ಮಂಗಳವಾರ, ಜನವರಿ 28, 2020
29 °C

ನೇಕಾರರ ಸಾಲ ಮನ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯದ ನೇಕಾರರು ವಿವಿಧ ಸಹಕಾರ ಸಂಘಗಳಿಂದ ಪಡೆದ ಸಾಲ ವನ್ನು ಮನ್ನಾ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.ನೇಕಾರರ ಸಾಲಮನ್ನಾ ಬಗ್ಗೆ ತಾವು ಜವಳಿ ಸಚಿವರೊಂದಿಗೆ ನಡೆಸಿದ ಮಾತು ಕತೆ ಫಲಪ್ರದವಾಗಿದೆ. ನೇಕಾರರು ೨೦೧೧ರ ಆಗಸ್ಟ್ 1ರಿಂದ ೨೦೧೨ ಜುಲೈ ೨೫ರವರೆಗೆ ಪಡೆದ ₨೨೫ ಸಾವಿರ ದವರೆಗಿನ ಸಾಲ, ಅಸಲು ಮತ್ತು ಬಡ್ಡಿ ಮನ್ನಾ ಮಾಡಲಾಗಿದೆ ಎಂದು ವಿವರಿಸಿ ದ್ದಾರೆ.ನೇಕಾರರ ಸಹಕಾರ ಸಂಘ, ಪಟ್ಟಣ ಸಹಕಾರ ಸಂಘ, ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಪಡೆದ ಸಾಲಕ್ಕಷ್ಟೇ ಈ ಸೌಲಭ್ಯ ಸಿಗುತ್ತದೆ. ₨೨೫ ಸಾವಿರಕ್ಕೂ ಹೆಚ್ಚಿನ ಸಾಲ ಪಡೆದಿದ್ದರೆ ₨೨೫ ಸಾವಿರ  ಮಾತ್ರ ಮನ್ನಾ ಆಗುತ್ತದೆ. ಈ ಸಂಬಂಧ ಈಗಾಗಲೇ ಸರ್ಕಾರಿ ಆದೇಶ ಹೊರಡಿಸ ಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)