ಶನಿವಾರ, ಜೂನ್ 19, 2021
22 °C

ನೀರಿಗೂ ನೀತಿ ಸಂಹಿತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕುಡಿಯುವ ನೀರು ಪೂರೈಸುವಂತೆ ಹಾಗೂ ಚರಂಡಿ ಸ್ವಚ್ಛ  ಮಾಡುವಂತೆ  ಸೂಚಿಸಲು ಬರುವುದಿಲ್ಲ’ ಎಂದು ಪುರಸಭೆಯ ಮುಖ್ಯಾಧಿಕಾರಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ ಪ್ರಸಂಗ ಶುಕ್ರವಾರ ನಡೆಯಿತು.ಇದರಿಂದ ಆಕ್ರೋಶಗೊಂಡ ಪಟ್ಟಣದ ಕಿಲ್ಲಾ ಬಡಾವಣೆಯ ನಿವಾಸಿಗಳು ಪುರಸಭೆ ಮುಂದೆ ಧರಣಿ ನಡೆಸಿದ್ದು, ನಂತರ ಈ ಬಗ್ಗೆ ತಹಶೀಲ್ದಾರ್ ಎಂ.ಬಿ.ಪಾಟೀಲ ಅವರೇ ಪುರಸಭೆ ಮುಖ್ಯಾಧಿಕಾರಿಗಳ ಪರವಾಗಿ ಕ್ಷಮೆ ಕೇಳಿದರು. ಐದು ತಿಂಗಳ ಹಿಂದೆಯೇ ಮೂಲಸೌಲಭ್ಯ  ಒದಗಿಸುವಂತೆ ಸಾರ್ವಜನಿಕರು ಪುರಸಭೆಗೆ ಲಿಖಿತ ಮನವಿ ನೀಡಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದ್ದರಿಂದ ಬಡಾವಣೆಯ ನಿವಾಸಿಗಳು ಮತ್ತೊಮ್ಮೆ  ಮನವಿ ಸಲ್ಲಿಸಲು ಬಂದಾಗ ಮುಖ್ಯಾಧಿಕಾರಿ ಆಡಿದ ಮಾತು ಗೊಂದಲ ಸೃಷ್ಟಿಸಿತು.ಕೊನೆಗೆ ಮುಖ್ಯಾಧಿಕಾರಿಗಳು  ಕುಡಿಯುವ ನೀರು ಪೂರೈಸುವ ಬಗ್ಗೆ ಭರವಸೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.