ಬುಧವಾರ, ಮೇ 12, 2021
19 °C

ನೋಕಿಯಾ ಏರ್ ಟಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನೋಕಿಯಾ ಕೇ ಅಸ್ಲಿ ಚಾಂಪಿಯನ್ಸ್~. ಇದು ಕ್ರಿಕೆಟ್ ಪ್ರೇಮಿಗಳಿಗೆ ನೋಕಿಯಾ ನಡೆಸುತ್ತಿರುವ ನೋಕಿಯಾ ಏರ್ ಟಿಕೆಟ್ ಚಾಂಪಿಯನ್ ಅಭಿಯಾನ.ನಿಮ್ಮಳಗಿರುವ ಕ್ರಿಕೆಟ್ ಪ್ರೀತಿಯನ್ನು, ನೀವು ಬಹಳವಾಗಿ ಪ್ರೀತಿಸುವ ಅಂಶವನ್ನು, ಬೌಲಿಂಗ್, ಕಾಮೆಂಟರಿ, ಮನವಿ ಮಾಡುವ ಅಥವಾ ಒಂದು ಆಕರ್ಷಕ ಸ್ಲೋಗನ್ ರಚಿಸುವ ಮೂಲಕ ಅಭಿವ್ಯಕ್ತಗೊಳಿಸಲು ಇದು ಅವಕಾಶ ಕಲ್ಪಿಸುತ್ತದೆ. ಸ್ಪರ್ಧೆಯ 24 ವಿಜೇತರು ಫೈನಲ್ ಪಂದ್ಯವನ್ನು ಬಾಲಿವುಡ್ ಬೆಡಗಿ ಪ್ರಿಯಂಕಾ ಚೋಪ್ರಾ ಜೊತೆ ವೀಕ್ಷಿಸಬಹುದು.ಯುವಜನರ ಅಚ್ಚುಮೆಚ್ಚಿನ ಪಬ್‌ಗಳು, ಕಾಲೇಜ್‌ಗಳು ಮತ್ತು ಕಾರ್ಪೊರೇಟ್ ಪಾರ್ಕ್‌ಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಭಾಗವಹಿಸುವವರು ಅಲ್ಲಿನ ಸಂಚಾರಿ ಕಿಯೋಸ್ಕ್‌ನಲ್ಲಿ ಕ್ಯಾಮೆರಾ ಜತೆಗಿನ ಎಲ್‌ಸಿಡಿ ಪರದೆ ಮುಂದೆ ತಮ್ಮ ಆಸಕ್ತಿಗೆ ಅನುಸಾರ ಬ್ಯಾಟಿಂಗ್ ಅಥವಾ ಬೌಲಿಂಗ್‌ನ ಅನುಕರಣೆ ಮಾಡಬೇಕು. ಇದರ ವಿಡಿಯೊ ದಾಖಲಿಸಿಕೊಂಡು www.nokiachampions.com ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.ನಂತರ ಸ್ಪರ್ಧಿಗಳು ತಮ್ಮ ವಿಡಿಯೊವನ್ನು ಸಾಮಾಜಿಕ ಜಾಲಗಳ ನೆಟ್ ವರ್ಕಿಂಗ್ ಮೂಲಕ ಪ್ರದರ್ಶಿಸಬಹುದು. ಅತ್ಯಂತ ಹೆಚ್ಚಿನ ಮತ ಗಳಿಸಿದ ವಿಡಿಯೊಗಳನ್ನು ಕಿರು ಪಟ್ಟಿಗೆ ಸೇರಿಸಲಾಗುತ್ತದೆ. ಈ ಪೈಕಿ 40 ಜನರನ್ನು ನಿರ್ಣಾಯಕರ ಸಮಿತಿಯೊಂದು ಪ್ರಿಯಂಕಾ ಚೋಪ್ರಾ ಜೊತೆ ಫೈನಲ್ಸ್ ವೀಕ್ಷಿಸಲು ಆಯ್ಕೆ ಮಾಡುತ್ತದೆ.ನೋಕಿಯಾ ಈ ಸ್ಪರ್ಧೆಗೆ ರೆಡ್ ಎಫ್‌ಎಂ 93.5 ಜೊತೆ ಒಪ್ಪಂದ ಮಾಡಿಕೊಂಡಿದೆ. ಎಫ್‌ಎಂ ಆಲಿಸಿ ಗೆಲ್ಲುವ ಒಬ್ಬ ಕೇಳುಗ  ನೋಕಿಯಾ ಬಿಹೆಚ್-609 ಹೆಡ್ ಸೆಟ್ ಗೆಲ್ಲಲಿದ್ದಾರೆ.ಅಲ್ಲದೆ ಒಬ್ಬ ಸ್ಪರ್ಧಿ ಚಾಂಪಿಯನ್ಸ್ ಲೀಗ್‌ನಲ್ಲಿ ವೃತ್ತಿಪರ ಕಾಮೆಂಟೇಟರ್ ಜೊತೆ ವೀಕ್ಷಕ ವಿವರಣೆ  ನೀಡುವ ಅವಕಾಶ ಪಡೆಯಲಿದ್ದಾರೆ. ನೋಕಿಯಾ ಸ್ಲೋಗನ್ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರು ನೋಕಿಯಾ ಫೋನ್ ಖರೀದಿಸಿ ಅದರ ಐಎಮ್‌ಇಐ ಸಂಖ್ಯೆಯನ್ನು 55555 ಗೆಯೆ ಎಸ್‌ಎಂಎಸ್ ಮಾಡಿ ವಿವರ ಪಡೆಯಬಹುದು.ಸ್ಪರ್ಧೆ ಸೆ. 20ಕ್ಕೆ ಪ್ರಾರಂಭವಾಗಿದ್ದು ಅಕ್ಟೋಬರ್ 6ರ ವರೆಗೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.