ಶುಕ್ರವಾರ, ಮೇ 7, 2021
20 °C

ನೀನ್ ಹೆತ್ ಮಕ್ಳ ಹುತ್ತುಕ್ಕಾಕ

-ಸಿ. ಪಿ. ನಾಗರಾಜ,ಬೆಂಗಳೂರು Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ  ತಾಲೂಕಿನಲ್ಲಿ   ಹುತ್ತದ  ಕೋವಿ  ಸೇರುವ  ಶಿಶುವಿನ  ಶವದ  ಸಂಗತಿ ಇತ್ತೀಚೆಗೆ  ವರದಿಯಾಗಿದೆ. (ಪ್ರ.ವಾ. ಜೂನ್ 7). ಈ ಆಚರಣೆ  ಶಾಪ ರೂಪದ ಬಯ್ಗುಳವಾಗಿ ಈಗಲೂ ತೆಂಕಣ ಕರ್ನಾಟಕದ ಹಳ್ಳಿಗರ  ಮಾತುಕತೆಗಳಲ್ಲಿ ಬಳಕೆಯಾಗುತ್ತಿದೆ. ಹೆತ್ತ ಮಕ್ಕಳು ಉಳಿಯದೆ ಕೂಡಲೇ ಸಾಯಲಿ ಎಂಬ ಉದ್ದೆೀಶದಿಂದ ಹಾಕುವ  ಶಾಪದ ನುಡಿಯಿದು.ಮಗು ಹುಟ್ಟಿ ನಾಲ್ಕಾರು ದಿನಗಳಲ್ಲಿಯೇ ಸಾವನ್ನಪ್ಪಿದಾಗ, ಅದಕ್ಕೆ ಚಟ್ಟ ಕಟ್ಟಿ ಕೊಂಡು  ಹೋಗಿ  ಮಸಣದಲ್ಲಿ  ಹೂಳುವುದಿಲ್ಲ,  ಇ್ಲ್ಲಲ ವೇ ಸುಡುವುದಿಲ್ಲ.  ಇದಕ್ಕೆ  ಬದಲಾಗಿ  ಮಗುವಿನ  ಹೆಣವನ್ನು  ಬಾಳೆ ಎಲೆಯ  ಮೇಲಿಟ್ಟು, ಕೈಯಲ್ಲೇ ಎತ್ತಿಕೊಂಡು  ಹೋಗಿ, ಹುತ್ತ   ಬಗೆದು,  ಹುತ್ತದ  ಬಾಯಲ್ಲಿ  ಇಲ್ಲವೇ  ಬುಡದಲ್ಲಿ  ಹೆಣವನ್ನು  ಹೂಳಿ, ಅದರ ಮೇಲೆ  ಅಂಕೋಲೆ  ಕಡ್ಡಿ ,  ಇತರ  ಮುಳ್ಳಿನ  ಕೋಲುಗಳನ್ನು  ಜೋಡಿಸಿ, ಮುಳ್ಳಿನ ರಾಶಿಯ ಮೇಲೆ ದಪ್ಪನೆ ಕಲ್ಲು ದಿಂಡುಗಳನ್ನು ಇಡುತ್ತಾರೆ.  ನಾಯಿ, ನರಿಗಳು ಹೆಣವನ್ನು ಕಿತ್ತು ತಿನ್ನದಿರಲೆಂದು ಈ ರೀತಿ ಕಲ್ಲು ಮುಳ್ಳನ್ನು  ಹೇರುತ್ತಾರೆ. ಕನ್ನಡಿಗರಲ್ಲಿ  ಬಳಕೆಯಾಗುತ್ತಿರುವ  ಶಾಪ ರೂಪದ  ಬಯ್ಗುಳಗಳಲ್ಲಿ  ಈ ಬಗೆಯ ನೂರಾರು ಆಚರಣೆಗಳು ದಾಖಲಾಗಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.