ಬುಧವಾರ, ಜೂಲೈ 8, 2020
23 °C

ನೂರು ತುಂಬಿದ ಕೆಲಗೇರಿ ಕೆರೆಗೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂರು ತುಂಬಿದ ಕೆಲಗೇರಿ ಕೆರೆಗೆ ಪೂಜೆ

ಧಾರವಾಡ: “ಕೆಐಎಡಿಬಿಯಿಂದ ಕೆಲಗೇರಿ ಕೆರೆ ಅಭಿವೃದ್ಧಿಗಾಗಿ ತೆಗೆದುಕೊಂಡ 20 ಎಕರೆ ಜಮೀನಿನಲ್ಲಿ ಸುಂದರ ಉದ್ಯಾನವನ ಹಾಗೂ ಮಕ್ಕಳ ಪಾರ್ಕ್ ಮಾಡಲಾಗುವುದು. ಕೆರೆಯ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು. ಇಲ್ಲಿನ ಕೆಲಗೇರಿ ಕೆರೆಯ ಶತಮಾನೋತ್ಸವ ಅಂಗವಾಗಿ ಕೆಲಗೇರಿ ಕೆರೆ ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ವಿದ್ಯುತ್ ದೀಪ ಅಳವಡಿಸಲಾಗುವುದು. ಕೆರೆಯ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.ಸಮಿತಿ ಅಧ್ಯಕ್ಷ ಸಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ, ಕೆರೆಯ ನಿಮಾಣ ಮಾಡಿದ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ಕೆರೆಗೆ ನಾಮಕರಣ ಮಾಡಬೇಕು ಹಾಗೂ ಅವರ ಪೂರ್ಣ ಪ್ರಮಾಣದ ಪುತ್ಥಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಶತಾಯುಷಿ ಜಿ.ಜಿ.ದೊಡವಾಡ ಅವರನ್ನು ಸನ್ಮಾನಿಸ ಲಾಯಿತು. ನಾರಾಯಣ ಕದಂ, ಮಲ್ಲಿಕಾರ್ಜುನ ಅಥಣಿ, ಸುಧೀರ ಬೆಳವಂಕಿ, ರಾಮಚಂದ್ರ ಭಿಸೆ, ಗಣೇಶ ಬೆಟಸೂರ, ಕೃಷ್ಣಾ ಕುಲಕರ್ಣಿ, ವಿಜಯ ಸಾಲಿ, ಚಂದ್ರು ತಳವಾರ, ದೀಪಕ ಚಿಂಚೋರೆ, ತವನಪ್ಪ ಅಷ್ಟಗಿ ಮತ್ತಿತರರು ಉಪಸ್ಥಿತರಿದ್ದರು.ಗ್ರಾಮಸ್ಥರಿಂದ ಶತಮಾನೋತ್ಸವ ಆಚರಣೆ:  ಕೆಲಗೇರಿ ಗ್ರಾಮಸ್ಥರು, ಆಶೀರ್ವಾದ ಗಣಪತಿ ದೇವಸ್ಥಾನ ಸಮಿತಿ ಹಾಗೂ ಮಹರ್ಷಿ ವಾಲ್ಮೀಕಿ ಸೇವಾ ಸಂಘದ ಆಶ್ರಯದಲ್ಲಿ ಕೆರೆಯ ಶತಮಾನೋತ್ಸವ ಆಚರಿಸಿದರು. ಮಂಜುನಾಥ ಹಿರೇಮಠ ಅವರು ಮಾಡಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಮಣ್ಣಿನ ಪ್ರತಿಮೆಗೆ ಕೆರೆಯ ದಡದಲ್ಲಿ ಪೂಜೆ ಸಲ್ಲಿಸಲಾಯಿತು. ‘ಕೆರೆಯ ಸೌಂದರ್ಯೀಕರಣದ ಕಾಮಗಾರಿ ಕೆಲವು ಭಾಗ ಉಳಿದಿದ್ದು, ಪೂರ್ಣಗೊಂಡ ನಂತರ ಅದ್ದೂರಿಯಾಗಿ ಶತಮಾನೋತ್ಸವ ಆಚರಿಸ ಲಾಗುವುದು. ವಿಶ್ವೇಶ್ವರಯ್ಯನವರ ಕಂಚಿನ ಪ್ರತಿಮೆಯೂ ಅನಾವರಣಗೊಳ್ಳಲಿದೆ’ ಎಂದು ಉಪಮೇಯರ್ ಭಾರತಿ ಪಾಟೀಲ ಹೇಳಿದರು.ಪಾಳಿಕೆ ಸದಸ್ಯೆ ವಿಜಯಲಕ್ಷ್ಮಿ ಲೂತಿಮಠ ಮಾತನಾಡಿದರು. ಮೋಹನ ನಾಗಮ್ಮನವರ, ಮರೀಶ ನಾಗಣ್ಣವರ, ಗಿರೀಶ ರಾಯಕರ ಮಾತನಾಡಿದರು. ಕಲಾವಿದ ಮಂಜುನಾಥ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಗದಿಗೆಯ್ಯ ಗುಡ್ಡದಮಠ. ಮಲ್ಲಯ್ಯ ಹೊಂಗಲಮಠ. ಕರಿಬಸಯ್ಯ ಕಡ್ಲಿ, ಬಸನಗೌಡ ಸಿದ್ದಾಪುರ, ಮಲ್ಲನಗೌಡ ಸೈದಾಪುರ, ಭರಮಪ್ಪ ಮುಗದ, ಕಲ್ಲಪ್ಪ ಹಂಚಿನಮನಿ, ನಿರ್ಮಲಾ ಹಿರೇಮಠ, ಶೇಖವ್ವ ಕಡ್ಲಿ, ಚೆನ್ನಬಸಪ್ಪ ನೀರಲಕಟ್ಟಿ ಮತ್ತಿತರರು ಭಾಗವಹಿಸಿದ್ದರು. ನಾಗೇಶ ತಲವಾಯಿ ಸ್ವಾಗತಿಸಿದರು. ಚನಬಸು ಮಾಳಗಿ ನಿರೂಪಿಸಿದರು. ಶಿವಾನಂದ ಕೇಸರಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.