ಶುಕ್ರವಾರ, ಜೂನ್ 18, 2021
24 °C

ನೇರ ತೆರಿಗೆ ಸಂಗ್ರಹ ರೂ. 4.66 ಲಕ್ಷ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ಒಟ್ಟು ರೂ. 6.36 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಹಣಕಾಸು ಸಚಿವಾಲಯ ನಿಗದಿಪಡಿ­ಸಿದೆ. ಇದ­ರಲ್ಲಿ ಶೇ 73ರಷ್ಟು ಗುರಿ­ಯನ್ನು ಈಗಾಗಲೇ ತಲುಪಲಾ­ಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಇದುವರೆಗೆ ನೇರ ತೆರಿಗೆ ರೂಪದಲ್ಲಿ ರೂ. 5.44 ಲಕ್ಷ ಕೋಟಿ ಸಂಗ್ರಹ­ವಾಗಿದೆ. ಇದರಲ್ಲಿ   ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಿ­ದ­ವರಿಗೆ (ಐ.ಟಿ ರಿಟರ್ನ್ಸ್‌) ರೂ. 78,893 ಕೋಟಿ ಮರು ಪಾವತಿಸ­ಲಾಗಿದೆ. ಹೀಗಾಗಿ ನಿವ್ವಳ ನೇರ ತೆರಿಗೆ ಸಂಗ್ರಹ ರೂ. 4.66 ಲಕ್ಷ ಕೋಟಿ.­ ಸರ್ಕಾರ ನಿಗದಿ­ಪಡಿಸಿರುವ ಗುರಿ­ಯನ್ನು ಹಣಕಾಸು ವರ್ಷದ ಅಂತ್ಯದೊ­ಳಗೆ ತಲು­ಪುವ ವಿಶ್ವಾಸ ಇದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯೊ­ಬ್ಬರು ಸುದ್ದಿ­ಸಂಸ್ಥೆಗೆ ತಿಳಿಸಿದ್ದಾರೆ.ತೆರಿಗೆ ವಂಚಿಸಿರುವ 21.75 ಲಕ್ಷ ಜನರಿಗೆ ಇಲಾಖೆ ನೋಟಿಸ್‌ ನೀಡಿದೆ. ಕೇಂದ್ರ ನೇರ ತೆರಿಗೆ ಮಂಡಳಿ ವಂಚನೆ ಪ್ರಕರಣಗಳ ಮೇಲೆ ತೀವ್ರ ನಿಗಾ ವಹಿಸುತ್ತಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.