ಭಾನುವಾರ, ಮೇ 16, 2021
28 °C

ನೆಹರೂ ನಿವೃತ್ತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ, 3-6-1963ನೆಹರೂ ನಿವೃತ್ತಿಗೆ ಒತ್ತಾಯ


ಲಕ್ನೋ, ಜೂನ್ 2- ಕಾಂಗ್ರೆಸ್ ಪಕ್ಷದ ಆಡಳಿತದ ರೀತಿ ನೀತಿಗಳನ್ನು ಜನ ತಿರಸ್ಕರಿಸಿರುವರೆಂಬುದಕ್ಕೆ ಆಮ್ರೊಹ ಕ್ಷೇತ್ರದ ಚುನಾವಣಾ ಫಲಿತಾಂಶವೇ ನಿದರ್ಶನವೆಂದೂ, ಇದರ ಫಲವಾಗಿ ಪ್ರಧಾನಿ ನೆಹರು ಅವರು ಪ್ರಧಾನಿ ಪದವಿಯಿಂದ ನಿವೃತ್ತಿ ಹೊಂದಬೇಕೆಂದೂ ಅಖಿಲಭಾರತ ಸೋಷಲಿಸ್ಟ್ ಐಕ್ಯತಾ ಸಮ್ಮೇಳನವನ್ನುದ್ದೇಶಿಸಿ ಡಾ. ಸಿ. ಘೋಷ್ ಸಲಹೆ ಮಾಡಿದರು.ಡಾ. ಲೋಹಿಯ ಸಭೆಯಲ್ಲಿ ಗದ್ದಲ; ಸ್ತ್ರೀಯರ ಮೇಲೆ ಹಲ್ಲೆ

ನವದೆಹಲಿ, ಜೂನ್ 2- ತಮ್ಮನ್ನು ಅಭಿನಂದಿಸಲು ಇಂದು ಇಲ್ಲಿ ನಡೆದ ಸಭೆಯೊಂದರಲ್ಲಿ ಡಾ. ಲೋಹಿಯ ಅವರು ಪ್ರಧಾನಿ ನೆಹರೂ ಅವರನ್ನು ಕುರಿತು ಕೆಲವು ಆಕ್ಷೇಪಣೀಯ ಟೀಕೆಗಳನ್ನು ಮಾಡಿದಾಗ, ಸಭೆಯಲ್ಲಿದ್ದ ಕೆಲವು ಮಹಿಳಾ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದರೆಂದೂ, ಮತ್ತೆ ಕೆಲವರು ಮಹಿಳಾ ಸದಸ್ಯರ ಮೇಲೆ ಕೈ ಮಾಡಿದರೆಂದೂ ವರದಿಯಾಗಿದೆ.ಕೇಡಿಗಳೆಲ್ಲಾ ಮಂಡಲ ಕಾಂಗ್ರೆಸ್ ಅಧ್ಯಕ್ಷರುಗಳು

ಅಂಬಾಲ, ಜೂ. 2- ಪಂಜಾಬ್ ರಾಜ್ಯದ ತಹಸೀರ್ ಮತ್ತು ಕಡಿಮೆ ದರ್ಜೆ ಅಧಿಕಾರಗಳಲ್ಲಿ ಹೊಸ ನಮೂನೆ ನಾಯಕತ್ವ ಹುಟ್ಟಿದೆಯೆಂದು ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ಶ್ರೀ ಗುರುದಯಾಳ್‌ಸಿಂಗ್ ಧಿಲಾನ್‌ರು ದೂರಿದ್ದಾರೆ.ಇಲ್ಲಿನ ಅಧ್ಯಕ್ಷ ಭಾಷಣವೊಂದರಲ್ಲಿ ಅವರು ಮಾತನಾಡುತ್ತಾ ಪೊಲೀಸು ದಾಖಲೆಗಳಲ್ಲಿ ಸೇರಿರುವ ದುಷ್ಕರ್ಮಿಗಳು ಮತ್ತು ಕೀಳ್ಯಡತೆಯ ಅನೇಕ ಜನ ಮಹನೀಯರು ಮಂಡಲ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದೂ ಈ ಆಯ್ಕೆಗೆ ಕೆಲವು ಜನ ಹಿರಿಯ ನಾಯಕರ ಪ್ರೋತ್ಸಾಹವೇ ಫಲವೆಂದೂ ಧಿಲಾನ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.