ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಸಾಕ್ಷಿಯಾಗಿರುವ ಇತಿಹಾಸ ಪ್ರಸಿದ್ಧ ಹಂಪಿ ಕಲ್ಲಿನ ರಥ ದೇಶದ ಕರೆನ್ಸಿ ನೋಟುಗಳಲ್ಲಿ ವಿಜೃಂಭಿಸಲಿದೆ. ವಿಜಯನಗರದ ಅರಸರು ಐದು ಶತಮಾನಗಳ ಹಿಂದೆಯೇ ಇದೇ ಕಲ್ಲಿನ ರಥದ ಅನತಿ ದೂರದಲ್ಲಿ ವಿದೇಶ ವ್ಯಾಪಾರ ಸೇರಿದಂತೆ ಬೃಹತ್ ವಾಣಿಜ್ಯ ವಹಿವಾಟಿನ ಪರಿಕಲ್ಪನೆಯೊಂದಿಗೆ ಕ್ರಮಬದ್ಧ ರೀತಿಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಬಳ್ಳದಲ್ಲಿ ಅಳೆದು ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು.

ಆ ಮೂಲಕ ತಮ್ಮ ಸಾಮ್ರಾಜ್ಯದ ಆರ್ಥಿಕತೆಗೆ ಹೊಸಬಗೆಯ ವಾಣಿಜ್ಯ ವಹಿವಾಟಿನ ಆಯಾಮ ನೀಡಿದ್ದರು.ವಿಜಯ ನಗರದ ಅರಸರ ರಾಜಧಾನಿ ಹಂಪಿಯ ಪರಿಸರದಲ್ಲಿ ಶಿಲ್ಪ ಕಲೆಯ ಮಹೋನ್ನತ ಕೃತಿಯಾಗಿ ನೆಲೆಗೊಂಡಿದೆ ಕಲ್ಲಿನ ರಥ. ಈ ಜಗದ್ವಿಖ್ಯಾತ ಶಿಲ್ಪವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ₹10ರ ಹೊಸ ನೋಟುಗಳ ಮೇಲೆ ಮುದ್ರಿಸಲು ಮುಂದಾಗಿದೆ.

ಬದಲಾವಣೆ ಜಗದ ನಿಯಮ. ಪ್ರತಿಯೊಂದು ಕ್ಷೇತ್ರಗಳಂತೆ ಆರ್ಬಿಐ ಕೂಡಾ ದೇಶದ ಕರೆನ್ಸಿ ನೋಟುಗಳ ವಿನ್ಯಾಸ ಬದಲಿಸಲು ನಿರ್ಧರಿಸಿದೆ. ಈಗಾಗಲೇ 2005ಕ್ಕಿಂತ ಮೊದಲು ಮುದ್ರಣವಾಗಿರುವ ನೋಟುಗಳನ್ನು ಮುಂಬರುವ ಡಿಸೆಂಬರ್ ಒಳಗಾಗಿ ಹಿಂತೆಗೆದುಕೊಳ್ಳಲು ಕಾಲಮಿತಿ ನಿಗದಿಪಡಿಸಿದೆ. ಅದೇ ವೇಳೆ, ಎಲ್ಲ ಬಗೆಯ ಕರೆನ್ಸಿ ನೋಟುಗಳಿಗೆ ಹೊಸ ರೂಪ ನೀಡಲು ಮುಂದಾಗಿದೆ. ಈಗಾಗಲೇ ನೋಟುಗಳ ಮೇಲಿನ ಅಂಕಿಗಳನ್ನೂ ಆರೋಹಣ ಕ್ರಮದಲ್ಲಿ ಗಾತ್ರ ಬದಲಿಸಿ ಮುದ್ರಿಸಲಾರಂಭಿಸಿದೆ.

ನೋಟುಗಳಲ್ಲಿ ಸ್ಮಾರಕಗಳ ನೋಟ
ಬದಲಾಗುವ ಕರೆನ್ಸಿ ನೋಟುಗಳ ವಿನ್ಯಾಸದಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ದೇಶದ ಎಂಟು ಸ್ಮಾರಕಗಳ ಆಕೃತಿಗಳು ಚಿತ್ರಗಳಾಗಿ ಕಾಣಿಸಿಕೊಳ್ಳಲಿವೆ.

ನಕಲಿ ನೋಟುಗಳ ಹಾವಳಿ ತಡೆಯುವ ಉದ್ದೇಶದಿಂದ ಕಾಲಕಾಲಕ್ಕೆ ಕರೆನ್ಸಿ ನೋಟುಗಳಲ್ಲಿನ ಬದಲಾವಣೆಗೆ, ಹೊಸ ಬಗೆಯ ಭದ್ರತಾ ಲಾಂಛನಗಳ ಮುದ್ರಣದಂತಹ ಪ್ರಯತ್ನಗಳಿಗೆ ಕೈ ಹಾಕುವ ಆರ್ಬಿಐ, ಈ ಬಾರಿ ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಪುರಾತನ ಸ್ಮಾರಕಗಳನ್ನು ಪರಿಚಯಿಸಲು ವಿವಿಧ ರಾಜ್ಯಗಳ ಪಾರಂಪರಿಕ ಸ್ಮಾರಕಗಳನ್ನು ಆಯ್ದುಕೊಂಡಿದೆ.

