ಸೋಮವಾರ, ಜನವರಿ 27, 2020
28 °C

ನೌಕರರ ಸಂಘದಿಂದ ಅಧಿಕಾರಿಗಳಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ ವಿಜೇತ ಯಳಂದೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ವಿಜಯ ಹಾಗೂ ಗಿರಿಜನರ ಸೇವೆಯಲ್ಲಿ ನಿರತರಾಗಿರುವ ಡಾ.ಎನ್‌. ಗೋಪಾಲ್‌ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಜಿಲ್ಲಾ ಸಂಘದ ಅಧ್ಯಕ್ಷ ಆರ್. ರಾಚಪ್ಪ ಮಾತನಾಡಿ, ‘ವಿಜಯ ಯಳಂದೂರು ಪಟ್ಟಣ ಪಂಚಾ ಯಿತಿಯ ಮುಖ್ಯಾಧಿಕಾರಿ ಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಸನ್ಮಾನ ಸ್ವೀಕರಿಸಿದ ವಿಜಯ ಮಾತನಾಡಿದರು.ಗೋಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ರಾಜ್ಯ ಪರಿಷತ್ ಸದಸ್ಯ  ಜಿ.ಬಿ. ಮಹೇಶ್, ಖಜಾಂಚಿ  ಆರ್. ಪ್ರಭುರಾಜ್, ಉಪಾಧ್ಯಕ್ಷರಾದ ಬಿ. ಮಹದೇವಯ್ಯ, ಪರಮೇಶ್ವರಪ್ಪ, ಶಾಂತಮ್ಮ, ಸಿದ್ದರಾಜು,  ಎಚ್.ವಿ. ನಾಗರಾಜು, ಎಸ್. ನೇತ್ರಾವತಿ, ಸಹ ಕಾರ್ಯದರ್ಶಿ ಕೆ. ಬಸವರಾಜು, ಸಂಘಟನಾ ಕಾರ್ಯದರ್ಶಿ ಎಂ. ಪುಟ್ಟಮಾದಯ್ಯ ಹಾಜರಿದ್ದರು.

ಪ್ರತಿಕ್ರಿಯಿಸಿ (+)