ಶನಿವಾರ, ಮೇ 21, 2022
22 °C

ನೆಹರೂ ಮೇಲೆ ಟೀಕೆ ನಿಲ್ಲಿಸಲು ಲೋಹಿಯಾ ಷರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ, 15-7-1963ನೆಹರೂ ಮೇಲೆ ಟೀಕೆ ನಿಲ್ಲಿಸಲು ಲೋಹಿಯಾ ಷರತ್ತು

ಅಲಹಾಬಾದ್, ಜುಲೈ 14
- ಸೋಷಲಿಸ್ಟ್ ನಾಯಕ ಡಾ. ರಾಮಮನೋಹರ ಲೋಹಿಯಾ ಅವರು, ಪ್ರಧಾನಮಂತ್ರಿ ನೆಹರೂ ಅವರಿಗೆ ಈ ಕೆಳಕಂಡ ನಾಲ್ಕು ಷರತ್ತುಗಳನ್ನು ಹಾಕಿ ಇವುಗಳಲ್ಲಿ ಎರಡನ್ನಾದರೂ ಪೂರೈಕೆ ಮಾಡಿದಲ್ಲಿ ತಾವು ಇನ್ನು ಮುಂದೆ ಅವರನ್ನು ಟೀಕಿಸುವುದಿಲ್ಲವೆಂದು ತಿಳಿಸಿದ್ದಾರೆ.1) ದೇಶದ ಸಾರ್ವಜನಿಕ ಜೀವನದಲ್ಲಿ ಇಂಗ್ಲೀಷ್ ಭಾಷೆಯ ಉಪಯೋಗವನ್ನು ನಿಷೇಧಿಸುವುದು.

2) ಆರೂವರೆ ಎಕರೆಗಳಿಗಿಂತ ಕಡಿಮೆ ಭೂ ಹಿಡುವಳಿ ಇರುವವರಿಗೆ ತೆರಿಗೆ ವಿನಾಯಿತಿ.

3) ಏರುತ್ತಿರುವ ಪದಾರ್ಥಗಳ ಬೆಲೆ ತಡೆಗಟ್ಟುವುದು ಮತ್ತು

4) ಸಚಿವರ ಸಂಬಂಧಿಕರು ನಡೆಸುತ್ತಿರುವ ವ್ಯವಹಾರಗಳ ಹಾಗೂ ಅವರು ಗಳಿಸುತ್ತಿರುವ ಲಾಭದ ಬಗ್ಗೆ ಪರಿಶೀಲಿಸುವುದು.ಅಮೆರಿಕ ದಾಳಿ ಮಾಡಿದರೆ ಕ್ಯೂಬ ರಕ್ಷಣೆಗೆ ರಷ್ಯಾ ಸಿದ್ಧ

ಮಾಸ್ಕೊ, ಜುಲೈ 14
- ಅಮೆರಿಕದ ಸಾಮ್ರಾಜ್ಯ ಶಾಹಿಗಳು ಕ್ಯೂಬದ ಮೇಲೆ ಆಕ್ರಮಣ ನಡೆಸಿದರೆ ರಷ್ಯದಿಂದ ರಾಕೆಟ್ಟುಗಳ ಮೂಲಕ ಆ ದ್ವೀಪವನ್ನು ರಕ್ಷಿಸಲಾಗುವುದು ಎಂದು ಸೋವಿಯತ್ ಒಕ್ಕೂಟ ಇಂದು ಸ್ಪಷ್ಟಪಡಿಸಿದೆ.ಇಂದು `ಪ್ರಾವ್ಡಾ'ದಲ್ಲಿ ಪ್ರಕಟವಾದ ಚೀಣಿ ಕಮ್ಯುನಿಸ್ಟ್ ಪಕ್ಷಕ್ಕೆ ಸೋವಿಯತ್ ಕಮ್ಯುನಿಸ್ಟ್ ಪಕ್ಷ ನೀಡಿರುವ ಉತ್ತರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.