ಚಿತ್ರದುರ್ಗ: ಸರ್ವರಿಗೂ ಸೇರಿದ ಸಾಮೂಹಿಕ ಆಸ್ತಿಯಾದ ನೀರನ್ನು ಮಾರಾಟ ಮಾಡಿ ಭೂಮಿಯಲ್ಲಿರುವ ಅಂತರ್ಜಲ ಬರಿದು ಮಾಡುವ ರಾಷ್ಟ್ರೀಯ ನೀರಿನ ನೀತಿ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನೀರು ಸಾರ್ವಜನಿಕ ಆಸ್ತಿ. ಆದರೆ, ಈಗ ಹೊಸ ನೀತಿ ಜಾರಿಗೊಳಿಸುವ ಮೂಲಕ ನೀರಿನ ಹಕ್ಕನ್ನು ಜನತೆಯಿಂದ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಮೈಸೂರಿನ ನೀರು ಸರಬರಾಜು ವ್ಯವಸ್ಥೆಯನ್ನು ಜೆಸ್ಕೋ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ. ಇದೇ ರೀತಿ ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ `ವಿಯೋಲಿನ~ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಗಳನ್ನು ಸರ್ಕಾರ ರದ್ದು ಪಡಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ, ಪ್ರತಿ ದಿನ 135 ಲೀಟರ್ ಉಚಿತ ಮತ್ತು ಗುಣಮಟ್ಟದ ನೀರನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಇದು ಸರ್ಕಾರದ ಕರ್ತವ್ಯವೂ ಆಗಿದೆ. ಯಾರಿಗೂ ತಾರತಮ್ಯ ಮಾಡದೇ ರಾಜ್ಯ ಸರ್ಕಾರ ಇದನ್ನು ಜಾರಿಗೆ ತರಬೇಕು. ನೀರಿನ ಕ್ಷೇತ್ರದಲ್ಲಿ ಎಲ್ಲ ರೀತಿಯ ವ್ಯಾಪಾರಿ ಮಾದರಿ ಅಥವಾ ಲಾಭಗಳಿಕೆಯನ್ನು ನಿಷೇಧಿಸುವ ಶಾಸನಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು.

ಈಗಾಗಲೇ ನೀರನ್ನು ಮಾರಾಟದ ವಸ್ತುವನ್ನಾಗಿ ಮಾಡಲು ಹೊರಟಿರುವ ಕೇಂದ್ರ ಕಾನೂನಿಗೆ ಪಂಜಾಬ್ ಮತ್ತು ರಾಜಸ್ತಾನ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರ ಸಹ ರಾಷ್ಟ್ರೀಯ ನೀರಿನ ನೀತಿ ತಿರಸ್ಕರಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಇದು ಸಂವಿಧಾನದ ಮೂಲ ಆಶಯಗಳ ವಿರುದ್ಧವಾಗಿದೆ. ಜಾಗತಿಕ ಕಾರ್ಪೋರೇಟ್ ಖಾಸಗಿ ಕಂಪೆನಿಗಳು ಚಿನ್ನ ಮತ್ತು ಪೆಟ್ರೋಲ್ ನಂತರ ನಮ್ಮ ನೀರನ್ನು ಕೊಳ್ಳೆ ಹೊಡೆಯಲು ಅವಕಾಶ ನೀಡಲಾಗುತ್ತಿದೆ ಎಂದು ದೂರಿದರು.

ನೀರನ್ನು ಖಾಸಗೀಕರಣ ಮಾಡುವುದರಿಂದ ಚುನಾಯಿತ ಪ್ರತಿನಿಧಿಗಳ ಅಧಿಕಾರ ಕಿತ್ತುಕೊಳ್ಳಲಾಗುತ್ತದೆ. ಹಣವಿದ್ದವರು, ಇಲ್ಲದವರ ಮಧ್ಯ ತಾರತಮ್ಯ ಹೆಚ್ಚುತ್ತದೆ. ನೀರಿನ ಮೂಲ ಪರಿಕಲ್ಪನೆಯನ್ನು ಬದಲಾಯಿಸಿ ವ್ಯಾಪಾರಿ ಸಂಸ್ಕೃತಿಯನ್ನು ವೈಭವೀಕರಿಸಿದಂತಾಗುತ್ತದೆ. ಈ ಎಲ್ಲಾ ಕಾರಣಗಳಿಂದ ರಾಷ್ಟ್ರೀಯ ನೀರಿನ ನೀತಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಲಾಯಿತು.

ಮುಂದಿನ ದಿನಗಳಲ್ಲಿ ಈ ನೀತಿಯಿಂದಾಗಿ ನೀರಿಗಾಗಿ ಯುದ್ಧ ನಡೆಯುತ್ತದೆ. ಈ ನೀತಿಯಿಂದಾಗಿ ಸಮುದಾಯಗಳು, ಜೀವರಾಶಿಗಳಿಗೂ ಮನುಷ್ಯ ಕುಲಕ್ಕೂ ಇರುವ ಸಾಂಗತ್ಯವನ್ನು ನಾಶ ಮಾಡಿ ಮಾರುಕಟ್ಟೆ ಸಂಸ್ಕೃತಿ ವೈಭವೀಕರಿಸುತ್ತದೆ. ಕೃಷಿಗೆ ನೀರು ಮೂಲ. ನೀರನ್ನು ಖಾಸಗೀಕರಣ ಮಾಡುವುದರಿಂದ ಮುಂದಿನ ದಿನಗಳಲ್ಲಿ ಕೃಷಿಯನ್ನು ಕೈಬಿಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರಿಂದ ನಿರುದ್ಯೋಗದ ಪ್ರಮಾಣ ಜಾಸ್ತಿಯಾಗಿ ಜನತೆ ದಾರಿ ತಪ್ಪುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ನೀರಿನ ಹಕ್ಕಿಗಾಗಿ ಜನಾಂದೋಲನದ ಸಂಚಾಲಕ ನರೇನಹಳ್ಳಿ ಅರುಣ್ ಕುಮಾರ್, ಮುರುಘರಾಜೇಂದ್ರ ಒಡೆಯರ್, ಧರಣಿ ಸಂಸ್ಥೆಯ ರಮಾ ನಾಗರಾಜ್, ಅನ್ನಪೂರ್ಣಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.