ದೆಹಲಿಯ ಕೆಂಪುಕೋಟೆ (ರಾಷ್ಟ್ರಧ್ವಜ ಸಮೇತ), ಕೊನಾರ್ಕ್ನ ಸೂರ್ಯ ದೇವಾಲಯ, ಆಗ್ರಾದ ತಾಜ್ಮಹಲ್ (ಮುಂದಿನ ಭಾಗ), ಗೋವಾದ ಪುರಾತನ ಚರ್ಚ್ ಹಾಗೂ ಕಾನ್ವೆಂಟ್ಸ್ (ಪಾದ್ರಿಗಳ ವಾಸ್ತವ್ಯದ ಕಟ್ಟಡ), ಅಜಂತಾ ಗುಹಾಲಯ ಹಾಗೂ ಗುಹಾಲಯದ ಪದ್ಮಪಾಣಿ ಚಿತ್ರವೂ ವಿವಿಧ ಮುಖ ಬೆಲೆಯ ಕರೆನ್ಸಿ ನೋಟುಗಳಲ್ಲಿ ಪ್ರಕಟವಾಗಲಿವೆ.

ನೋಟುಗಳಲ್ಲಿ ಸ್ಮಾರಕಗಳ ಚಿತ್ರಗಳನ್ನು ಅಳವಡಿಸುವ ಸಲುವಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮುಂಬೈನಲ್ಲಿರುವ ಆರ್ಬಿಐನ ಕರೆನ್ಸಿ ಆಡಳಿತ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರೊಂದಿಗೆ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಅಲ್ಲದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ (ಮಹಾ ನಿರ್ದೇಶಕ) ಅವರೊಂದಿಗೂ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿ ಯೋಜನೆಯನ್ನು ಅಂತಿಮಗೊಳಿಸಿದ್ದಾರೆ. ನಿಗದಿ ಮಾಡಿರುವ ಸ್ಮಾರಕಗಳ ಛಾಯಾಚಿತ್ರಗಳನ್ನು ಎಎಸ್ಐನ ಸಂಬಂಧಿಸಿದ ವಲಯ ಕಚೇರಿಗಳಿಂದ ಈಗಾಗಲೇ ತರಿಸಿಕೊಂಡಿದ್ದು, ಶೀಘ್ರದಲ್ಲಿಯೇ ರೂಪಾಯಿ ಕರೆನ್ಸಿ ನೋಟುಗಳ ಮೇಲೆ ವೈಭವ ಪೂರ್ಣ ಸ್ಮಾರಕಗಳು ನಲಿದಾಡಲಿವೆ.

ಚಲಿಸದ ರಥ ಚಲಾವಣೆಗೆ
ಹಂಪಿಯ ಕಲ್ಲಿನ ರಥ ವಿಜಯನಗರ ಸಾಮ್ರಾಜ್ಯದ ಅಪರೂಪದ ಸ್ಮಾರಕ. ಸೂಕ್ಷ್ಮ ಕೆತ್ತನೆಯಿಂದ ಕೂಡಿರುವ ಈ ಸ್ಮಾರಕ ಕಟ್ಟಿಗೆ ತೇರಿನ ಆಕಾರದಲ್ಲಿಯೇ ರೂಪುಗೊಂಡಿದೆ.

ವೈಷ್ಣವ ದೇವಾಲಯಗಳ ಎದುರು ‘ಗರುಡ’ನಿಗಾಗಿ ಒಂದು ಮಂಟಪ ನಿರ್ಮಿಸುವುದು ಪ್ರತೀತಿ. ಆದರೆ, ಹಂಪಿಯ ವಿಜಯ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ರಥದಲ್ಲಿಯೇ ಗರುಡನನ್ನು ಪ್ರತಿಷ್ಠಾಪಿಸಲಾಗಿದೆ.

ವಿಜಯನಗರ ಕಾಲದ ಯಾವ ಅರಸರ ಆಡಳಿತ ಅವಧಿಯಲ್ಲಿ ಕಲ್ಲಿನ ರಥ ನಿರ್ಮಾಣವಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಈವರೆಗೂ ಲಭ್ಯವಾಗಿಲ್ಲವಾದರೂ ಶ್ರೀ ಕೃಷ್ಣದೇವರಾಯ ಅವರ ಆಡಳಿತ ಕಾಲಕ್ಕಿಂತಲೂ ಪೂರ್ವದಲ್ಲಿಯೇ ನಿರ್ಮಾಣ ಆಗಿರಬಹುದು ಎಂಬುದು ಇತಹಾಸ ತಜ್ಞರ ಅಭಿಪ್ರಾಯ.

