ಭಾನುವಾರ, ಮೇ 16, 2021
29 °C

ನಿಷ್ಠೆಯಿಂದ ಕೆಲಸ ಮಾಡಿ: ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ಉತ್ತಮ ಪ್ರಜೆಗಳ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಿಕೆ, ಸರ್ ರತನ್ ಟಾಟಾ ಟ್ರಸ್ಟ್‌ಗಳ ಆಶ್ರಯದಲ್ಲಿ ಸೋಮವಾರ ಇಲ್ಲಿಯ ಚರ್ಚ್ ಹಾಲ್‌ನಲ್ಲಿ ಆಯೋಜಿಸಿದ್ದ ಅಂಗನವಾಡಿ ಕೇಂದ್ರಗಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಲಿಕೆ ಸಂಸ್ಥೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಬರುವ ಹಲವು ಮಾರಕ ರೋಗಗಳ ಬಗ್ಗೆ ತಾಯಂದಿರಿಗೆ ತಿಳಿವಳಿಕೆ ನೀಡಬೇಕು. ಸ್ತನ್ಯಪಾನದ ಮಹತ್ವದ ಬಗ್ಗೆ ತಿಳಿಸಬೇಕು ಎಂದರು.ಮಕ್ಕಳಲ್ಲಿರುವ ಸುಪ್ತ ಶಕ್ತಿಯನ್ನು ಹೊರತೆಗೆಯುವ ಕೆಲಸದ ಜೊತೆಗೆ ಮಕ್ಕಳಲ್ಲಿ ಉತ್ತಮ ಕೌಶಲಗಳನ್ನು ಬೆಳೆಸಬೇಕು. ಮಕ್ಕಳ ಕಾಳಜಿ ಹಾಗೂ ಉತ್ತಮ ಪೋಷಣೆಯ ಕುರಿತು ತಾಯಂದಿರಿಗೆ ತರಬೇತಿ ನೀಡಬೇಕು. ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸಲು ಶ್ರಮಿಸಬೇಕು ಎಂದು ಸಲಹೆ ಮಾಡಿದರು.ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಸಮನ್ವಯ ಅಧಿಕಾರಿ ಮಾರುತಿ ಹುಜರಾತಿ, ಸರ್ ರತನ್ ಟಾಟಾ ಟ್ರಸ್ಟ್ ಕಾರ್ಯ ಶ್ಲಾಘನೀಯ. ಅವರ ಜೊತೆ ಕೈಜೋಡಿಸಿ ಕೆಲಸ ಮಾಡಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುವವರು. ಮಗುವಿನ ಮೊದಲ ಬೆಳವಣಿಗೆ ನಿಮ್ಮ ಕೈಯಲ್ಲಿದೆ. ಉತ್ತಮ ಕೆಲಸ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಕರ್ಲಿ ಮಾತನಾಡಿ, ಕಲಿಕೆ ಸಂಸ್ಥೆಯ ಹಲವು ಕಾರ್ಯಗಳು ಪ್ರಯೋಜನಕಾರಿಯಾಗಿದ್ದು, ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಜಿಲ್ಲಾ ಯೋಜನಾಧಿಕಾರಿ ರಮೇಶ ಗೊಂಗಡಿ, ಕಲಿಕೆ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ, ಅಂಗನವಾಡಿ, ಆರೋಗ್ಯ ಕ್ಷೇತ್ರದಲ್ಲಿ ಇಲಾಖೆಗಳ ಜೊತೆಗೂಡಿ ಕೆಲಸ ಮಾಡುತ್ತಿದ್ದು, ಮಕ್ಕಳ, ಶಿಕ್ಷಕರ ಹಾಗೂ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.ವಲಯ ಸಂಪನ್ಮೂಲ ಅಧಿಕಾರಿ ವೆಂಕಟರಡ್ಡಿ, ಕಮ್ಯುನಿಟಿ ಡೆವೆಲಪ್‌ಮೆಂಟ್ ಫೌಂಡೇಷನ್ ಮುಖ್ಯಸ್ಥ ಅರುಣ ಸಿಯಾರೋ ಮಾತನಾಡಿದರು.ಸಂಯೋಜಕ ಮೌನೇಶ ಮಾತನಾಡಿ, ಯಾದಗಿರಿಯ 487 ಅಂಗನವಾಡಿಗಳ ಪೈಕಿ ಸಂಸ್ಥೆಯು ಈಗಾಗಲೇ 63 ಅಂಗನವಾಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳನ್ನು ಮಾದರಿ ಅಂಗನವಾಡಿ ಕೇಂದ್ರಗಳಾಗಿ ಮಾಡುವ ಗುರಿ ಹೊಂದಿದೆ. ಇದರ ಅಂಗವಾಗಿ  ಮಕ್ಕಳ ಕಲಿಕಾ ಸಾಮಗ್ರಿಗಳನ್ನು ಕೊಡಲಾಗುತ್ತಿದೆ ಎಂದರು. ಸಂಯೋಜಕ ಈರಣ್ಣಾ ಬಿರಾದಾರ ಸ್ವಾಗತಿಸಿದರು. ಸಂಯೋಜಕ ಸಂತೋಷಕುಮಾರ ವಂದಿಸಿದರು. ಮಾಹಾದೇವಿ ನಿರೂಪಿಸಿದರು. ಪ್ರತಿಭಾ ಪ್ರಾರ್ಥನೆ ಹಾಡಿದರು. ಅಂಗನವಾಡಿ ಕಾರ್ಯಕರ್ತಯರಿಗೆ ಕಿಟ್ ವಿತರಿಸಲಾಯಿತು. ಸಂಯೋಜಕರಾದ ಕೆ.ಎಂ. ವಿಶ್ವನಾಥ, ಹಣಮಂತ, ಮಹೇಶ, ಯೋಗೇಶ, ಶಂಭುಲಿಂಗ, ರಾಮನಗೌಡಾ, ಮಹಾಂತೇಶ, ಬಸವರಾಜ, ವಿದ್ಯಾ, ಪ್ರಿಯಾ, ಮಧುಮತಿ ಮುಂತಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.