ಭಾನುವಾರ, ಜನವರಿ 19, 2020
23 °C

ನೂತನ ಅಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ವರ್ತೂರು ಗ್ರಾಮದಲ್ಲಿ ಇತ್ತೀಚೆಗೆ ವಾರ್ಡ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.ಕೆಪಿಸಿಸಿ ಸದಸ್ಯ ಬಿ.ಶಿವಣ್ಣ ಹಾಗೂ ಮಾಜಿ ಶಾಸಕ ಬಿ.ವಿ.ರಾಮಚಂದ್ರರೆಡ್ಡಿ ನೇತೃತ್ವದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ವರ್ತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ವಿ.ಸತೀಶಕುಮಾರ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಬಿಬಿಎಂಪಿ ಬೆಳ್ಳಂದೂರು ವಾರ್ಡ್ ಸದಸ್ಯರಾದ ಬಿ.ಪಿ.ಬಾಬುರೆಡ್ಡಿ, ಎಚ್.ಎ. ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಘಟಕದ ಸದಸ್ಯರಾದ ಪಿಳ್ಳಾರೆಡ್ಡಿ ದೇವರಬಿಸನಹಳ್ಳಿ, ಬೆಂಗಳೂರು ಪೂರ್ವ ತಾ.ಪಂ. ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ಹಾಲಿ ತಾ.ಪಂ. ಸದಸ್ಯರಾದ ಶ್ರೀನಿವಾಸರೆಡ್ಡಿ, ವಿ.ಟಿ.ಬಿ. ಬಾಬು ರೆಡ್ಡಿ, ಎಂ.ಸಿ.ಸಿ.ರವಿ, ತೂಬರಹಳ್ಳಿ ಯುವ ಕಾಂಗ್ರೆಸ್ ಮುಖಂಡ ಲಕ್ಷ್ಮೀಪತಿ, ವೇಣುಗೋಪಾಲರೆಡ್ಡಿ ಇದ್ದರು.

ಪ್ರತಿಕ್ರಿಯಿಸಿ (+)