ಆನೇಕಲ್: ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಸಂಕ್ರಾಂತಿ ಹಬ್ಬದ ನೆಪದಲ್ಲಿ ತಮಿಳುನಾಡಿನವರು ನಡೆಸುತ್ತಿದ್ದ ನಿಷೇಧಿತ ಜಲ್ಲಿಕಟ್ಟು (ಹೋರಿ ಬೆದರಿಸುವ) ಸ್ಪರ್ಧೆಯನ್ನು ಪೊಲೀಸರು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ಇಂಡ್ಲವಾಡಿಯಲ್ಲಿ ತಮಿಳುನಾಡಿನಿಂದ ಬಂದ ನೂರಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ಜಲ್ಲಿಕಲ್ಲು ಸ್ಪರ್ಧೆಗೆ ಸಜ್ಜುಗೊಳಿಸಲಾಗಿತ್ತು. ಬೆಳಿಗ್ಗೆ 10ಕ್ಕೆ ವೇಳೆಗೆ ವಿಶೇಷ ಸ್ಪರ್ಧೆಯನ್ನು ವೀಕ್ಷಿಸಲು ಸಹಸ್ರಾರು ಜನರು ಬಂದಿದ್ದರು.

ಎತ್ತುಗಳ ಕೊಂಬುಗಳಿಗೆ ಕುಚ್ಚುಗಳು, ನಗದು, ಚಿನ್ನದ ಉಂಗುರ, ಮತ್ತಿತರ ಬೆಲೆ ಬಾಳುವ ಬಹುಮಾನಗಳನ್ನು ಕಟ್ಟಲಾಗಿತ್ತು. ಬಹುಮಾನಗಳನ್ನು ಕೀಳಲು ಯುವಕರ ದಂಡು ಜಮಾಯಿಸಿತ್ತು. ಹದ್ದಿನಲ್ಲಿ ಎತ್ತುಗಳು ಓಡುತ್ತಿದಂತೆ ಸಾಹಸಿ ಯುವಕರು ಅಡ್ಡಗಟ್ಟಿ ಎತ್ತುಗಳನ್ನು ನಿಲ್ಲಿಸಲು ಮುಂದಾಗುತ್ತಿದ್ದರು.

ಎತ್ತುಗಳು ಹದ್ದು ಮೀರಿ ಜನರತ್ತ ದಿಕ್ಕು ದಿಸೆ ಇಲ್ಲದೇ ನುಗ್ಗಿದ್ದರಿಂದ ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಗಾಯಗೊಂಡರನ್ನು ಆನೇಕಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಎತ್ತು ಬೆದರಿಸುವ ಅಪಾಯಕಾರಿ ಸ್ಪರ್ಧೆಯನ್ನು ನಿಷೇಧಿಸಲಾಗಿತ್ತು, ಆಹ್ವಾನ ಪತ್ರಿಕೆಯಲ್ಲಿ ಸಹ ಓಟದ ಬಗ್ಗೆ ಮಾಹಿತಿ ಪ್ರಕಟಿಸಿರಲಿಲ್ಲ, ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆಯನ್ನು ತಡೆಯಲು ಪೊಲೀಸರು ಮುಂದಾದರು.

ಸಿಪಿಐ ರಾಜೇಂದ್ರ, ಪಿಎಸ್ಐ ರಾಘವೇಂದ್ರ ಬೈಂದೂರು ಸ್ಪರ್ಧೆ ನಿಲ್ಲಿಸು-ವಂತೆ ಸೂಚನೆ ನೀಡಿದರೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಡಿವೈಎಸ್ಪಿ ಬಲರಾಮೇಗೌಡ, ಅತ್ತಿಬೆಲೆ ಸಿಪಿಐ ಬಿ.ಕೆ.ಕಿಶೋರ್ಕುಮಾರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಲಾಠಿ ಚಾರ್ಜಿಗೆ ಮುಂದಾಗುತ್ತಿದ್ದಂತೆ ಜಲ್ಲಿಕಟ್ಟು ಸ್ಪರ್ಧೆಗೆ ಬಂದಿದ್ದವರು ಅಲ್ಲಿಂದ ಕಾಲ್ಕಿತ್ತರು.

ಎತ್ತುಗಳೊಂದಿಗೆ ಟೆಂಪೋ, ಬೈಕ್ ಮತ್ತಿತರ ವಾಹನಗಳೊಂದಿಗೆ ಸಹಸ್ರಾರು ಜನರು ಗ್ರಾಮಕ್ಕೆ ಬಂದಿದ್ದರಿಂದ ಪರಿಣಾಮ ಪುಟ್ಟ ಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.