ಮಂಗಳವಾರ, ಜನವರಿ 28, 2020
17 °C

ನೊವಾಕ್‌ ಜೊಕೊವಿಚ್‌ಗೆ ಬೆಕರ್‌ ನೂತನ ಕೋಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಲ್‌ಗ್ರೇಡ್‌ (ಎಎಫ್‌ಪಿ): ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಟೆನಿಸ್‌ ದಂತಕತೆ ಬೋರಿಸ್‌ ಬೆಕರ್‌  ಅವರನ್ನು ತಮ್ಮ ಮುಖ್ಯ ಕೋಚ್‌ ಆಗಿ ನೇಮಿಸಿಕೊಂಡಿದ್ದಾರೆ.‘ಜರ್ಮನಿಯ ಬೋರಿಸ್‌ ಅವರಿಂದ ಮಾರ್ಗದರ್ಶನ ಪಡೆಯಲು ಖುಷಿಯಾಗುತ್ತಿದೆ’ ಎಂದು ಜೊಕೊವಿಚ್‌ ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. ‘46 ವರ್ಷ ವಯಸ್ಸಿನ ಬೋರಿಸ್‌ ನಿಜವಾದ ದಂತಕತೆ. ಅವರಿಗೆ ಟೆನಿಸ್‌ ಬಗ್ಗೆ ಅದ್ಭುತವಾದ ಜ್ಞಾನವಿದೆ. ಅವರ ಅನುಭವ ಖಂಡಿತ ನನ್ನ ನೆರವಿಗೆ ಬರಲಿದೆ.ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಗೆಲ್ಲಲು ಸಹಾಯವಾಗಲಿದೆ’ ಎಂದು ಅವರು ನುಡಿದಿದ್ದಾರೆ.ಮೆಲ್ಬರ್ನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಾಗಿ ಅವರೀಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಸದ್ಯ ಎರಡನೇ ರ್‍ಯಾಂಕ್‌ನಲ್ಲಿರುವ ನೊವಾಕ್‌ ಆರು ಬಾರಿ ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದಾರೆ.

ಪ್ರತಿಕ್ರಿಯಿಸಿ (+)