ಭಾನುವಾರ, ಜನವರಿ 19, 2020
22 °C

ನೆಲ್ಸನ್ ಮಂಡೇಲಾ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್ ಬರ್ಗ್ (ಪಿಟಿಐ): ದೀರ್ಘಕಾಲದಿಂದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ (95) ಅವರು ಗುರುವಾರ ರಾತ್ರಿ ಇಲ್ನಿನ ತಮ್ಮ ನಿವಾಸದಲ್ಲಿ ನಿಧನರಾದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಂದ ಪ್ರೇರಿತರಾಗಿದ್ದ ಮಂಡೇಲಾ ಅವರು ವರ್ಣಭೇದ ನೀತಿ ವಿರುದ್ಧ ಹೋರಾಟದಲ್ಲಿ 26 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಅಲ್ಲದೇ, ಆಫ್ರಿಕಾದ ಮೊದಲ ನಿಗ್ರೋ ಅಧ್ಯಕ್ಷರಾಗಿದ್ದರು. 

ಮಂಡೇಲಾ ನಿಧನಕ್ಕೆ ಪ್ರಧಾನಿ ಮನಮೋಹನ್‌ ಸಿಂಗ್, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ವಿಶ್ವದ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

ಪ್ರತಿಕ್ರಿಯಿಸಿ (+)