ಷಡ್ವರ್ಗ ವಿಮಾನ ವಾಸ್ತುಶಿಲ್ಪದ ಆಕಾರದಲ್ಲಿ ನಿರ್ಮಾಣವಾಗಿರುವ ಕಲ್ಲಿನ ರಥ, ಅಧಿಷ್ಟಾನ, ಪಾದ, ಪ್ರಸ್ತರ, ಗ್ರೀವ, ಶಿಖರ ಹಾಗೂ ಸ್ತೂತಿ ಭಾಗಗಳಿಂದ ಕೂಡಿದೆ. ಗಾರೆ ಮತ್ತು ಇಟ್ಟಿಗೆಯಿಂದ ನಿರ್ಮಾಣಗೊಂಡಿದ್ದ ರಥ ಶಿಖರದ ಭಾಗ ಕಾಲಾಂತರದಲ್ಲಿ ಬಿದ್ದು ಹೋಗಿದೆ. ರಥದ ಚಕ್ರಗಳು ಏಕಶಿಲೆಯಿಂದ ನಿರ್ಮಿತವಾಗಿದ್ದು, ಇವುಗಳು ಚಲನ ಶೀಲತೆ ಹೊಂದಿರುವುದು ವಿಶೇಷ.

ಯಾವ ನೋಟಿನಲ್ಲಿ ಯಾವ ಸ್ಮಾರಕ
₹10 ಹಂಪಿ ಕಲ್ಲಿನ ರಥ
₹20 ದೆಹಲಿ ಕೆಂಪುಕೋಟೆ (ರಾಷ್ಟ್ರಧ್ವಜ ಸಮೇತ)
₹50 ಕೊನಾರ್ಕ್ ಸೂರ್ಯ ದೇವಾಲಯ
₹100 ಆಗ್ರಾ ತಾಜ್ ಮಹಲ್ (ಎದುರು ಭಾಗ)
₹500 ಗೋವಾ ಚರ್ಚ್ ಮತ್ತು ಕನ್ವೆಂಟ್ಸ್(ಪಾದ್ರಿಗಳ ವಾಸ್ತವ್ಯದ ಕಟ್ಟಡ)
₹1000 ಅಜಂತಾದ ಗುಹಾಲಯ ಹಾಗೂ ಪದ್ಮಪಾಣ ಚಿತ್ರ

ಹೆಮ್ಮೆಯ ವಿಷಯ
ಹಂಪಿ ಕಲ್ಲಿನ ರಥದ ಚಿತ್ರವನ್ನು₹10ರ ನೋಟಿನಲ್ಲಿ ಮುದ್ರಿಸಲು ಆರ್ಬಿಐ ಮುಂದಾಗಿರುವುದು ಒಂದು ಹೆಮ್ಮೆಯ ವಿಷಯ. ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿರುವ ಈ ಸ್ಮಾರಕಕ್ಕೆ ಇದರಿಂದ ಮತ್ತಷ್ಟು ಮೆರಗು ದೊರೆಯಲಿದೆ. ಈಗಾಗಲೇ ಕಲ್ಲಿನ ರಥದ ವಿವಿಧ ಭಂಗಿಗಳ ಚಿತ್ರಗಳನ್ನು ಕಳುಹಿಸಲಾಗಿದೆ.
-ಎನ್.ಸಿ.ಪ್ರಕಾಶ್ ನಾಯಕಂಡ
ಡೆಪ್ಯುಟಿ ಸೂಪರಿಂಟೆಂಡೆಂಟ್,
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ,
ಹಂಪಿ ಕಿರು ವಲಯ

ಜವಾಬ್ದಾರಿ ಪ್ರದರ್ಶನ
ದೇಶದ ಇತಿಹಾಸ, ಪರಂಪರೆ ಉಳಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಹಂಪಿ ಕಲ್ಲಿನ ರಥದ ಸ್ಮಾರಕವನ್ನು ₹10 ಕರೆನ್ಸಿ ನೋಟಿನಲ್ಲಿ ಮುದ್ರಿಸುವ ಮೂಲಕ ಆರ್ಬಿಐ ತನ್ನ ಜವಾಬ್ದಾರಿ ಪ್ರದರ್ಶಿಸಿದೆ. ವಿಜಯನಗರ ಸಾಮ್ರಾಜ್ಯದ ಸ್ಮಾರಕಕ್ಕೆ ಈ ಗೌರವ ಸಲ್ಲುತ್ತಿರುವುದು ಒಂದು ಹೆಮ್ಮೆಯ ವಿಷಯ.
-ಡಾ. ಸಿ.ಎಸ್.ವಾಸುದೇವನ್,
ಪ್ರಾಧ್ಯಾಪಕರು-ಇತಿಹಾಸ ತಜ್ಞರು,
ಹಂಪಿ ಕನ್ನಡ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.