ಬುಧವಾರ, ಮೇ 18, 2022
28 °C

ನೋಕಿಯ: ಶೀಘ್ರವೇ 5 ಹ್ಯಾಂಡ್‌ಸೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಬಲಿಪುರಂ(ತಮಿಳುನಾಡು): ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿ ಎದುರಿಸಲು, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನೋಕಿಯ ಕಂಪೆನಿ ಹೊಸ ವೈಶಿಷ್ಟ್ಯಗಳನ್ನೊಳಗೊಂಡ `ಆಶಾ ಸ್ಮಾರ್ಟ್‌ಫೋನ್~ ಶ್ರೇಣಿಯಲ್ಲಿ 2, `ಲೂಮಿಯಾ~ ಶ್ರೇಣಿಯಲ್ಲಿ 2 ಹಾಗೂ ನೋಕಿಯ 808 ಪ್ಯೂರ್‌ವ್ಯೆ ಎಂಬ ಹೊಸ ಮಾದರಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಭಾರತೀಯ ಗ್ರಾಹಕರಿಗಾಗಿ ಇದೇ ತಿಂಗಳು ಬಿಡುಗಡೆ ಮಾಡಲಿದೆ.ಲ್ಯೂಮಿಯಾ ಮತ್ತು ಆಶಾ ಶ್ರೇಣಿ ಸ್ಮಾರ್ಟ್‌ಫೋನ್‌ಗಳಲ್ಲಿನ ಸವಲತ್ತುಗಳಿಂದ ಗ್ರಾಹಕರು ಪಡೆದ ಮಿನಿ ಕಂಪ್ಯೂಟರ್ ಅನುಭವದ ಆಧಾರದಲ್ಲಿ ಗ್ರಾಹಕ ಸಂತೃಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಮಾದರಿಗಳಲ್ಲಿ ಹೆಚ್ಚಿನ ವೈಶಿಷ್ಟ್ಯ ಅಳವಡಿಸಲಾಗಿದೆ ಎಂದು ಐಎಂಇಎ ನೋಕಿಯ ಹಿರಿಯ ಉಪಾಧ್ಯಕ್ಷ ಡಿ.ಶಿವಕುಮಾರ್ ಹಾಗೂ ನೋಕಿಯ ಇಂಡಿಯ ಸ್ಮಾರ್ಟ್‌ಫೋನ್ ಸಾಧನಗಳ ನಿರ್ದೇಶಕ ವಿಪುಲ್ ಮೆಹ್ರೊತ್ರಾ ಇಲ್ಲಿ ವಿವರಿಸಿದರು.ಗ್ರಾಹಕ ಆಕರ್ಷಣೆ ಸಲುವಾಗಿ ಕಂಪೆನಿ ಕೈಗೊಂಡಿರುವ ಹೊಸ ಕ್ರಮಗಳ ಬಗ್ಗೆ ವಿವರ ನೀಡಿದ ಅವರು, ನೋಕಿಯ 808 ಪ್ಯೂರ್‌ವ್ಯೆ ಮಾದರಿ ಸ್ಮಾರ್ಟ್‌ಫೋನ್ ಇಮೇಜಿಂಗ್ ತಂತ್ರಜ್ಞಾನ ಒಳಗೊಂಡ ಮೊದಲ ಸ್ಮಾರ್ಟ್‌ಫೋನ್ ಎಂದರು.ನೋಕಿಯ ಆಶಾ-305 ಮತ್ತು ನೋಕಿಯ ಆಶಾ-311 ಪರಿಷ್ಕೃತ ಮಾದರಿಗಳಾಗಿದ್ದು `ಮುಂದಿನ ಶತಕೋಟಿ ಗ್ರಾಹಕ ಸಂಪರ್ಕ~ ಯೋಜನೆಯಡಿ ಗ್ರಾಹಕರಿಗೆ ಸಕಲ ರೀತಿಯ ಇಂಟರ್ನೆಟ್ ಸೇವೆ ಒದಗಿಸಿ ಪರಸ್ಪರ ಸಂವಹನ ಸಾಮರ್ಥ್ಯ ಹೆಚ್ಚಿಸುತ್ತವೆ. ಆಶಾ-311 ಸಾಧನ 3.5ಜಿ ಸಾಮರ್ಥ್ಯದ ಟಚ್ ಸ್ಕ್ರೀನ್ ಹೊಂದಿದ್ದರೆ, ಆಶಾ-305 ಎರಡು ಸಿಮ್ ಒಳಗೊಂಡ ಹ್ಯಾಂಡ್‌ಸೆಟ್ ಎಂದು ವಿವರಿಸಿದರು.ಈ ಎಲ್ಲ ಸಾಧನಗಳೂ ಭಾರತದ ಏಕೈಕ  ನೋಕಿಯ ಉತ್ಪನ್ನಗಳ ಘಟಕವಾದ ಚೆನ್ನೈ ಕಾರ್ಖಾನೆಯಲ್ಲಿ ತಯಾರಾಗುತ್ತವೆ ಎಂದರು. ಚೆನ್ನೈ ಕಾರ್ಖಾನೆಯ ಪ್ರಕಾಶ್ ಕಟಾಮಾ, ಅನಿಂದಿತಾ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.