ಚೆನ್ನೈ (ಐಎಎನ್ಎಸ್): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ವೈಫಲ್ಯದ ಹಾದಿಯನ್ನೇ ಸವೆಸಿರುವ ಇಂಗ್ಲೆಂಡ್ ತಂಡದ ಆಲ್ರೌಂಡರ್ ಪಾಲ್ ಕಾಲಿಂಗ್ವುಡ್, ನಿಗದಿತ ಓವರ್ಗಳ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಯಾವುದೇ ಯೋಚನೆ ಸದ್ಯಕ್ಕೆ ತಮ್ಮ ಮುಂದಿಲ್ಲ ಎಂದಿದ್ದಾರೆ.ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಟೆಸ್ಟ್ ಕ್ರಿಕೆಟ್ನಿಂದ ಕಾಲಿಂಗ್ವುಡ್ ನಿವೃತ್ತರಾಗಿದ್ದಾರೆ. ವಿಶ್ವಕಪ್ನಲ್ಲಿ ಅವರು ಇದುವರೆಗಿನ ಪಂದ್ಯಗಳಿಂದ ಕೇವಲ 61 ರನ್ ಗಳಿಸಿದ್ದು, ನಾಲ್ಕು ವಿಕೆಟ್ ಪಡೆದಿದ್ದಾರೆ.

‘ಏಕದಿನ ಕ್ರಿಕೆಟ್ನಲ್ಲಿ ಸಾಧ್ಯವಾದಷ್ಟು ಹೆಚ್ಚು ಕಾಲ ಆಡುವ ಉದ್ದೇಶದಿಂದಲೇ ನಾನು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದೇನೆ. ತಂಡಕ್ಕೆ ನಾನಿನ್ನೂ ದೊಡ್ಡ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದೇನೆ ಎಂಬ ನಂಬಿಕೆ ಕೂಡ ಇದೆ.ಈಗಲೂ ನಾನು ಟ್ವೆಂಟಿ-20 ತಂಡದ ನಾಯಕನಾಗಿದ್ದೇನೆ. ನಿವೃತ್ತಿಯ ಯಾವ ಯೋಚನೆಯೂ ಸದ್ಯ ನನ್ನ ಮುಂದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್ ತಂಡ ವಿಶ್ವಕಪ್ ಟೂರ್ನಿಯ ಇದುವರೆಗಿನ ಆಟದಲ್ಲಿ ಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸಿದೆ.ಐರ್ಲೆಂಡ್ ಮತ್ತು ಬಾಂಗ್ಲಾ ವಿರುದ್ಧ ಸೋಲು ಅನುಭವಿಸಿದ ಇಂಗ್ಲೆಂಡ್ ತಂಡ, ಹಾಲೆಂಡ್ ಎದುರು ಸ್ವಲ್ಪದರಲ್ಲೇ ಸೋಲಿನಿಂದ ತಪ್ಪಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೂ ಭಾರತದ ಜೊತೆಗಿನ ಪಂದ್ಯವನ್ನು ‘ಟೈ’ ಮಾಡಿಕೊಂಡಿತ್ತು. ಕ್ವಾರ್ಟರ್ಫೈನಲ್ಗೆ ಮುನ್ನಡೆಯಲು ಆ ತಂಡ ವೆಸ್ಟ್ ಇಂಡಿಸ್ ವಿರುದ್ಧ ಗೆಲ್ಲಲೇಬೇಕಿದೆ. ಆ ಪಂದ್ಯ ಗುರುವಾರ ನಡೆಯಲಿದೆ.ಇಂಗ್ಲೆಂಡ್ ತಂಡದ ಇದುವರೆಗಿನ ಶೋಚನೀಯ ಪ್ರದರ್ಶನ ನಿರಾಸೆ ತಂದಿದೆ ಎಂಬುದನ್ನು ಅವರು ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.