ಮಂಗಳವಾರ, ಫೆಬ್ರವರಿ 18, 2020
26 °C

ನೌಕರರ ಕಡ್ಡಾಯ ನೋಂದಣಿ ರಾಯಭಾರ ಕಚೇರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಧಾಬಿ (ಪಿಟಿಐ/ಐಎಎನ್‌ಎಸ್‌): ಭಾರತೀಯರನ್ನು ಕೆಲಸಕ್ಕೆ ನೇಮಿಸಿ­ಕೊಳ್ಳುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಆನ್‌ಲೈನ್‌ ಮೂಲಕ ತನ್ನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿ­ಕೊ­ಳ್ಳ­­ಬೇಕು ಎಂದು ಯುಎಇಯಲ್ಲಿರುವ ಭಾರತ ರಾಯಭಾರ ಕಚೇರಿ ಸೂಚಿಸಿದೆ.

ಈ ಸಂಬಂಧ ಭಾರತ ರಾಯಭಾರ ಕಚೇರಿ ಪ್ರಕಟಣೆ ಹೊರ­ಡಿಸಿದ್ದು, ತನ್ನ ವೆಬ್‌ಸೈಟ್‌ www.emigrate.gov.in ನಲ್ಲಿ ನೋಂದಣಿ ಮಾಡಿಕೊಂಡ ಆನಂತರವೇ ಕೆಲಸಗಾರರ ನೇರ ನೇಮ­ಕಕ್ಕೆ ಇಲ್ಲವೇ ನೇಮಕಾತಿ ದಲ್ಲಾಳಿಗಳಿಗೆ ಅನುಮತಿ ನೀಡಲಾಗುವುದು ಎಂದಿದೆ.

ಈ ಹೊಸ ವ್ಯವಸ್ಥೆಯನ್ನು ವಿವಿಧ ಹಂತಗಳಲ್ಲಿ ಜಾರಿ ಮಾಡಲಾಗುವುದು. 50ರಿಂದ 150 ಭಾರತೀಯ ಕೆಲಸ­ಗಾರ­ರನ್ನು ನೇಮಿಸಿಕೊಳ್ಳುವವರು ಜೂನ್‌ 30ರ ಒಳಗೆ, 20ರಿಂದ 50 ಕೆಲಸ­ಗಾರ­ರನ್ನು ನೇಮಿಸಿಕೊಳ್ಳುವವರು ಜುಲೈ 31ರ ಒಳಗೆ ಹಾಗೂ 20ಕ್ಕಿಂತ ಕಡಿಮೆ ಕೆಲಸಗಾರರನ್ನು ನೇಮಿಸಿಕೊಳ್ಳು­ವವರು ಆಗಸ್ಟ್‌ 31ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದೆ. ನೋಂದಣಿ ಮಾಡುವಾಗ ಕೆಲಸದ ಅವಧಿ, ಷರತ್ತುಗಳು, ಇತರೆ ವಿವರ ದಾಖಲಿಸಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)