ಮೂಡಿಗೆರೆ: ತಾಲ್ಲೂಕಿನ ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬ ನಿವೇಶನ ರಹಿತರಿಗೆ ತಕ್ಷಣವೆ ನಿವೇಶನ ನೀಡುವಂತೆ ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಒತ್ತಾಯಿಸಿದರು.

ಪಟ್ಟಣಕ್ಕೆ ಗುರುವಾರ ಆಗಮಿಸಿದ ನಿವೇಶನ ರಹಿತರ ಪ್ರತಿಭಟನಾ ಧರಣಿಯ ಪ್ರಚಾರಾಂದೋಲನ ಜಾಥದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರ ಪರ ಎಂದು ಸುಳ್ಳು ಹೇಳುತ್ತಿದ್ದು, ಈ ಸರ್ಕಾರಗಳಿಗೆ ಬಡವರ ಪರ ನಿಜವಾದ ಕಾಳಜಿ ಇದ್ದರೆ ನಿವೇಶನ ರಹಿತ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೂ ನಿವೇಶನ ನೀಡಲಿ ಎಂದು ಆಗ್ರಹಿಸಿದರು.

ಭಾರತೀಯ ಕಮ್ಯೂನಿಷ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಪೆರಿಯಸ್ವಾಮಿ ಮಾತನಾಡಿ, ಕೂಲಿ ಕಾರ್ಮಿಕರು ಇಂದಿನ ಬೆಲೆ ಏರಿಕೆಯಿಂದಾಗಿ ಜೀವನ ಸಾಗಿಸುವುದೇ ಕಷ್ಟವಾಗಿದ್ದು, ಅದರಲ್ಲೂ ಮನೆ ಬಾಡಿಗೆ ಕಟ್ಟುವುದು ಅಸಾಧ್ಯವಾಗಿದೆ ಎಂದರು.

ತಾಲ್ಲೂಕಿನ ಎಲ್ಲಾ ಪಂಚಾಯತಿಗಳ ನಿವೇಶನ ರಹಿತ ನಾಗರಿಕರು ಇದೇ 20 ರಂದು ಮೂಡಿಗೆರೆ ತಾಲ್ಲೂಕು ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ತಿಳಿಸಲಾಯಿತು. ಜಾಥದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪದಾಧಿಕಾರಿಗಳಾದ, ಗೋಪಾಲ್ಶೆಟ್ಟಿ, ಬಾಳೂರು ರಮೇಶ್, ಲಕ್ಷ್ಮಣ್ ಕುಮಾರ್, ರಾಜು, ಪ್ರಕಾಶ್ ಸುಂದರ್, ಸುಬ್ರಮಣ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.