ಶುಕ್ರವಾರ, ಮೇ 7, 2021
22 °C

ನ್ಯಾಟೊ ಪಡೆ ವಾಹನ ಸಂಚಾರ: ಪಾಕ್ ತಗಾದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್(ಐಎಎನ್‌ಎಸ್): ಆಫ್ಘಾನಿಸ್ತಾನದಲ್ಲಿಯ ನ್ಯಾಟೊ ಪಡೆಗಳಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಸೇನೆಯ ಭಾರಿ ಸರಕು  ವಾಹನಗಳು ಸಂಚರಿಸಿದ್ದರಿಂದ ರಾಷ್ಟ್ರದ ರಸ್ತೆಗಳು ಹಾಳಾಗಿ ಸುಮಾರು ನೂರು ಶತಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಪಾಕಿಸ್ತಾನ ಅಸಮಾಧಾನ ವ್ಯಕ್ತಪಡಿಸಿದೆ.



ಈ ವಿಚಾರವನ್ನು ಅಮೆರಿಕದ ಗಮನಕ್ಕೆ ತರಲಾಗಿದ್ದು, ಇದುವರೆಗೂ ಪರಿಹಾರದ ಭರವಸೆ ದೊರಕಿಲ್ಲ ಎಂದು ಸಂಪರ್ಕ ಸಚಿವ ಅರಬಾಬ್ ಅಲಂಗಿರ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇನ್ನು ಮುಂದೆ ನ್ಯಾಟೊ ಪಡೆಗಳಿಗೆ ಪಾಕಿಸ್ತಾನದ ರಸ್ತೆಗಳನ್ನು ಬಳಸಲು ಅವಕಾಶ ಕೊಟ್ಟರೆ ರಸ್ತೆ ತೆರಿಗೆ ವಸೂಲಿ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.