಗೂ ವಲಸೆ ಬಂದ ದಾಖಲೆಯಲ್ಲಿ ಸುಳ್ಳು ಹೇಳಿಕೆ ನೀಡಿದ ಆಪಾದನೆಗಳಿವೆ. ಫೆ.11ರಂದು ಪ್ರಾಥಮಿಕ ವಿಚಾರಣೆ ನಿಗದಿಗೊಳಿಸಲಾಗಿದ್ದು, ಸಿಂಗ್ ಮೇಲಿನ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.