ಮಂಗಳವಾರ, ಜನವರಿ 28, 2020
18 °C

ನಿರ್ಧಾರ ಮಾಡಿಲ್ಲ ನ್ಯಾ. ಗಂಗೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿ­ಸಿ­ರುವ ಯುವ ವಕೀಲೆ ಒಂದು ವೇಳೆ ಪೊಲೀಸ್‌ ಪ್ರಕರಣ ದಾಖಲಿಸಿದಲ್ಲಿ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಇನ್ನೂ  ನಿರ್ಧಾರಮಾಡಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ­ಮೂರ್ತಿ ಅಶೋಕ ಕುಮಾರ್‌ ಗಂಗೂಲಿ­ ತಿಳಿಸಿದ್ದಾರೆ.ಈ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಸಿಟ್ಟಿನಿಂದಲೇ ಉತ್ತರಿಸಿದ ನ್ಯಾ. ಗಂಗೂಲಿ, ‘ಅನೇಕರು ನನ್ನ ಹೇಳಿಕೆ­ಗಳನ್ನು ತಿರುಚುತ್ತಿದ್ದಾರೆ. ಈಗಿನ ಸನ್ನಿ­ವೇಶದಲ್ಲಿ ನಾನು ಈ ಬಗ್ಗೆ ಯಾವುದೇ ನಿರ್ಧಾರಕ್ಕೂ ಬಂದಿಲ್ಲ’ ಎಂದರು.ಘಟನೆಯ ಬಗ್ಗೆ ಠಾಣೆಯಲ್ಲಿ ಎಫ್‌ಐ­ಆರ್‌ ದಾಖಲಿಸುವಂತೆ ಮಹಿಳಾ­­ ಹಕ್ಕು ಕಾರ್ಯಕರ್ತೆ ಸಂತಶ್ರೀ ಅವರು­ ­ಮಂಗಳ­­­­ವಾರ ಯುವ ವಕೀಲೆಗೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)